ಕಾರವಾರ: ಕಾಶ್ಮೀರದಲ್ಲಿ ಸೈನಿಕರ ಮೇಲೆ ದಾಳಿ ನಡೆದ ನಂತರ ಇಡೀ ದೇಶ ನಮ್ಮ ಸೈನಿಕರ ನೋವಿಗೆ ಸ್ಪಂದಿಸಿದೆ. ಸೈನಿಕರಿಗಾಗಿ ದೇಶದ ಹಲವು ಜನರು ಸಹಾಯ ಮಾಡುವ ಜೊತೆ ಬೆಂಬಲ ಕೂಡ ನೀಡಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಸೈನಿಕರಿಗೆ ವಿಶೇಷವಾದ ಪ್ರಾಧಾನ್ಯತೆ ನೀಡುವ ಮೂಲಕ ಗೌರವ ಸೂಚಿಸುತ್ತಿದೆ.
ಹೌದು. ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದಲ್ಲಿ ದೇವರ ದರ್ಶನಕ್ಕೆ ಬರುವ ನಿವೃತ್ತ ಮತ್ತು ಸೇವೆಯಲ್ಲಿರುವ ಭಾರತೀಯ ಸೈನಿಕರಿಗೆ ವಿಶೇಷ ಪ್ರಾಶಸ್ತ್ಯವನ್ನು ದೇವಾಲಯದ ಆಡಳಿತ ಮಂಡಳಿ ಕಲ್ಪಿಸಿದೆ.
ಪ್ರವೇಶ ದ್ವಾರದಲ್ಲಿ ನಾಮಫಲಕವನ್ನು ಅಳವಡಿಸಿದ್ದು, ಕರ್ತವ್ಯ ನಿರ್ವಹಿಸುತ್ತಿರುವ ಅಥವಾ ನಿವೃತ್ತ ಹೊಂದಿದ ವೀರಯೋಧರು ದೇವಾಲಯದ ಕಾರ್ಯಾಲಯವನ್ನು ಸಂಪರ್ಕಿಸಿದರೆ, ಶ್ರೀ ದೇವರ ಶೀಘ್ರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದೆ.
ರಾಮಚಂದ್ರಾಪುರ ಮಠ ದೇವಾಲಯದ ಆಡಳಿತವನ್ನು ವಹಿಸಿಕೊಂಡಾಗಿನಿಂದ ಭಕ್ತರಿಗೆ ವಿವಿಧ ಅನುಕೂಲತೆಗಳನ್ನು ಕಲ್ಪಿಸಿದೆ. ಈಗ ನಮ್ಮ ಹೆಮ್ಮೆಯ ಸೈನಿಕರಿಗೂ ಶೀಘ್ರವೇ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದು, ಈ ಮೂಲಕ ಗೌರವ ಸೂಚಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv