ಚಿಕ್ಕಮಗಳೂರು: ಹೊಸ ಜೀವನಕ್ಕೆ ಕಾಲಿಡುತ್ತಿರುವ ವಧು-ವರರು ಉಂಗುರ, ಹೂವಿನ ಹಾರ ಹಾಕಿ ನಿಶ್ಚಿತಾರ್ಥ ಮಾಡಿಕೊಳ್ಳೋದು ಸಾಮಾನ್ಯವಾಗಿದೆ. ಆದರೆ ಜಿಲ್ಲೆಯಲ್ಲಿ ಜೋಡಿಯೊಂದು ಗಿಡ ನೆಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರದ ಕಾವ್ಯ ಹಾಗೂ ರಂಜಿತ್ ಮಾವಿನ ಗಿಡ ನೆಡುವ ಮೂಲಕ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ. ಇವರು ಉಂಗುರ ಹಾಗೂ ಹಾರ ಬದಲಿಸಿಕೊಳ್ಳುವ ಬದಲು ಪರಿಸರ ಕಾಳಜಿ ಮೆರೆದು ಉಳಿದವರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಉಪನಯನದಲ್ಲಿ ಸಿಹಿ ಬದಲಾಗಿ ಬೀಜದುಂಡೆ ನೀಡಿ ಪರಿಸರ ಕಾಳಜಿ ಮೆರೆದ ಕುಟುಂಬ
Advertisement
ಕೇವಲ ಗಿಡ ನೆಡುವುದಲ್ಲದೇ ಮದುವೆ ದಿನಾಂಕ ನಿಗದಿಯಾಗಿ ತಾಳಿ ಕಟ್ಟುವ ಕೊನೆಯ ಘಳಿಗೆವರೆಗೂ ಗಿಡವನ್ನ ಸಂರಕ್ಷಿಸಿ, ಪೋಷಿಸುವ ಜವಾಬ್ಧಾರಿ ನವ ಜೋಡಿ ಹೊತ್ತಿರುವುದು ವಿಶೇಷವಾಗಿದೆ. ಗಿಡ ನೆಡುವ ಮೂಲಕ ಪರಿಸರ ಉಳಿಸಿ ಅಭಿಯಾನ ಆರಂಭಿಸುವ ಮೂಲಕ ಮದುವೆಗೂ ಮುನ್ನ ಈ ಜೋಡಿಗಳು ಪರಿಸರ ಜವಾಬ್ದಾರಿ ಮೆರೆದಿದ್ದಾರೆ.
Advertisement
ಇತ್ತೀಚೆಗೆ ಮದುವೆಗೆ ಬಂದವರಿಗೆ ಉಡುಗೊರೆಯಾಗಿ ಗಿಡವನ್ನು ಕೊಡುವುದು ರೂಢಿಯಾಗಿದೆ. ಆದರೆ ಈ ಜೋಡಿ ಮದುವೆಗೂ ಮುನ್ನವೇ ಪರಿಸರದ ಬಗ್ಗೆ ಕಾಳಜಿ ಮೂಡಿಸುವಂತಹ ಕಾರ್ಯ ಮಾಡಿದ್ದಾರೆ.