ಬೆಂಗಳೂರು: ಜೂಜಾಟದಲ್ಲಿ ತೊಡಗೋ ಕೆಲವರು ಐಪಿಎಲ್ ಆರಂಭವಾಗೋದನ್ನೇ ಕಾಯ್ತಿರ್ತಾರೆ. ಸಾವಿರದಿಂದ ಹಿಡಿದು ಲಕ್ಷಗಟ್ಟಲೇ ಬೆಟ್ಟಿಂಗ್‍ನಲ್ಲಿ ಹಣ ಕಟ್ತಾರೆ. ಅಂತವರ ವಿರುದ್ಧ ನಿಗಾ ಇಡೋಕೆ ಕ್ರೈಮ್ ಬ್ರಾಂಚ್‍ನ ವಿಶೇಷ ತಂಡ ಸಿದ್ಧವಾಗಿದೆ.
ಇಂದಿನಿಂದ ಐಪಿಎಲ್‍ನ 10ನೇ ಆವೃತ್ತಿ ಆರಂಭವಾಗಲಿದೆ. ಹೈದ್ರಾಬಾದ್‍ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸನ್‍ರೈಸರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯ ಮೇಲೆ ಬೆಟ್ಟಿಂಗ್ ಭೂತದ ಕಾರ್ಮೋಡ ಆವರಿಸಿದೆ. ಈ ಬಾರಿ ಬೆಂಗಳೂರೇ ಕಪ್ ಗೆಲ್ಲೋ ಹಾಟ್ ಫೇವರಿಟ್ ಎನ್ನಲಾಗ್ತಿದೆ. ಇನ್ನು ಬೆಂಗಳೂರು ಸೇರಿದಂತೆ ಎಲ್ಲಾ ತಂಡಗಳ ಮೇಲೆ ಕೋಟ್ಯಂತರ ರೂಪಾಯಿ ಬಾಜಿ ವ್ಯವಹಾರ ನಡೆಯೋ ನಿರೀಕ್ಷೆಯಿದೆ. ಆದ್ರೆ ಈ ಎಲ್ಲದಕ್ಕೂ ಬ್ರೇಕ್ ಹಾಕಲು ಸಿಸಿಬಿ ರೆಡಿಯಾಗಿದೆ.
Advertisement
ರಾಜಧಾನಿಯಲ್ಲಿ ಬೆಟ್ಟಿಂಗ್ ದಂಧೆಗೆ ಅವಕಾಶ ಕೊಡದಂತೆ ಕ್ರೈಂ ಬ್ರಾಂಚ್ ಪೊಲೀಸರು ತಯಾರಿ ನಡೆಸಿದ್ದಾರೆ. ಬೆಟ್ಟಿಂಗ್ ದಂಧೆಕೋರರನ್ನ ಬಗ್ಗು ಬಡಿಯಲು ಸಿಸಿಬಿ ವಿಶೇಷ ತಂಡ ರಚನೆ ಮಾಡಲಾಗಿದೆ. ಅದಾಗಲೇ ಬೆಟ್ಟಿಂಗ್ ವೀರರ ಎಲ್ಲಾ ಮೊಬೈಲ್‍ಗಳನ್ನ ಟ್ರ್ಯಾಕ್ ಮಾಡಲಾಗಿದೆ. ಜೊತೆಗೆ ಒಂದೇ ಮೊಬೈಲ್‍ಗೆ ಹೆಚ್ಚು ಕರೆಗಳು ಹೋಗೋದರ ಮೇಲೂ ನಿಗಾ ವಹಿಸಲಾಗಿದೆ.
Advertisement
ಕ್ರಿಕೆಟ್ ಬೆಟ್ಟಿಂಗ್ ನಡೆಸೋಕೆ ಈಗ ಆನ್‍ಲೈನ್ ಆ್ಯಪ್‍ಗಳು ಸೃಷ್ಟಿಯಾಗಿಬಿಟ್ಟಿವೆ. ಈವರೆಗೆ ಇಂಥ 31 ಆಪ್‍ಗಳನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಸೈಬರ್ ತಂಡವೂ ಸೂಕ್ಷ್ಮವಾಗಿ ಗಮನಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
Advertisement