ಬೆಂಗಳೂರು: ಬೆನ್ನಿನ ಮೇಲೆ ನಾಲಿಗೆ ಹಾಗೂ ಕೊಂಬಿನ ಮಧ್ಯದಲ್ಲಿ ಶಿವಲಿಂಗದ ಆಕಾರ ಮೂಡಿರುವ ಹಾಗೆ ಕರುವೊಂದು ಜನಿಸಿ ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ.
ರಾಜಧಾನಿಯ ಹೊರವಲಯದ ನೆಲಮಂಗಲ ತಾಲೂಕಿನ ಬುಗಡಿಹಳ್ಳಿ ಗ್ರಾಮದ ರೈತ ರವಿಕುಮಾರ್ ಮನೆಯಲ್ಲಿ ಈ ಕರು ಜನನವಾಗಿದೆ. ಈ ಕರುವನ್ನು ಸ್ಥಳೀಯರು ದೇವರ ಸಮಾನ ಎಂದು ಭಾವಿಸಿದ್ದು, ಕರುವಿನ ಮಾಲೀಕರು ಕರುವನ್ನು ಮಠಕ್ಕೆ ನೀಡುವ ನಿರ್ಧಾರ ಮಾಡಿದ್ದಾರೆ. ಈ ಕರುವಿನ ವಿಶೇಷ ಏನೆಂದರೆ ಇದಕ್ಕೆ ಬೆನ್ನ ಮೇಲೆ ನಾಲಿಗೆಯ ಹಾಗೆ ಕಾಣುವಂತೆ ದೇಹ ಬೆಳೆದಿದೆ. ಹಾಗೆಯೇ ಕೊಂಬಿನ ಮಧ್ಯ ಭಾಗದಲ್ಲಿ ಶಿವಲಿಂಗ ಆಕಾರ ಮೂಡಿದೆ. ಆದರಿಂದ ಸ್ಥಳಿಯರೆಲ್ಲಾ ಇದು ದೇವರ ಪ್ರತಿರೂಪ ಎಂದು ನಂಬಿದ್ದಾರೆ.
Advertisement
Advertisement
ರವಿಕುಮಾರ್ ಅವರ ಮನೆಯಲ್ಲಿ ಸಾಕಿದ್ದ ಹಸುವಿನ ಎರಡನೇ ಗಂಡು ಕರು ಈ ರೀತಿಯಾಗಿ ಜನಿಸಿದೆ. ಅಲ್ಲದೇ ಅಕ್ಕ ಪಕ್ಕದ ಮಕ್ಕಳು ಮತ್ತು ಜನರು ಆಗಮಿಸಿ ಈ ಕರುವನ್ನು ವಿಸ್ಮಯ ರೀತಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಕರುವಿನ ಬೆಳವಣಿಗೆಗೆ ಬಗ್ಗೆ ವಿವರಿಸಿದ ಪಶು ವೈದ್ಯ ಉಮೇಶ್, ಕೆಲವೊಂದು ಬಾರಿ ಗರ್ಭಾವಸ್ಥೆಯಲ್ಲಿ ಇದ್ದಾಗ ಅಥವಾ ವಂಶಾವಳಿಯ ವೈಪರಿತ್ಯದಿಂದ ಈ ರೀತಿ ಕರು ಜನನವಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv