ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

Public TV
1 Min Read
Saree For Sita from surat

ಗಾಂಧಿನಗರ: ದೇಶದ ಪ್ರಮುಖ ಜವಳಿ ಕೇಂದ್ರವಾಗಿರುವ ಗುಜರಾತ್‌ನ (Gujarat) ಸೂರತ್ (Surat) ನಗರದಲ್ಲಿ ಅಯೋಧ್ಯೆಯಲ್ಲಿ (Ayodhya) ನೆಲೆಸಿರುವ ಸೀತಾಮಾತೆಗೆ (Sita Mata) ಅರ್ಪಿಸಲು ವಿಶೇಷ ಸೀರೆಯೊಂದು (Saree) ಸಿದ್ಧವಾಗಿದೆ. ಈ ಸೀರೆಯನ್ನು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ (Ram Mandir) ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ಕಳುಹಿಸಲಾಗುವುದು ಎಂದು ಜವಳಿ ಉದ್ಯಮಿ ಲಲಿತ್ ಶರ್ಮಾ (Lalith Sharma)ತಿಳಿಸಿದ್ದಾರೆ.

ಸೀರೆಯ ವಿಶೇಷತೆಯೇನು?
ಸೀತಾಮಾತೆಗೆಂದು ತಯಾರಿಸಿರುವ ಈ ಸೀರೆಯಲ್ಲಿ ಭಗವಾನ್ ರಾಮನ ಚಿತ್ರಗಳು ಮತ್ತು ಅಯೋಧ್ಯೆಯ ದೇವಾಲಯದ ಮುದ್ರಣವಿದೆ. ಸೀರೆ ತಯಾರಿಯ ಮೊದಲ ಕಚ್ಚಾ ವಸ್ತುವಿನ ತುಣುಕನ್ನು ಸೂರತ್‌ನ ಸೀತಾ ದೇವಿಯ ದೇವಾಲಯಕ್ಕೆ ಅರ್ಪಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಚಿನ್ನದ ಬಾಗಿಲು – ಇನ್ನು 3 ದಿನದಲ್ಲಿ 13 ಬಾಗಿಲು ಅಳವಡಿಕೆ

ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಭೌತಿಕವಾಗಿ ಇರಲು ಸಾಧ್ಯವಾಗದ ಭಕ್ತರು ತಮ್ಮದೇ ಆದ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಂಪರ್ಕ ಸಾಧಿಸಲು ಬಯಸಿದ ಕಾರಣ ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಲಲಿತ್ ಶರ್ಮ ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕಾಗಿ 30 ವರ್ಷಗಳಿಂದ ‘ಮೌನ ವ್ರತ’ – ಒಂದು ಮಾತೂ ಆಡದೇ ಇದ್ದ ಮಹಿಳೆ ಮುಖದಲ್ಲಿ ಮಂದಹಾಸ

ನಾವು ಭಗವಾನ್ ರಾಮನ ಚಿತ್ರಗಳು ಮತ್ತು ಅಯೋಧ್ಯೆ ದೇವಸ್ಥಾನವನ್ನು ಮುದ್ರಿಸಿದ ವಿಶೇಷ ಸೀರೆಯನ್ನು ಸಿದ್ಧಪಡಿಸಿದ್ದೇವೆ. ನಾವು ಅದನ್ನು ಇಲ್ಲಿ ನೆಲೆಸಿರುವ ಸೀತಾಮಾತೆಯ ದೇವಸ್ಥಾನದಲ್ಲಿ ಅರ್ಪಿಸಿದ್ದೇವೆ. ಬಳಿಕ ಈ ಸೀರೆಯನ್ನು ಅಯೋಧ್ಯೆಯ ರಾಮಮಂದಿರಕ್ಕೆ ಕಳುಹಿಸುತ್ತೇವೆ. ಬೇಡಿಕೆ ಬಂದರೆ ಸೀತಾಮಾತೆ ನೆಲೆಸಿರುವ ಎಲ್ಲಾ ರಾಮನ ದೇವಾಲಯಗಳಿಗೆ ನಾವು ಅದನ್ನು ಉಚಿತವಾಗಿ ಕಳುಹಿಸುತ್ತೇವೆ ಎಂದು ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್‌

Share This Article