ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಜುಲೈ ಎರಡನೇಯ ವಾರ ಬಂದರೂ ಉತ್ತಮ ಮಳೆ ಬಂದಿಲ್ಲ. ಹೀಗಾಗಿ ಎಲ್ಲೆಡೆ ಮಳೆಗಾಗಿ ಪ್ರಾರ್ಥನೆ ಭಜನೆಗಳು ನಡೆದಿವೆ.
ದೇವದುರ್ಗ ತಾಲೂಕಿನ ಹಿರೇಬೂದೂರಿನಲ್ಲಿ ಮಕ್ಕಳು ದೇವರಿಗೆ ನೀರು ಹಾಕಿ ಪ್ರಾರ್ಥನೆ ಸಲ್ಲಿಸಿದರು. `ಮಳೆ ಸುರಿಸು ದೇವರೇ’ ಎಂದು ಗ್ರಾಮದ ದೇವರುಗಳಲ್ಲಿ ಮಕ್ಕಳೆಲ್ಲ ಪ್ರಾರ್ಥಿಸಿದರು. ಮಳೆ ಬಾರದ ಹಿನ್ನೆಲೆಯಲ್ಲಿ ಬಿತ್ತನೆಯೂ ಆರಂಭವಾಗಿಲ್ಲ.
Advertisement
Advertisement
ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಈ ಬಾರಿಯ ಮುಂಗಾರು ಸಹ ಕೈಕೊಟ್ಟಂತಾಗುತ್ತದೆ. ಮುಂದೆ ಮಳೆ ಬಂದರೂ ಪ್ರಯೋಜನವಿಲ್ಲ. ಹೀಗಾಗಿ ಉತ್ತಮ ಮಳೆಯ ನಿರೀಕ್ಷೆಯಲ್ಲಿರುವ ರೈತರು ಬಿತ್ತನೆ ಕಾರ್ಯಕ್ಕೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ. ಆದರೆ ಮೋಡ ಮಾತ್ರ ಮಳೆಯಾಗಿ ಸುರಿಯುತ್ತಿಲ್ಲ. ಹೀಗಾಗಿ ಎಲ್ಲೆಡೆ ಮಳೆಗಾಗಿ ಪ್ರಾರ್ಥನೆಗಳು ನಡೆದಿವೆ.
Advertisement
Advertisement
ಈ ಹಿಂದೆ ರಾಯಚೂರು ಜನರು ಮಣ್ಣೆತ್ತಿನ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದ್ದರು. ಸಾರ್ವಜನಿಕರು, ರೈತರು ಮಣ್ಣೆತ್ತುಗಳನ್ನ ಕೊಂಡು ಮನೆ, ಜಮೀನುಗಳಲ್ಲಿ ಇಟ್ಟು ಪೂಜೆ ಮಾಡಿದ್ದರು. ಅಲ್ಲದೆ ಈ ಬಾರಿ ಉತ್ತಮ ಮಳೆಯಾಗಲಿ ಎಂದು ಮಣ್ಣೆತ್ತುಗಳಲ್ಲಿ ಪ್ರಾರ್ಥಿಸಿದ್ದರು. ಬರಗಾಲದಿಂದ ಬೇಸತ್ತಿರುವ ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿ, ಮಣ್ಣೆತ್ತುಗಳ ಪೂಜೆಗೆ ಮಣಿದು ಮಳೆರಾಯ ಊರಿಗೆ ಬರುತ್ತಾನೆ ಎಂದು ನಂಬಿ ಸಡಗರ ಸಂಭ್ರಮದಿಂದ ಮಣ್ಣೆತ್ತಿನ ಅಮವಾಸ್ಯೆಯನ್ನ ಆಚರಿಸಲಾಗಿತ್ತು.