ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮಾನ್‍ಸೂನ್ ಕಾಲದಲ್ಲಿ ಪ್ರವಾಸಿಗರಿಗೆ ಸಿಗಂಧೂರು-ಜೋಗ ಜಲಪಾತ- ಶಿವನಸಮುದ್ರ (ಗಗನಚುಕ್ಕಿ ಹಾಗೂ ಭರಚುಕ್ಕಿ) ಹಾಗೂ ತಲಕಾಡು ಪ್ರವಾಸಿ ತಾಣಗಳಿಗೆ ವಿಶೇಷ ಪ್ರವಾಸವನ್ನು ಆಯೋಜಿಸಿದೆ.
ಸಿಗಂಧೂರು-ಜೋಗ ಜಲಪಾತ ಪ್ರವಾಸ: 2 ರಾತ್ರಿ/ ಒಂದು ದಿನದ ಪ್ರವಾಸ
ಈ ಪ್ರವಾಸದಲ್ಲಿ ನಿಗಮದ ಬಸ್ ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 4.30ಕ್ಕೆ ಸಾಗರ ತಲುಪಲಿದೆ. ಸಿಗಂಧೂರಿಗೆ ಭೇಟಿ ನೀಡಿ, ಸಿದ್ಧಪಡಿಸಿದ ಚೌಡೇಶ್ವರಿ ದೇವಿ ದರ್ಶನ ಏರ್ಪಡಿಸಲಾಗುವುದು. ಬಳಿಕ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಭೇಟಿ ನೀಡಲಾಗುವುದು. ಇದಲ್ಲದೆ, ಶರಾವತಿ ಸಾಹಸ ಶಿಬಿರಕ್ಕೆ ಭೇಟಿ ನೀಡಲಾಗುವುದು. ಈ ಪ್ರವಾಸದಲ್ಲಿ ಪ್ರತಿ ವ್ಯಕ್ತಿಗೆ 2,150 ರೂ. ಶುಲ್ಕ ಇರಲಿದ್ದು, ಪ್ರತಿ ಶುಕ್ರವಾರ ಮತ್ತು ಶನಿವಾರ ಪ್ರವಾಸ ಆಯೋಜನೆಗೊಳ್ಳುತ್ತದೆ.
Advertisement
Advertisement
ಶಿವನ ಸಮುದ್ರ ಮತ್ತು ತಲಕಾಡು ಪ್ರವಾಸ: ಒಂದು ದಿನದ ಪ್ರವಾಸ
ಈ ಪ್ರವಾಸವು ಬೆಂಗಳೂರಿನಿಂದ ಆಂರಭಗೊಳ್ಳಲಿದ್ದು, ಬೆಳಗ್ಗೆ 7 ಗಂಟೆಗೆ ಯಶವಂತಪುರ ಟಿಟಿಎಂಸಿ ಬಸ್ ನಿಲ್ದಾಣದಿಂದ ಹೊರಟು, ಬೆಳಗ್ಗೆ 11 ಗಂಟೆಗೆ ಗಗನಚುಕ್ಕಿ ಜಲಪಾತವನ್ನು ತಲುಪುತ್ತದೆ. ಅಲ್ಲಿಂದ ಭರಚುಕ್ಕಿಯ ಮಧ್ಯರಂಗ ದೇವಸ್ಥಾನಕ್ಕೆ ಭೇಟಿ ನೀಡಿ, ಅದೇ ದಿನ ರಾತ್ರಿ 9 ಗಂಟೆಗೆ ಬೆಂಗಳೂರು ತಲುಪಲಿದೆ. ಈ ಪ್ರವಾಸದ ದರ ಪ್ರತಿ ವ್ಯಕ್ತಿಗೆ 800 ರೂ. ಆಗಲಿದ್ದು, ಪ್ರವಾಸವು ಪ್ರತಿ ಶನಿವಾರ ಮತ್ತು ಭಾನುವಾರ ಆಯೋಜನೆಗೊಳ್ಳುತ್ತದೆ..
Advertisement
ಪ್ರವಾಸದ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್‍ಸೈಟ್ www.kstdc.co ಕ್ಕೆ ಭೇಟಿ ನೀಡಬಹುದು. ಮೊಬೈಲ್ ಸಂಖ್ಯೆ 89706 50070 / 89706 500725 ಗಳನ್ನು ಸಂಪರ್ಕಿಸಬಹುದು.