ಅಭಿಮಾನಿಗಳಿಗೆ ಆರ್‌ಸಿಬಿಯಿಂದ ವಿಶೇಷ ಗಿಫ್ಟ್!

Public TV
1 Min Read
Virat Kohli 4

ಬೆಂಗಳೂರು: ಐಪಿಎಲ್-11ಕ್ಕೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಈ ಬಾರಿ 12 ಸಂಖ್ಯೆಯ ಜರ್ಸಿಯನ್ನು ಅರ್ಪಿಸಿದ್ದಾರೆ.

ಆರ್‌ಸಿಬಿ ಫೇಸ್‍ಬುಕ್ ಪೇಜ್‍ನಲ್ಲಿ ವಿರಾಟ್ ಕೊಹ್ಲಿ ಒಂದು ವಿಡಿಯೋವನ್ನು ಹಾಕಿದ್ದಾರೆ. ವಿಡಿಯೋದಲ್ಲಿ ವಿರಾಟ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ 12ರ ಜರ್ಸಿಯನ್ನು ಅರ್ಪಿಸಿದ್ದಾರೆ. ಅಷ್ಟೇ ಅಲ್ಲದೇ ನಾನು ನನ್ನ ತಂಡದ ಬಗ್ಗೆ ಮಾತನಾಡಲು ಇಲ್ಲಿ ಬಂದಿಲ್ಲ. ನಮ್ಮ ತಂಡದ ಹಿಂದಿರುವ ಮತ್ತೊಂದು ತಂಡದ ಬಗ್ಗೆ ಮಾತನಾಡುತ್ತೇನೆ. ಆ ತಂಡ ಬೇರೆ ಯಾವುದೂ ಅಲ್ಲ. ನಮ್ಮ ಫ್ಯಾನ್ಸ್ ತಂಡ ಎಂದು ವಿರಾಟ್ ತಿಳಿಸಿದ್ದಾರೆ.

29683439 10156091137295619 4998706646309194027 n

ಈಗ ನಾವು ನಮ್ಮ ಅಭಿಮಾನಿಗಳಿಗಾಗಿ ಒಂದು ವಿಶೇಷ ಉಡುಗೊರೆ ಕೊಡಲು ಮುಂದಾಗಿದ್ದೇವೆ. ಇಷ್ಟು ವರ್ಷದಿಂದ ನಮ್ಮ ತಂಡವನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗಾಗಿ ಜರ್ಸಿ ಸಂಖ್ಯೆ 12 ನ್ನು ಮೀಸಲಿಡುತ್ತೇವೆ ಎಂದು ಹೇಳಿದ್ದಾರೆ.

ಈ ಜರ್ಸಿಯನ್ನು ಫ್ಯಾನ್ಸ್ ಗಳಿಗಾಗಿ ಡಿಸೈನ್ ಮಾಡಲಾಗಿದ್ದು, ಈ ಜರ್ಸಿಯಲ್ಲಿ 12 ಸಂಖ್ಯೆ ಬರೆಯಲಾಗಿದೆ. ಇದರ ಪ್ರಕಾರ ನಮ್ಮ ಎಲ್ಲ ಫ್ಯಾನ್ಸ್ ಗಳು ಈ ತಂಡದ 12ನೇ ಸದಸ್ಯರಾಗಲಿದ್ದಾರೆ. ಇಷ್ಟು ವರ್ಷ ನಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳು ಎಂದು ವಿರಾರ್ಟ್ ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *