ರಾಯಚೂರು: ಕಲಿಯುಗ ಕಾಮಧೇನು ರಾಘವೇಂದ್ರ ಸ್ವಾಮಿಗಳ 347 ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಇದೇ ವೇಳೆ ಸಾಧಕರಿಗೆ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇಂದು ಮಠದಲ್ಲಿ ಪೂರ್ವಾರಾಧನೆ ನಡೆಯುತ್ತಿದ್ದು, ಗುರು ರಾಯರು ವೃಂದಾವನಸ್ಥರಾಗಿ ಇಂದಿಗೆ 347 ವರ್ಷಗಳು ಸಂದಿವೆ. ಈ ದಿನವನ್ನೇ ಪೂರ್ವಾರಾಧನೆಯಾಗಿ ಆಚರಿಸಲಾಗುತ್ತಿದೆ. ಮುಂದಿನ ಎರಡು ದಿನಗಳನ್ನು ಮಧ್ಯಾರಾಧನೆ ಹಾಗೂ ಉತ್ತರರಾಧನೆಯಾಗಿ ಆಚರಿಸಲಾಗುತ್ತದೆ. ಆರಾಧನೆಯ ಪ್ರತಿ ದಿನವೂ ಇಂದಿನಿಂದ ಬೆಳಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಮಹಾ ಪಂಚಾಮೃತ ಅಭಿಷೇಕ, ನಿರ್ಮಾಲ್ಯ ವಿಸರ್ಜನೆ, ಮೂಲರಾಮದೇವರ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮಠದಲ್ಲಿ ನಡೆಸಲಾಗುವುದು.
Advertisement
Advertisement
ಸಂಜೆ ವೇಳೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಬಾರಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆ ಪುಣ್ಯಸ್ನಾನಕ್ಕಾಗಿ ವಿವಿಧ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಹರಿದು ಬರುತ್ತಿದ್ದಾರೆ.
Advertisement
ಇತ್ತ ಬೆಂಗಳೂರಿನ ಜಯನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಯ ಆರಾಧನೆ ನಡೆಯುತ್ತಿದೆ. ಈ ವೇಳೆ ಹಲವಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv