ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ (Kukke Subramanya) ಇಂದು ಚಂದ್ರಯಾನ-3 ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಾಗರಪಂಚಮಿಯಂದು ಶ್ರೀ ಕ್ಷೇತ್ರದಲ್ಲಿ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲೆಂದು ಪ್ರಾರ್ಥಿಸಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಊರ ಹಿರಿಯರು ನಾಗದೇವರಿಗೆ ಹಾಲೆರೆದು ಮಹಾ ಪೂಜೆ, ಕಾರ್ತಿಕ ಪೂಜೆ ನೆರವೇರಿಸಿದರು.
Advertisement
Advertisement
ಭಾರತ ಚಂದ್ರಯಾನ-3 (Chandrayaan-3) ಕಾರ್ಯಾಚರಣೆಯ ಕೊನೆ ಹಂತದ ಭಾಗವಾಗಿ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಬೇರ್ಪಡಿಸುವ ಕಾರ್ಯ ಗುರುವಾರ ಯಶಸ್ವಿಯಾಗಿ ನಡೆದಿತ್ತು. ಈ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಇಸ್ರೋ ಯಶಸ್ವಿಗೊಳಿಸಿದೆ. ಆಗಸ್ಟ್ 23ರಂದು ಚಂದ್ರಯಾನ ನೌಕೆ ಚಂದ್ರನ ಮೇಲೆ ಇಳಿಯಲಿದೆ. ಇದನ್ನೂ ಓದಿ: ಚಂದ್ರನ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ರಷ್ಯಾದ ಲೂನಾ-25 ಲ್ಯಾಂಡರ್ ವಿಫಲ
Advertisement
Advertisement
ಇತ್ತ ಆಗಸ್ಟ್ 10 ರಂದು ರಷ್ಯಾ (Russia) ಲೂನಾ-25 ಗಗನ ನೌಕೆಯನ್ನು ಉಡಾವಣೆ ಮಾಡುವ ಮೂಲಕ ನಾಸಾ ಹಾಗೂ ಇತರ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿದಿತ್ತು. ಆಗಸ್ಟ್ 21 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ನಿರ್ಧರಿಸಲಾಗಿತ್ತು. ಸುಮಾರು 50 ವರ್ಷಗಳ ಬಳಿಕ ಉಡಾವಣೆ ಮಾಡಿದ ಮೊದಲ ಚಂದ್ರಯಾನ ನೌಕೆ ಲೂನಾ- 25,ಚಂದ್ರನಲ್ಲಿ ನಿಗದಿಯಲ್ಲಿ ಇಳಿಯುವ ಮುನ್ನ ಸೇರಬೇಕಾದ ಕಕ್ಷೆಯನ್ನು ಪ್ರವೇಶಿಸುವಲ್ಲಿ ವಿಫಲವಾಗಿದೆ.
Web Stories