ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವರ ಜಾತ್ರಾ ಮಹೋತ್ಸವ ಬುಧವಾರ ಅದ್ಧೂರಿಯಾಗಿ ನಡೆಯಿತು. ಮೀನುಗಾರರ ಆರಾಧ್ಯ ದೈವ ಎಂದೇ ಪ್ರಸಿದ್ಧಿ ಹೊಂದಿರುವ ದೇವಿಯ ಜಾತ್ರೆಯಲ್ಲಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ಭಾಗದ ಮೀನುಗಾರರ ಮುಖಂಡರು, ಬೋಟಿನ ಮಾಲೀಕರು ಹಾಗೂ ಮೀನುಗಾರರು ಒಟ್ಟಾಗಿ ಕಳೆದ 33 ದಿನಗಳಿಂದ ನಾಪತ್ತೆಯಾದವರು ಸುರಕ್ಷಿತವಾಗಿ ವಾಪಸ್ಸಾಗುವಂತೆ ದೇವಿಯಲ್ಲಿ ಬೇಡಿಕೊಂಡರು. ಮೀನುಗಾರರು ಎಲ್ಲಿದ್ದಾರೆ ಎನ್ನುವುದು ಇದುವರೆಗೂ ಪತ್ತೆಯಾಗಿಲ್ಲವಾಗಿದ್ದು, ಮೀನುಗಾರರು ಕುಟುಂಬಸ್ಥರು ಸಂಕಷ್ಟದಲ್ಲೇ ದಿನದೂಡುವಂತಾಗಿದೆ. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್
Advertisement
Advertisement
ಹೀಗಾಗಿ ಮೀನುಗಾರರ ಆರಾಧ್ಯ ದೈವ ಎನಿಸಿಕೊಂಡಿರುವ ಆ ದೇವಿ ಆದಷ್ಟು ಬೇಗ ಮೀನುಗಾರರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ವಾಪಸ್ಸಾಗುವಂತೆ ಮಾಡಲಿ ಎಂದು ಬೇಡಿಕೊಂಡರು. ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ದೇವಿಗೆ ವಿವಿಧ ಹರಕೆಗಳನ್ನು ಸಲ್ಲಿಸಿದರು. ಇದನ್ನೂ ಓದಿ: ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ
Advertisement
ಉಡುಪಿಯ ಬಾದರಘಡ ದ್ವೀಪದಲ್ಲಿರುವ ಮೀನುಗಾರ ಸಮಾಜದ ಆರಾಧ್ಯ ದೇವರು ಮಾಲ್ತಿದೇವಿಗೆ ಪೂಜೆ ಸಲ್ಲಿಸಿದ್ದರು. ಎಲ್ಲಾ ರೀತಿಯಲ್ಲೂ ಹುಡುಕಾಟ ನಡೆಸಿದರೂ ಈವರೆಗೆ ಮೀನುಗಾರರ ಸುಳಿವೇ ಇಲ್ಲ. ಈಗಾಗಲೇ ಕೊಸ್ಟ್ ಗಾರ್ಡ್ ಮತ್ತು ನೇವಿಯ ಸಹಾಯದಿಂದ ಹುಡುಕಾಟ ನಡೆಸಲಾಗಿದ್ದು, ಫಲಿತಾಂಶ ಮಾತ್ರ ಶೂನ್ಯ. ಹಾಗಾಗಿ ಇನ್ನು ನಮಗೆ ದೇವರೇ ಗತಿ ಎಂದು ಭಾವಿಸಿರುವ ಕಡಲಮಕ್ಕಳು ದೇವರ ಮೊರೆ ಹೋಗಿ ಅರ್ಚನೆ ಸಲ್ಲಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv