ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಮಾಡು ತೆರಳುತ್ತಿದ್ದಾಗ ಸಿಕ್ಕಿಬಿದ್ದಿದ್ದರಿಂದ ಚೈತನ್ಯಪುರಿ ಪೊಲೀಸ್ ಮತ್ತು ಎಲ್.ಬಿ. ನಗರ ಸ್ಪಷೆಲ್ ಕಾರ್ಯಾಚರಣೆ ತಂಡವು ಇಬ್ಬರನ್ನು ಬಂಧಿಸಿದೆ. ಜೊತೆಗೆ ಅವರ ಬಳಿ ಇದ್ದ 1.65 ಕೋಟಿ ರೂ. ನಗದು ಮತ್ತು ಎರಡು ಕಾರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕೋತಪೇಟ್ ನಿವಾಸಿ ಟಿ. ವೆಂಕಟ ಶಿವ ಮಹೇಶ್ವರ ರಾವ್ ಮತ್ತು ಕುಕಟ್ಪಲ್ಲಿಯ ಎಸ್. ವೆಂಕಟೇಶ್ವರ ರಾವ್ ಎಂದು ಗುರುತಿಸಲಾಗಿದೆ. ಬಂಧಿತರು ಅಕ್ರಮ ಹಣ ವರ್ಗಾವಣೆ ಮಾಡುವ ಏಜೆಂಟ್‍ರನ್ನು ಭೇಟಿ ಮಾಡಲು ಬಂದಿದ್ದಾರೆ. ಆಗ ಅಕ್ರಮ ವರ್ಗಾವಣೆಯ ಕೆಲಸದಿಂದ ಲಾಭವಿದೆ ಎಂದು ತಿಳಿದುಕೊಂಡು ನಂತರ ಅವರು ಕೂಡ ಅದೇ ಕೆಲಸಕ್ಕೆ ಸೇರಿಕೊಂಡಿದ್ದಾರೆ.
Advertisement
Hyderabad: Special Operations Team, LB Nagar Zone Team along with Chaitanyapuri Police of Rachakonda Commissionerate busted an illegal money transfer racket operating from Chaitanyapuri, yesterday. Two accused apprehended & Rs.1,65,00,000 cash seized. #Telangana pic.twitter.com/JPaiCouuyH
— ANI (@ANI) December 21, 2018
Advertisement
ಕಾರ್ಯಾಚರಣೆ ತಂಡವು ಕೊಥೆಪೆಟ್ ನಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಸೂರ್ಯ ಮಿತ್ರ ಟ್ರೇಡರ್ಸ್ ಎಕ್ಸ್ ಪೋರ್ಟ್ಸ್ ಮಾಲೀಕ ಮಹೇಶ್ವರ ರಾವ್ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತ ತನ್ನ ಗೆಳೆಯ ಸತ್ಯನಾರಾಯಣ ಎಂಬಾತ 1 ಕೋಟಿ ರೂ. ಹಣ ಹೊಂದಿಸಿಕೊಡುವಂತೆ ಹೇಳಿದ್ದಾನೆ. ಅಲ್ಲದೇ ಆ ಹಣವನ್ನು ಮತ್ತೆ ನಿನಗೆ ಬೇರೆ ಬೇರೆ ಖಾತೆಗಳ ಮೂಲಕ ವಾಪಸ್ ಮಾಡುವುದಾಗಿ ಹೇಳಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ.
Advertisement
ಸ್ನೇಹಿತ ಕೇಳಿದ್ದಕ್ಕೆ ಸದ್ಯ 85 ಲಕ್ಷ ಹಣ ಹೊಂದಿಸಿಕೊಂಡು ರಾವ್, ತನ್ನ ಕಾರಿನಲ್ಲಿ ದಿಲ್ ಸುಖ್ ನಗರದತ್ತ ಹೊರಟಾಗ ಸ್ಪೆಷಲ್ ಕಾರ್ಯಾಚರಣಾ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನ ಕೈಯಿಂದ ನಗದು ವಶಪಡಿಸಿಕೊಂಡಿರೋ ತಂಡ ತನಿಖೆ ಮುಂದುವರಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv