ತಮಿಳು ಚಿತ್ರರಂಗದಲ್ಲಿ ಮಾಸ್ಟರ್ (Master) ಮಹೇಂದ್ರನ್ (Mahendran) ಜನಪ್ರಿಯ ಹೆಸರು. ಕೇವಲ ಮೂರು ವರ್ಷದವರಿದ್ದಾಗ ಬಣ್ಣ ಹಚ್ಚಿದ ಮಹೇಂದ್ರನ್, ಆ ನಂತರ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡವರು. ತಮ್ಮ ಅಭಿನಯದಿಂದ ನಾಲ್ಕು ಬಾರಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವರು. ‘ವಿಳಾ’ ಎಂಬ ಚಿತ್ರದ ಮೂಲಕ ಹೀರೋ ಆದ ಮಹೇಂದ್ರನ್, ಇದೀಗ ಮೊದಲ ಬಾರಿಗೆ ‘ನೀಲಕಂಠ’ (Nilakantha) ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದಾರೆ.
ಎಲ್.ಎಸ್. ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಶ್ರವಣ್ ಜಿ ಕುಮಾರ್ ಎಂ.ಶ್ರೀನಿವಾಸುಲು ಮತ್ತು ಡಿ.ವೇಣುಗೋಪಾಲ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಆಕ್ಷನ್ ಡ್ರಾಮಾ ಆಗಿದ್ದು, ನಾ. ಅರುಣ್ ಕಾರ್ತಿಕ್ ಬರೆದು ನಿರ್ದೇಶಸಿದ್ದಾರೆ. ಈ ಚಿತ್ರವನ್ನು ಸಂಪೂರ್ಣವಾಗಿ ಹಳ್ಳಿಯಲ್ಲಿ ಚಿತ್ರೀಕರಿಸಲಾಗಿರುವುದು ವಿಶೇಷ. ಇಂದು ಮಹೇಂದ್ರನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ‘ಆಕು ಪಾಕು’ ಎಂಬ ಹಾಡನ್ನು ಹುಟ್ಟುಹಬ್ಬರ ಕಾಣಿಕೆಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ:ಅನಾರೋಗ್ಯದ ಬಳಿಕ ಬಾಲಿವುಡ್‌ನತ್ತ ಮುಖ ಮಾಡಿದ ಸಮಂತಾ
ಮಹೇಂದ್ರನ್ ಜೊತೆಗೆ ಯಶ್ನಾ ಚೌಧರಿ ಮತ್ತು ನೇಹಾ ಪಠಾಣ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಸ್ನೇಹಾ ಉಲ್ಲಾಳ್ ಸಹ ಇದ್ದು, ರಾಮ್ಕಿ, ಬಬ್ಲೂ ಪೃಥ್ವಿರಾಜ್, ಶುಭಲೇಖಾ ಸುಧಾಕರ್, ಸತ್ಯ ಪ್ರಕಾಶ್, ಚಿತ್ರಮ್ ಸೀನು, ಕನ್ನಡದ ಜ್ಯೋತಿ ರೈ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ನೀಲಕಂಠ’ ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k