ಬೆಂಗಳೂರು: ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಎರಡು ವರ್ಷಗಳು ಹಿಂದೆಯೇ ಬಾಲ ಗುರುಜಿ ವಿನಯ್ ಸ್ವಾಮೀಜಿ ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ. ದೇವೇಗೌಡ ಪೂಜೆ ಮಾಡಿದ್ದಾರೆ.
ವಿನಯ್ ಗುರೂಜಿ ದತ್ತಾತ್ರೆಯ ಅವಧೂತ ಸ್ವರೂಪ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಎಚ್‍ಡಿಕೆ ಸಿಎಂ ಆದ ಬಳಿಕ ದೇವೇಗೌಡ ದಂಪತಿ ತಮ್ಮ ನಿವಾಸಕ್ಕೆ ಗುರೂಜಿಯನ್ನು ಕರೆಸಿದ್ದರು. ನಂತರ ದೇವೇಗೌಡ ದಂಪತಿ ಮನೆಯಲ್ಲಿ ಬಾಲ ಗುರೂಜಿಗೆ ಪಾದಪೂಜೆ ಮಾಡಿದ್ದಾರೆ. ಈ ಗುರೂಜಿ ಹಲವು ರಾಜಕೀಯ ನಾಯಕರಿಗೆ ರಾಜಕೀಯ ಭವಿಷ್ಯ ಹೇಳಿದ್ದರು. 2 ವರ್ಷದ ಹಿಂದೆಯೇ ಎಚ್‍ಡಿಕೆಗೆ ನೀವು ಸಿಎಂ ಆಗುತ್ತೀರಿ ಎಂದು ಹೇಳಿ ಹಸಿರು ಶಲ್ಯೆ ನೀಡಿ ಮನೆಯಲ್ಲಿ ಪೂಜೆ ಮಾಡುವುದಕ್ಕೆ ಹೇಳಿದ್ದರಂತೆ. ಆದ್ದರಿಂದ ಅವರು ಹೇಳಿದ ಹಾಗೇ ಕುಮಾರಸ್ವಾಮಿ ಸಿಎಂ ಆಗಿದ್ದು, ಈಗ ಅವರಿಗೆ ದೇವೇಗೌಡರು ಪಾದಪೂಜೆ ನೆರವೇರಿಸಿದ್ದಾರೆ.
Advertisement
Advertisement
ಸ್ಪೀಕರ್ ರಮೇಶ್ ಕುಮಾರ್ ಗೂ ನೀವು ಸತತ 2ನೇ ಬಾರಿಗೆ ಎಂಎಲ್‍ಎ ಆಗುತ್ತೀರಿ ಎಂದು ಬಾಲ ಗುರೂಜಿ ಹೇಳಿದ್ದರಂತೆ. ಈಗ ಅವರು ಕೂಡ ಪಾದಪೂಜೆ ಮಾಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್, ವಿನಯ್ ಗುರೂಜಿಗೆ ಪೂಜೆ ಮಾಡಿರುವ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.
Advertisement
ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಯಲ್ಲಿ ಚಂಡಿಕಾ ಪಾರಾಯಣ ನಡೆದಿದೆ. ಶುಕ್ರವಾರವಾಗಿರುವ ಇಂದು ಬೆಂಗಳೂರಿನ ಜೆಪಿ ನಗರದಲ್ಲಿರುವ ಮನೆಯಲ್ಲಿ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆದ ಬಳಿಕ ವಾರಕ್ಕೊಂದು ಸಲ ಪೂಜೆ ನಡೆಯುತ್ತಿರುವುದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳುತ್ತಿಲ್ಲ. ಆದರೆ ಜೆಪಿ ನಗರದ ನಿವಾಸದಲ್ಲಿ ಜನತಾ ದರ್ಶನ ಕೈಗೊಂಡು ಅಹವಾಲು ಸ್ವೀಕರಿಸಿದ್ದಾರೆ.