ಬೆಂಗಳೂರು: ಸಂಕ್ರಾಂತಿ (Sankranti) ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ತಾಳಗುಪ್ಪ (Yesvantpur-Talaguppa Train) ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06585 ಯಶವಂತಪುರ-ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ಜ.13ರ (ಮಂಗಳವಾರ) ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 04:45ಕ್ಕೆ ತಾಳಗುಪ್ಪ ತಲುಪಲಿದೆ. ಇದರ ಜೋಡಿ ರೈಲು, ರೈಲು ಸಂಖ್ಯೆ 06586 ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಜ.14ರ (ಬುಧವಾರ) ಬೆಳಗ್ಗೆ 10ಕ್ಕೆ ತಾಳಗುಪ್ಪದಿಂದ ಹೊರಟು, ಅಂದೇ ಸಂಜೆ 05:15ಕ್ಕೆ ಯಶವಂತಪುರ ತಲುಪಲಿದೆ. ಇದನ್ನೂ ಓದಿ: ಗವಿಮಠ ಜಾತ್ರೆಯ ಪ್ರಸಾದದಲ್ಲಿ ವಿಶೇಷ – 2 ಲಕ್ಷಕ್ಕೂ ಹೆಚ್ಚು ಹಪ್ಪಳ ವಿತರಣೆ
ಈ ವಿಶೇಷ ರೈಲು ಪ್ರಥಮ ದರ್ಜೆ ಎಸಿ (1), ಎಸಿ ಟು ಟೈರ್ (2), ಎಸಿ ತ್ರೀ-ಟೈರ್ (6), ಸ್ಲೀಪರ್ ಕ್ಲಾಸ್ (8), ಜನರಲ್ ಸೆಕೆಂಡ್ ಕ್ಲಾಸ್ (3) ಮತ್ತು ಎಸ್‌ಎಲ್‌ಆರ್/ಡಿ (2) ಬೋಗಿಗಳು ಸೇರಿದಂತೆ 22 ಬೋಗಿಗಳನ್ನು ಒಳಗೊಂಡಿರುತ್ತದೆ.
ಅದೇ ರೀತಿ, ರೈಲು ಸಂಖ್ಯೆ 06587 ಯಶವಂತಪುರ-ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ಜ.23ರ (ಶುಕ್ರವಾರ) ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 04:45ಕ್ಕೆ ತಾಳಗುಪ್ಪ ತಲುಪಲಿದೆ. ಇದರ ಜೋಡಿ ರೈಲು, ರೈಲು ಸಂಖ್ಯೆ 06588 ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಜ.24 ರ (ಶನಿವಾರ) ಬೆಳಗ್ಗೆ 10ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 05:15 ಕ್ಕೆ ಯಶವಂತಪುರ ತಲುಪಲಿದೆ.
ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಸಂಚರಿಸುವಾಗ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ- ರಾಜ್ಯವೇ ತಲೆ ತಗ್ಗಿಸೋ ಘಟನೆ: ವಿಜಯೇಂದ್ರ
ಈ ವಿಶೇಷ ರೈಲು ಪ್ರಥಮ ದರ್ಜೆ ಕಮ್ ಎಸಿ ಟು ಟೈರ್ (1), ಎಸಿ ತ್ರೀ-ಟೈರ್ (2), ಸ್ಲೀಪರ್ ಕ್ಲಾಸ್ (10), ಜನರಲ್ ಸೆಕೆಂಡ್ ಕ್ಲಾಸ್ (5) ಮತ್ತು ಎಸ್‌ಎಲ್‌ಆರ್/ಡಿ (2) ಬೋಗಿಗಳು ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ. ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಲಾಭವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ.

