ಇದು ಹಣ್ಣುಗಳ ರಾಜ ಮಾವಿನಹಣ್ಣಿನ ಕಾಲ. ಕಿರಿಯರಿಂದ ಹಿರಿಯರವರೆಗೂ ಮಾವು ಕಂಡರೆ ಎಲ್ಲರಿಗೂ ಇಷ್ಟ. ಮಾವಿನಿಂದ ಮಾಡುವ ಎಲ್ಲ ತಿಂಡಿ, ಜ್ಯೂಸ್‍ಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ. ಅದಕ್ಕೆ ಇಂದು ಸಿಂಪಲ್ ಮತ್ತು ರುಚಿಯಾದ ‘ಮ್ಯಾಂಗೋ ಲಸ್ಸಿ’ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗಿರುವ ಪದಾರ್ಥಗಳು:
* ಮ್ಯಾಂಗೋ – 4
* ಮೊಸರು – 2 ಕಪ್
* ಸಕ್ಕರೆ – 5 ಟೀಸ್ಪೂನ್
Advertisement
* ಏಲಕ್ಕಿ ಪುಡಿ – 1/4 ಟೀಸ್ಪೂನ್
* ಪುದೀನ ಎಲೆಗಳು – 3-4
Advertisement
Advertisement
ಮಾಡುವ ವಿಧಾನ:
* ಮೊದಲು ಮಾವಿನ ಹಣ್ಣಗಳ ಸಿಪ್ಪೆ ಸುಲಿದು ತಿರುಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.
* ತಿರುಳು ಮತ್ತು ಮೊಸರನ್ನು ಮಿಕ್ಸಿಗೆ ಹಾಕಿ. ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಚೆನ್ನಾಗಿ ಗ್ರೈಡ್ ಮಾಡಿ. ಮೂರು ಅಥವಾ ನಾಲ್ಕು ಬಾರಿ ಗ್ರೈಡ್ ಮಾಡಿ.
* ನಂತರ ಮಿಕ್ಸಿಯಿಂದ ಲಸ್ಸಿ ತೆಗೆದು ಅದನ್ನು ಸರ್ವಿಂಗ್ ಬೌಲ್‍ಗೆ ಮ್ಯಾಂಗೋ ಲಸ್ಸಿ ಹಾಕಿ ಅದಕ್ಕೆ ಒಂದೆರೆಡು ಐಸ್‍ಕ್ಯೂಬ್ ಹಾಕಿ. ಪುದೀನ ಎಲೆಗಳಿಂದ ಅಲಂಕರಿಸಿ.