Connect with us

Chikkamagaluru

ಕಾಫಿನಾಡಿನಲ್ಲೊಂದು ವಿಶೇಷ ಮದುವೆ- 3 ಅಡಿ ವರ, 3 ಅಡಿ ವಧು..!

Published

on

ಚಿಕ್ಕಮಗಳೂರು: ಸಾಮಾನ್ಯವಾಗಿ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅನ್ನೋದಕ್ಕೆ ಕಾಫಿನಾಡಿನ ಚಿಕ್ಕಮಗಳೂರು ತಾಲೂಕಿನ ಕಳಸಾಪುರದಲ್ಲಿ ಇಂದು ನಡೆದ ವಿವಾಹವೊಂದು ಸಾಕ್ಷಿಯಾಗಿದೆ.

ಈ ವಿಶೇಷ ಮದುವೆಯಲ್ಲಿ ಕಳಸಾಪುರದ ಪುನೀತ್ (24) ಎಂಬ ವರ ಅರಸೀಕೆರೆ ಸಮೀಪದ ಅಯ್ಯನಹಳ್ಳಿಯ ಲಾವಣ್ಯ (22) ಎಂಬು ವಧುವನ್ನು ವರಿಸಿದ್ದಾರೆ. ಮೂರು ಅಡಿ ಇರುವ ಗಂಡು ಹಾಗೂ ಹೆಣ್ಣಿಗೆ ಕಳೆದ ಎರಡು ವರ್ಷಗಳಿಂದ ಎರಡೂ ಮನೆಯವರು ವಧು-ವರರನ್ನ ಹುಡುಕುತ್ತಿದ್ದರು. ಆದರೆ ಎಲ್ಲೂ ವಧು-ವರ ಸಿಗಲಿಲ್ಲ. ಕೊನೆಗೆ ಹುಡುಕುತ್ತಿದ್ದ ಜೋಡಿಗಳೇ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪುನೀತ್ ಮನೆಯವರು ಹುಡುಗಿ ಹುಡುಕಾಟದಲ್ಲಿದ್ದರು. ಇದೇ ಸಂದರ್ಭದಲ್ಲಿ ಮದುವೆಯೊಂದರಲ್ಲಿ ಮೂರು ಅಡಿ ಹುಡುಗಿಯನ್ನು ನೋಡಿದ್ದಾರೆ. ನಂತರ ಅವರು ನಮ್ಮದೊಂದು ಹುಡುಗ ಇದೆ ಹೆಣ್ಣು ಕೊಡುತ್ತೀರಾ ಎಂದು ಕೇಳಿದ್ದಾರೆ. ಈ ವೇಳೆ ಹುಡುಗಿ ಮನೆಯವರು ಒಪ್ಪಿಗೆ ನೀಡಿದ್ದಾರೆ. ಕೊನೆಗೆ ಎರಡು ಮನೆಯವರು ಒಪ್ಪಿ ಇಂದು ಮದುವೆಯನ್ನು ನಿಶ್ಚಯಿಸಿದ್ದರು.

ಮೂರು ಅಡಿಯ ವಧು-ವರರಿಗೆ ಅದ್ಧೂರಿಯಾಗಿ ಮದುವೆ ಮಾಡಿ ಎಲ್ಲರೂ ಅವರಿಗೆ ಶುಭಹಾರೈಸಿದ್ದಾರೆ. ನವಜೀವನಕ್ಕೆ ಕಾಲಿಟ್ಟ ಇಬ್ಬರೂ ದಂಪತಿಗಳಿಗೂ ಸುತ್ತಮುತ್ತಲಿನ ಜನ ಕೂಡ ಶುಭಕೋರಿದ್ದಾರೆ. ವಧು-ವರರಿಬ್ಬರೂ ಕೂಡ ನಾನು ಕುಳ್ಳ- ನೀನೂ ಕುಳ್ಳಿ ಎಂದು ಒಬ್ಬರಿಗೊಬ್ಬರು ಹಾಸ್ಯ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

 

Click to comment

Leave a Reply

Your email address will not be published. Required fields are marked *