ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ಪೆಷಲ್ ಗ್ರೀನ್ ವೆಡ್ಡಿಂಗ್ ನಡೆದಿದೆ. ಈ ಮೂಲಕ ಮದುವೆ ಮನೆಯ ತ್ಯಾಜ್ಯ ಉತ್ಪಾದನೆಗೆ ಬ್ರೇಕ್ ಹಾಕಲಾಗಿದೆ.
ಮೈಸೂರಿನ ಪಾಲಿಕೆ ಕಾರ್ಯನಿರ್ವಹಕಾ ಇಂಜಿನಿಯರ್ ಮಹೇಶ್ ತಮ್ಮ ಪುತ್ರನ ಮದುವೆಯನ್ನು ಪ್ಲಾಸ್ಟಿಕ್ ಬಳಸದೇ ಮಾಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಪ್ರೋತ್ಸಾಹದೊಂದಿಗೆ ಗ್ರೀನ್ ವೆಡ್ಡಿಂಗ್ ನಡೆದಿದೆ.
ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಪಾಲಿಕೆ ಆಯುಕ್ತೆ ಶಿಲ್ಪ ನಾಗ್ ಅವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ನವಜೋಡಿಗಳಿಗೆ ಅಭಿನಂದನಾ ಪತ್ರ ನೀಡಿ ಶುಭ ಹಾರೈಸಿದರು.
ಮದುವೆ ಮನೆಯಲ್ಲಿ ಉತ್ಪಾದನೆಯಾಗುತ್ತಿದ್ದ ಟನ್ ಗಟ್ಟಲೆ ಕಸದ ರಾಶಿಗೆ ಬ್ರೇಕ್ ಹಾಕುವ ಸಲುವಾಗಿ ಮೈಸೂರು ನಗರ ಪಾಲಿಕೆ ಗ್ರೀನ್ ವೆಡ್ಡಿಂಗ್ ಯೋಜನೆ ರೂಪಿಸಿದೆ. ಊಟಕ್ಕೆ ತಟ್ಟೆ ಲೋಟ, ಕುಡಿಯುವ ನೀರಿಗೆ ಸ್ಟೀಲ್ ಗ್ಲಾಸ್ ಬಳಕೆ ಮಾಡುವಂತೆ ಮೈಸೂರು ಮಹಾನಗರ ಪಾಲಿಕೆ ಜನರಲ್ಲಿ ಮನವಿ ಮಾಡಿತ್ತು. ಈ ಮನವಿಯಿಂದ ಸ್ಫೂರ್ತಿಗೊಂಡು ಈ ಮದುವೆ ನಡೆದಿದೆ.