ಅಪ್ಪು ಬೇಡವೆಂದ ಸಾಂಗ್ ಮತ್ತೆ ಪ್ರೇಕ್ಷಕರ ಮುಂದೆ – ಯಾವುದು ಈ ಸಾಂಗ್?

Public TV
2 Min Read
puneeth 4

ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಂದು ದೈಹಿಕವಾಗಿ ಇಲ್ಲ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ, ಸಿನಿಪ್ರಿಯರಲ್ಲಿ ಅಪ್ಪು ಎಂದೂ ಅಜರಾಮರಾಗಿರುತ್ತಾರೆ. ಅಪ್ಪು ನೆನಪಿಗಾಗಿ ಸಾಹಿತ್ಯ ಬರೆದು ಹಾಡುವ ಮೂಲಕ ತಮ್ಮ ಅಭಿಮಾನವನ್ನು ಅಭಿಮಾನಿಗಳು ಸೇರಿದಂತೆ ಸೆಲೆಬ್ರೆಟಿಗಳು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಹಿಂದೊಮ್ಮೆ ಅಪ್ಪು ಬೇಡ ಎಂದಿದ್ದ ಸಾಂಗ್ ಈಗ ಮತ್ತೆ ರಿಲೀಸ್ ಆಗುತ್ತಿದೆ.

ಅಪ್ಪುಗಾಗಿ ಡ್ಯಾನ್ಸ್ ವಿತ್ ಅಪ್ಪು.. ಪವನ್ ಒಡೆಯರ್ ವಿಶೇಷ ಕಾಣಿಕೆ - chitraloka.com | Kannada Movie News, Reviews | Image

ಅಪ್ಪು ಹುಟ್ಟುಹಬ್ಬಕ್ಕೆ ಇಡೀ ಚಿತ್ರರಂಗವೇ ಕಾಯುತ್ತಿದೆ. ಇವರ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಸೇರಿ ಸೆಲೆಬ್ರೆಟಿಗಳು ತುಂಬಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಪ್ಪುಗೆ ನಟನೆ ಜೊತೆಗೆ ಹಾಡು, ಡ್ಯಾನ್ಸ್ ಎಂದರೆ ಸಖತ್ ಇಷ್ಟವಿತ್ತು. ಈ ಹಿನ್ನೆಲೆ ಅಪ್ಪುಗಾಗಿ ಅಭಿಮಾನಿಗಳು ಅವರು ಅಗಲುದಾಗಿನಿಂದ ಇಲ್ಲಿವರೆಗೂ ಹೊಸ-ಹೊಸ ಸಾಂಗ್ ಬರೆದು ರಿಲೀಸ್ ಮಾಡುತ್ತಿದ್ದಾರೆ. ಆದರೆ ಈಗ ಅಪ್ಪು ಬೇಡ ಎಂದಿದ್ದ ಸಾಂಗ್ ರಿಲೀಸ್ ಆಗುತ್ತಿದೆ. ಇದನ್ನೂ ಓದಿ: ಪುನೀತ್ ಮಾಡಬೇಕಾದ ಸಿನಿಮಾ ಈಗ ವಿರಾಟ್ ಪಾಲು! – ಕೊನೆಗೂ ಈಡೇರಲಿಲ್ಲ ದಿನಕರ್ ಕನಸು!

ಈ ಸಾಂಗ್ ಅಪ್ಪು ನಟನೆಯ ‘ನಟಸಾರ್ವಭೌಮ’ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅಪ್ಪು ಸಾಂಗ್‍ನಲ್ಲಿ ಹೆಚ್ಚು ತನ್ನ ಬಗ್ಗೆಯೇ ಹೇಳಿದ್ದು, ತುಂಬಾ ವಿಜೃಂಭಿಸಿಕೊಂಡು ಬರೆದಿದ್ದರಿಂದ ಸಾಂಗ್ ಬಿಡುಗಡೆ ಮಾಡುವುದು ಬೇಡ ಎಂದು ಮುಜುಗರಪಟ್ಟಿದ್ದರು.

ಈ ವಿಶೇಷ ಸಾಂಗ್‍ನನ್ನು ಪವನ್ ಒಡೆಯರ್ ರಚಿಸಿದ್ದು, ಪವರ್ ಸ್ಟಾರ್ ಅಭಿಮಾನಿಗಳೆಲ್ಲ ಅಪ್ಪಲಿ ಎಂದೇ ಸಾಂಗ್ ರೆಡಿಯಾಗಿತ್ತು. ಆದರೆ ಅಂದು ಅಪ್ಪು ಈ ಸಾಂಗ್ ಬೇಡ ಎಂದಿದ್ದರು. ಈಗ ಈ ಸಾಂಗ್ ರಿಲೀಸ್ ಆಗುತ್ತಿದೆ.

ನಟ ಸಾರ್ವಭೌಮ' ಚಿತ್ರೀಕರಣ ವೇಳೆ ಪ್ರತಿಯೊಬ್ಬರೂ ಅತ್ಯುತ್ಸಾಹದಿಂದ ಕೆಲಸ: ಪವನ್ ಒಡೆಯರ್- Kannada Prabha

ಮಾ.17 ರಿಲೀಸ್ ಆಗುವ ‘ಜೇಮ್ಸ್’ ಸಿನಿಮಾಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಮುನ್ನವೇ ಸಾಂಗ್ ಬಿಡುಗಡೆ ಮಾಡುಲು ಪವನ್ ಫುಲ್ ರೆಡಿಯಾಗಿದ್ದಾರೆ. ಇದೇ ಮಾ.15ರಂದು ಈ ಸಾಂಗ್ ರಿಲೀಸ್ ಆಗುತ್ತೆ ಎಂದು ಘೋಷಣೆಯನ್ನು ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರದಲ್ಲಿ ನಿಮಗೂ ಸಿಗಲಿದೆ ಅವಕಾಶ– News18 Kannada

ಈ ಸಾಂಗ್ ಝಲಕ್ ಮೊದಲೇ ರಿಲೀಸ್ ಆಗಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಾಂಗ್‍ನಲ್ಲಿ ಪುನೀತ್ ರಾಜ್‍ಕುಮಾರ್, ರಚಿತಾ ರಾಮ್, ಪರಮೇಶ್ವರನ್ ಮತ್ತು ಚಿಕ್ಕಣ್ಣ ಸೇರೆ ಬಹುದೊಡ್ಡ ತಾರಾಗಣವಿದೆ. ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್! 

Share This Article
Leave a Comment

Leave a Reply

Your email address will not be published. Required fields are marked *