ಶಿವಮೊಗ್ಗ: ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಜತೆ ಆಗಮಿಸಿ ವಿಶೇಷ ಪೂಜೆ ಮಾಡಿದ್ದಾರೆ.
ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬಿಎಸ್ ವೈ ಕಾಲ್ನಡಿಗೆಯಲ್ಲೇ ಮಠಕ್ಕೆ ಭೇಟಿ ನೀಡಿ ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement
Advertisement
ವಾಕಿಂಗ್ ಮೂಲಕ ಮತದಾನಕ್ಕೆ ಆಗಮಿಸಿದ ಬಿಎಸ್ ವೈ, ಪುತ್ರ, ಸೊಸೆಯರ ಜತೆ ಬಂದು ಶಿಕಾರಿಪುರದ ಆಡಳಿತ ಸೌಧದ ಬೂತ್ ನಂಬರ್ 132 ರಲ್ಲಿ ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ನವೆಂಬರ್ 6 ರ ನಂತರ ಕಾದು ನೋಡಿ. ಜೆಡಿಎಸ್, ಕಾಂಗ್ರೆಸ್ ನಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಅದರ ಪರಿಣಾಮ ಏನಾಗುತ್ತೆ ಅನ್ನೋದನ್ನ ನೋಡಿ. ಆದ್ರೆ ಸರ್ಕಾರ ಬಿದ್ದು ಹೋಗುತ್ತೆ ನಾನು ಹೇಳ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ರು.
Advertisement
ರಾಘವೇಂದ್ರ ಗೆಲ್ತಾರೆ, ಬಳ್ಳಾರಿ, ಜಮಖಂಡಿಯಲ್ಲಿಯೂ ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ ಅವರು, ಇದೇ ವೇಳೆ ಮಾಜಿ ಶಾಸಕ ಎಂ.ಪಿ ರವೀಂದ್ರ ನಿಧನಕ್ಕೆ ಸಂತಾಪ ಸೂಚಿಸಿದ್ರು. ನಿಧನ ಸುದ್ದಿ ಕೇಳಿ ನನಗೆ ದಿಗ್ಭ್ರಮೆಯಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಅಂತ ಹೇಳಿದ್ರು.
Advertisement
ಶಿವಮೊಗ್ಗವು ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಬಂಗಾರಪ್ಪ ಮಗ ಮಧು ಬಂಗಾರಪ್ಪ ನಡುವಿನ ಜಿದ್ದಿನ ಕಣವಾಗಿದೆ. ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳು ಯಡಿಯೂರಪ್ಪ ಕೋಟೆಯಲ್ಲಿ ಅಬ್ಬರಿಸಿದ್ರೆ, ಮೈತ್ರಿಕೂಟವನ್ನು ಸೋಲಿಸಲು ಯಡಿಯೂರಪ್ಪ ನೇತೃತ್ವದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿತ್ತು.
– ಶಿವಮೊಗ್ಗ ಲೋಕಸಭೆ ಲೆಕ್ಕಾಚಾರ
– ಒಟ್ಟು ಮತದಾರರು- 16,45,511
– ಪುರುಷರು- 8,27,111
– ಮಹಿಳೆಯರು-8,17,948
ಇನ್ನೈದಾರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿರುವ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ಆರಂಭವಾಗಿದೆ. ಜಿದ್ದಾಜಿದ್ದಿನಿಂದ ಕೂಡಿರುವ ಬಳ್ಳಾರಿ, ಶಿವಮೊಗ್ಗ, ಮಂಡ್ಯ ಕ್ಷೇತ್ರಗಳಲ್ಲಿ ಯಾರನ್ನ ಗೆಲ್ಲಿಸಬೇಕು ಅನ್ನೋದನ್ನ ನಿರ್ಧರಿಸಲು ಮತದಾರರು ಮತಗಟ್ಟೆಗಳತ್ತ ಬರುತ್ತಿದ್ದಾರೆ. ಜೊತೆಗೆ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ. ಈ ಐದೂ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ಇವತ್ತು ರಜೆ ಘೋಷಿಸಲಾಗಿದೆ. 5 ಕ್ಷೇತ್ರಗಳಲ್ಲಿ 6,453 ಮತಗಟ್ಟೆಗಳಿದ್ದು, 1,502 ಸೂಕ್ಷ್ಮ ಮತಗಟ್ಟೆಗಳಿವೆ. ಇದೇ ಮೊದಲ ಬಾರಿಗೆ ವಿಕಲಾಂಗ ಚೇತನರಿಗೆ ಮತಗಟ್ಟೆಗೆ ಕರೆದೊಯ್ಯುವ ವ್ಯವಸ್ಥೆಯನ್ನ ಮಾಡಲಾಗಿದೆ. 9,822 ಮತಯಂತ್ರಗಳ ಜತೆಗೆ 8,922 ವಿವಿ ಪ್ಯಾಟ್‍ಗಳಿದ್ದು, ಮಹಿಳೆಯರಿಗಾಗಿಯೇ ಒಟ್ಟು 57 ಗುಲಾಬಿ ಮತಕೇಂದ್ರಗಳನ್ನ ತೆರೆಯಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv