ಬೆಂಗಳೂರು: ನಗರದ ಕುಂಬಾರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿರುವಾಗ ವಿದ್ಯಾರ್ಥಿ ಉದಯ್ ಮಾತ್ರ ಸೈಲೆಂಟಾಗಿ ಕುಳಿತಿರುತ್ತಾನೆ. ಸದ್ಯ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಈತ ಕಳೆದ ಎರಡು ವರ್ಷದಿಂದ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾನೆ.
ಹೌದು. ಉದಯ್‍ನ ಎರಡೂ ಕಿವಿಗಳಲ್ಲಿ ಕಳೆದ ಎರಡು ವರ್ಷದಿಂದ ರಕ್ತ ಮಿಶ್ರಿತ ನೀರು ಬರುತ್ತದೆ. ಈ ಹುಡುಗನಿಗೆ ಏಕೆ ಹೀಗೆ ರಕ್ತ ಬರುತ್ತೆ ಅಂತ ಕೇಳಿದ್ರೆ ನಿಮ್ಗೂ ಶಾಕ್ ಆಗುತ್ತೆ. ಈ ಹುಡುಗ ಆಟವಾಡಿದ್ರೆ, ಜಾಸ್ತಿ ಓಡಾಡಿದ್ರೆ, ಏಕಾಏಕಿ ಯಾವುದಾದ್ರು ಒಂದು ಕಿವಿಯಿಂದ ರಕ್ತ ಸುರಿಯುತ್ತೆ. ಆಗ ಹುಡುಗನಿಗೆ ತಲೆ ನೋವು ಮತ್ತು ಕಿವಿ ನೋವು ಶುರುವಾಗಿ ಮಂಕಾಗಿ ಬಿಡುತ್ತಾನೆ.
Advertisement
ಶಾಲೆಯಲ್ಲಿ ಎಲ್ಲ ಮಕ್ಕಳೂಂದಿಗೆ ಆಟವಾಡುವ ಆಸೆ ಉದಯ್‍ದ್ದು. ಅದ್ರೆ ಆಟವಾಡಿದ್ರೆ ಎಲ್ಲಿ ಮತ್ತೆ ರಕ್ತ ಬರುತ್ತೆ ಅಂತ ಈತನನ್ನು ಶಾಲೆಯ ಶಿಕ್ಷಕರು ದೂರ ಇಡುತ್ತಾರೆ. ಮುಂಚೆ ಈತ ಒಂದು ಖಾಸಗಿ ಶಾಲೆಯಲ್ಲಿ ಓದುತ್ತಿದ್ದ. ಆದ್ರೆ ಈ ಸಮಸ್ಯೆಯ ಕಾರಣ ನೀಡಿ ಉದಯ್‍ನನ್ನ ಶಾಲೆಯಿಂದ ಹೊರಹಾಕಿದ್ದಾರೆ.
Advertisement
ಇನ್ನು ಉದಯ್‍ನ ಈ ಸಮಸ್ಯೆಯನ್ನ ವೈದ್ಯರ ಬಳಿ ತೋರಿಸಿದ್ರೆ ಯಾವ ಸಮಸ್ಯೆನೂ ಕಾಣಿಸ್ತಿಲ್ಲ, ಎಲ್ಲಾ ಸರಿ ಇದೆ ಅಂತ ಹೇಳುತ್ತಾರಂತೆ. ಮಗನ ಈ ಕಾಯಿಲೆಯ ಚಿಕಿತ್ಸೆಗಾಗಿ ಉದಯ್‍ನ ಪೋಷಕರು 60 ಸಾವಿರಕ್ಕೂ ಹೆಚ್ಚು ಹಣ ಖಾರ್ಚು ಮಾಡಿ, ನಾನಾ ಆಸ್ಪತ್ರೆಗೆ ಆಲೆದಿದ್ದಾರೆ, ಅದ್ರೆ ಯಾವುದೇ ಪ್ರಯೋಜನವಾಗಿಲ್ಲ. ಮಗುವಿನ ತಂದೆ ಕಾರು ಚಾಲಕರಾಗಿದ್ದು, ಅಪಘಾತವಾಗಿ ನಡೆದಡುವ ಸ್ಥಿತಿಯಲಿಲ್ಲ. ಒಟ್ಟಿನಲ್ಲಿ ಇದೀಗ ಪಬ್ಲಿಕ್ ಟವಿಯ ಬೆಳಕು ಕಾರ್ಯಕ್ರಮದ ಮೂಲಕ ವಿಭಿನ್ನ ವಿಚಿತ್ರ ಮತ್ತು ವಿಸ್ಮಯ ಕಾಯಿಲೆಗೆ ಸೂಕ್ತ ಚಿಕಿತ್ಸೆ ದೊರೆಯುವ ನಿರೀಕ್ಷೆಯಲ್ಲಿದ್ದಾರೆ ಉದಯ್ ಪೋಷಕರು.