ಬೆಂಗಳೂರು: ರಾಜ್ಯದ ವಿವಿಧ ಕಾಲೇಜುಗಳಲ್ಲಿ ಇನ್ನೂ 24 ಪಶು ವೈದ್ಯಕೀಯ ಸೀಟುಗಳು ಹಂಚಿಕೆಗೆ ಲಭ್ಯ ಇದ್ದು, ಅವುಗಳ ಭರ್ತಿಗೆ ಜನವರಿ 6ರಂದು ಅಂತಿಮ ಸುತ್ತಿನ ಸೀಟು ಹಂಚಿಕೆ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.
ಅರ್ಹರು, ಕೋರ್ಸ್ ಶುಲ್ಕದ ಡಿ.ಡಿ ಜೊತೆಗೆ ಮೂಲ ದಾಖಲೆಗಳೊಂದಿಗೆ ಜ.6ರಂದು ಬೆಳಿಗ್ಗೆ 10ರಿಂದ 11ಗಂಟೆವರೆಗೆ ಕೆಇಎ ಕಚೇರಿಯಲ್ಲಿ ಖುದ್ದು ಸಲ್ಲಿಸಬೇಕು. ಬಳಿಕ ಮಧ್ಯಾಹ್ನ 12ರಿಂದ 1ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಅದೇ ದಿನ ಮಧ್ಯಾಹ್ನ 2ಗಂಟೆಗೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿನ್ನ, ವಜ್ರ ತುಂಬಿದ ಸೂಟ್‌ಕೇಸ್, ಹಾಸಿಗೆ ಅಡಿ ಕಂತೆ ಕಂತೆ ಹಣ – ಇಡಿ ಯಿಂದ 14 ಕೋಟಿ ಜಪ್ತಿ
ಇದುವರೆಗೂ ಯಾವುದೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಪಶು ವೈದ್ಯಕೀಯ ಸೀಟು ಹಂಚಿಕೆಯಾಗದಿರುವ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಬಹುದು. ಬಿಎಸ್‌ಸಿ ಕೃಷಿ, ರೇಷ್ಮೆ ಕೃಷಿ ಇತ್ಯಾದಿ ಫಾರ್ಮ್ ಸೈನ್ಸ್ ಕೋರ್ಸ್ಗಳಿಗೆ ಸೀಟು ಹಂಚಿಕೆ ಮಾಡಿಕೊಂಡು ನಂತರ ರದ್ದುಪಡಿಸಿಕೊಂಡವರು ಈ ಸುತ್ತಿಗೆ ಅರ್ಹರಾಗುವುದಿಲ್ಲ. ಇತರೆ ಅಭ್ಯರ್ಥಿಗಳು, ಲಭ್ಯ ಪಶು ವೈದ್ಯಕೀಯ ಸೀಟುಗಳಲ್ಲಿ ಆಸಕ್ತಿ ಇದ್ದಲ್ಲಿ ಪ್ರಸಕ್ತ ಕಾಲೇಜಿನಿಂದ ಕಡ್ಡಾಯವಾಗಿ ಎನ್‌ಓಸಿ ಪಡೆದು, ಪೋಷಕರೊಡನೆ ಚರ್ಚಿಸಿ, ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಾಧಿಕಾರವು ಈಗಾಗಲೇ ಆಯಾ ಕಾಲೇಜುಗಳಿಗೆ ಶುಲ್ಕ ವರ್ಗಾವಣೆ ಮಾಡಿರುವುದರಿಂದ ಈ ಹಿಂದೆ ಹಂಚಿಕೆಯಾಗಿದ್ದ ಸೀಟಿಗೆ ಪಾವತಿಸಿರುವ ಶುಲ್ಕವನ್ನು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಗೋವಾದಲ್ಲಿ ಬಿಯರ್ ಬಾಟಲ್ ಹಿಡ್ಕೊಂಡು ಸುತ್ತಾಡಿದ ಸಚಿನ್ ಪುತ್ರಿ
ದಂತ ವೈದ್ಯಕೀಯ ಎಲ್ಲ ಸೀಟು ಹಂಚಿಕೆ:
ಉಳಿದಿದ್ದ ಆರು ದಂತ ವೈದ್ಯಕೀಯ ಸೀಟುಗಳನ್ನು ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಮೂಲಕ ಹಂಚಿಕೆ ಮಾಡಲಾಗಿದೆ. ಈ ಮೂಲಕ ದಂತ ವೈದ್ಯಕೀಯ ಸೀಟುಗಳು ಕೂಡ ಸಂಪೂರ್ಣ ಖಾಲಿಯಾದಂತಾಗಿವೆ ಎಂದು ತಿಳಿಸಿದ್ದಾರೆ.
ಈ ಆರು ಸೀಟುಗಳಿಗೆ ಒಟ್ಟು 64 ಮಂದಿ ಸೀಟು ಹಂಚಿಕೆಯಲ್ಲಿ ಭಾಗವಹಿಸಿದ್ದರು. ಸೀಟಿ ಹಂಚಿಕೆಯಾದವರು ಜನವರಿ 1ರಂದು ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ & ಸಂಶೋಧನಾ ಸಂಸ್ಥೆ ಆರಂಭಿಸಿ: ಕೇಂದ್ರಕ್ಕೆ ಎಂ.ಬಿ.ಪಾಟೀಲ್ ಪತ್ರ

