ಬೀದರ್: ಕಳೆದ 4 ದಿನಗಳಿಂದ ದೇವಸ್ಥಾನದಲ್ಲೇ ಕಾದು ಕುಳಿತು ನಾಗರಹಾವಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಸಿ ತೂಗಾಂವ್ ಗ್ರಾಮದಲ್ಲಿರುವ ಲಕ್ಷ್ಮಿ ದೇವಸ್ಥಾನದಲ್ಲಿ ನಾಗರಾಜನಿಗೆ ಪೂಜೆ ನಡೆದಿದೆ.
ದೇವಸ್ಥಾನದ ಬೇವಿನ ಮರದಲ್ಲಿ ವಾಸವಾಗಿರುವ ನಾಗರಹಾವು ಲಕ್ಷ್ಮಿ ಸ್ವರೂಪ ಎಂದು ಭಕ್ತರು ನಂಬಿದ್ದು, ಪೂಜೆಗೆ ಮುಗಿಬಿದ್ದಿದ್ದಾರೆ. ನಾಗರಾಜನನ್ನು ನೋಡಲು ನೂರಾರು ಜನರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!
ನಾಗರಾಜನನ್ನು ನೋಡಲು ತಾಲೂಕಿನ ವಿವಿಧ ಹಳ್ಳಿಗಳಿಂದ ಜನರು ಮೆರವಣಿಗೆಗಳ ಮೂಲಕ ಬರುತ್ತಿದ್ದು, ಭಜನೆ, ಕಿರ್ತನೆ ಹಾಗೆಯೇ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಹೀಗೆ ಗಡಿ ನಾಡಿನ ಜನರು ಜನ ಮರಳೋ ಜಾತ್ರೆ ಮರಳೋ ಎಂಬಂತೆ ಮೂಢನಂಬಿಕೆಗೆ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಬರದನಾಡಲ್ಲಿ ಗ್ರಾಮೀಣ ರಸ್ತೆ, ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು: ತಿಪ್ಪಾರೆಡ್ಡಿ