ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಆಗಸ್ಟ್ 14ರಂದು ಕಲಾವಿದರ ಸಂಘದಲ್ಲಿ ಸುಬ್ರಹ್ಮಣ್ಯ ಸರ್ಪ ಶಾಂತಿ ಹೋಮ ನಡೆಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಸಕಲ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ಶ್ರೀದೇವಿ ಹುಟ್ಟುಹಬ್ಬದಂದು ಬಾಯ್‌ಫ್ರೆಂಡ್ ಜೊತೆ ಜಾನ್ವಿ ಕಪೂರ್ ಟೆಂಪಲ್ ರನ್
ಚಿತ್ರರಂಗದ ಏಳಿಗೆಗಾಗಿ ಆ.14ರಂದು ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ಚಾಮರಾಜನಗರ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆಯಲಿದೆ. ನಾಳೆ ಬೆಳಗ್ಗೆ 7:30ರಿಂದ 11:30ರವರೆಗೆ ಗಣಯಾಗ, ಅಶ್ಲೇಷ ಬಲಿ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ಜರುಗಲಿದೆ. ಈ ವಿಶೇಷ ಪೂಜೆಯನ್ನು ಉಡುಪಿಯ ಪ್ರಕಾಶ್ ಅಣ್ಣಮ್ಮಯ್ಯ ಅವರು ಮಾಡಲಿದ್ದು, ಪೂಜೆಯ ಸಕಲ ಸಿದ್ಧತೆಯನ್ನು ನಟ ದೊಡ್ಡಣ್ಣ (Doddanna) ನೋಡಿಕೊಳ್ಳುತ್ತಿದ್ದಾರೆ.
ಅಂದಹಾಗೆ, ಆ.11ರಂದು ಕಲಾವಿದರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಕ್‌ಲೈನ್ ವೆಂಕಟೇಶ್ (Rockline Venkatesh) ಮಾತನಾಡಿದ, ಕೋವಿಡ್ ನಂತರ ಸಿನಿಮಾರಂಗದಲ್ಲಿ ಉಂಟಾದ ಸಮಸ್ಯೆಗಳನ್ನು ಎದುರಿಸಲು ಇಂಥದ್ದೊಂದು ಪೂಜೆ ಮಾಡಲು ಯೋಚಿಸಿದೆವು. ಆದರೆ, ಆಗಿರಲಿಲ್ಲ. ಕೋವಿಡ್ ನಂತರ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವಿನ ಘಟನೆಗಳು ನಡೆದಿದೆ. ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡವರು ಅಂತ ಯಾರೂ ಇಲ್ಲ. ಹೀಗಾಗಿ ನಾವು ದೇವರ ಮೊರೆ ಹೋಗುತ್ತಿದ್ದೇವೆ ಎಂದಿದ್ದಾರೆ.