ಬೆಂಗಳೂರು: ಭಾರತ, ಪಾಕಿಸ್ತಾನ (Ind vs Pak) ಮಾತ್ರವಲ್ಲ ಇಡೀ ವಿಶ್ವವೇ ಇಂದಿನ ಹೈ ವೋಲ್ಟೇಜ್ ಮ್ಯಾಚ್‌ಗಾಗಿ ಕಾಯ್ತಿದೆ. ಇಂದು ದುಬೈ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್ ಮ್ಯಾಚ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ (Cricket Fans) ಫೈನಲ್ ಮ್ಯಾಚ್ ರೀತಿ ಫೀಲ್ ಕೊಡ್ತಿದೆ. ಟ್ರೋಫಿಗಿಂತ ಇವತ್ತು ಬದ್ಧವೈರಿಗಳ ವಿರುದ್ಧ ಜಯಭೇರಿ ಬಾರಿಸೋದು ಮುಖ್ಯ ಅನ್ನೋದು ಕೋಟ್ಯಂತರ ಅಭಿಮಾನಿಗಳ ಆಶಯವಾಗಿದೆ. ಟೀಂ ಇಂಡಿಯಾ (Team India) ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ಇವತ್ತು ಮಧ್ಯಾಹ್ನ ಯಾವಾಗ ಆಗುತ್ತೋ, ಮ್ಯಾಚ್ ಯಾವಾಗ ಶುರುವಾಗುತ್ತೋ ಅಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಒಂದೇ ಒಂದು ಬಾಲ್ ಕೂಡ ಮಿಸ್ ಮಾಡ್ದೇ ನೋಡಬೇಕು, ಭಾರತ-ಪಾಕಿಸ್ತಾನದ ವಿರುದ್ಧ ಅಬ್ಬರಿಸಿ ಬೊಬ್ಬಿರೋ ಆಟವನ್ನ ನೋಡಬೇಕು ಅಂತಾ ಎಲ್ಲರೂ ಕಾಯ್ತಿದ್ದಾರೆ. ಇದನ್ನೂ ಓದಿ: ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟಿದ್ದಕ್ಕೆ ಸಿಟ್ಟು; ಆಕೆಯ ಗಂಡನಿಗೆ ಇರಿದು ಹತ್ಯೆ ಮಾಡಿದ ಪಾಗಲ್ ಪ್ರೇಮಿ
ಇಂಡಿಯಾ ಪಾಕ್ ಮ್ಯಾಚ್ ಅಂದ್ರೇನೇ ವರ್ಲ್ಡ್ ಕಫ್ ಫೈನಲ್ ಮ್ಯಾಚ್ ಅನ್ನೋ ಫೀಲ್ ಇರುತ್ತೆ. ಇವತ್ತು ಭಾರತ ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಬೇಕು ಅನ್ನೋ ಬಯಕೆಯಿಂದ ಬ್ಯಾಟರಾಯನಪುರದ ಯುವಕರು ತಮ್ಮ ಗ್ರಾಮದೇವತೆಯ ಪೂಜೆ ಮಾಡಿದ್ದಾರೆ. ಮ್ಯಾಚ್‌ನಲ್ಲಿ ಭಾರತದ ಆಟಗಾರರು ಇನ್ನಷ್ಟು ಸ್ಟ್ರಾಂಗ್ ಆಗಿ ಆಡಲಿ, 2017ರ ಸೇಡನ್ನ ತೀರಿಸಿಕೊಳ್ಳಲಿ ಅನ್ನೋ ಆಸೆಯಿಂದ ಗ್ರಾಮದೇವತೆ ದೊಡ್ಡಮ್ಮ ಮಹೇಶ್ವರಮ್ಮ ದೇವಿಗೆ ಭಾರತ ಕ್ರಿಕೆಟ್ ತಂಡದ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ. ಭಾರತ ಗೆದ್ದೇ ಗೆಲ್ಲುತ್ತೆ ಅಂತಾ ಶುಭ ಹಾರೈಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿಗಾಗಿ ಇಂದು ಸಹ ನಗರದ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಗಾಳಿ ಆಂಜನೇಯ ದೇವಸ್ಥಾನ, ಅಣ್ಣಮ್ಮ ದೇವಸ್ಥಾನ ಸೇರಿ ವಿವಿಧ ಮೈದಾನಗಳಲ್ಲಿ ಭಾರತ ತಂಡ, ಆಟಗಾರರಿಗೆ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಆಘಾತ – ಪ್ರಾಕ್ಟೀಸ್ ವೇಳೆ ಕೊಹ್ಲಿಗೆ ಮೊಣಕಾಲು ಗಾಯ
ಒಟ್ಟಾರೆ ಇದು ಬರೀ ಈ ಯುವಕರ ಆಸೆಯಲ್ಲ, ಇಡೀ ಭಾರತೀಯರ ಆಸೆ ಕೂಡ ಆಗಿದೆ. ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲಿ, ಇಂದು ಪಾಕಿಸ್ತಾನವನ್ನ ಬಗ್ಗು ಬಡಿಯಲಿ.. ನಮ್ಮ ಕಡೆಯಿಂದಲೂ ಟೀಮ್ ಇಂಡಿಯಾಗೆ ಆಲ್ ದಿ ಬೆಸ್ಟ್. ಇದನ್ನೂ ಓದಿ: ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ – ಸೋತರೆ ಬಹುತೇಕ ಮನೆಗೆ