ಬೆಂಗಳೂರು: ಎಲ್ಲ ಸಂದರ್ಭಗಳಲ್ಲಿಯೂ ನಗರದ ಸ್ವಚ್ಛತೆ, ಆರೋಗ್ಯವನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿರುವ ಪೌರಕಾರ್ಮಿಕರು ಮತ್ತು ಅವರ ಕುಟುಂಬದ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರು ಡಾ. ಸಿಸ್ಟರ್ ಅರ್ಪಣಾ ಹೇಳಿದರು.
ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಮೈಕ್ರೊ ಜೋನ್ ವಿಭಾಗವು ಐಎಸ್‍ಆರ್‍ಸಿ ಜೊತೆ ಸೇರಿ ಆಯೋಜಿಸಲಾಗಿದ್ದ ‘ಸ್ವಚ್ಛತೆಯ ಹರಿಕಾರರಿಗೊಂದು ಸಲಾಂ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಲೇಜು ಹಾಗೂ ವಿದ್ಯಾರ್ಥಿಗಳು ಸಮುದಾಯದ ಅಭಿವೃದ್ಧಿಯಲ್ಲಿ ತೋರಬೇಕಾದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿದ್ಯಾರ್ಥಿನಿಯರಿಗೆ ಹಾಗೂ ಪೌರ ಕಾರ್ಮಿಕರಿಗೆ ವಿವರಿಸಿದರು.
Advertisement
Advertisement
ಕಾಲೇಜಿನ ಗಣ್ಯರೊಂದಿಗೆ ಪೌರಕಾರ್ಮಿಕರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಪೌರಕಾರ್ಮಿಕರ ದೈನಂದಿನ ಜೀವನವನ್ನು ಹಾಗೂ ಅವರು ಎದುರಿಸುವ ಸವಾಲುಗಳನ್ನು ಕಿರು ನಾಟಕ, ಸಂಗೀತ, ಮೈಮ್ ಮೂಲಕ ಅತ್ಯಾಕರ್ಷಕವಾಗಿ ಪ್ರದರ್ಶಿಸಿದರಲ್ಲದೆ ಪೌರಕಾರ್ಮಿಕರ ಮಹತ್ವವನ್ನು ಅವರಿಗೆ ಮನಮುಟ್ಟುವ ರೀತಿಯಲ್ಲಿ ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.
Advertisement
ಸೂಕ್ಷ್ಮಾಣು ಜೀವವಿಜ್ಞಾನದ ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಛತೆ ಮತ್ತು ಸಾಮೂಹಿಕ ಸ್ವಚ್ಛತೆಯನ್ನು ಪಾಲಿಸುವುದರಿಂದ ವೈರಸ್ ಮತ್ತು ಬ್ಯಾಕ್ಟೀರಿಯಗಳಿಂದ ಹೇಗೆ ದೂರವಿರಬಹುದು ಎಂಬುದರ ಕುರಿತು ಅರಿವು ಮೂಡಿಸಿದರು. ನಗರವನ್ನು ಸ್ವಚ್ಛವಾಗಿರಿಸಲು ಪೌರಕಾರ್ಮಿಕರು ನೀಡುತ್ತಿರುವ ಉತ್ತಮ ಸೇವೆಗೆ ವಿದ್ಯಾರ್ಥಿನಿಯರು ನೃತ್ಯ ಹಾಗೂ ಹಾಡುವ ಮೂಲಕ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?
Advertisement
ಇದೇ ಸಂದರ್ಭದಲ್ಲಿ ಅವರಿಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಲು ಪೂರಕವಾದ ಕಿಟ್ ಹಾಗೂ ಕುಕ್ಕರ್‍ಗಳನ್ನು, ಬ್ಯಾಗ್‍ಗಳನ್ನು ವಿತರಿಸಲಾಯಿತು. ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ದೀಪ ಬೆಳಗಿದರಲ್ಲದೇ, ತಮ್ಮನ್ನು ಅಧ್ಯಯನ ಮಾಡಿ ದಿನ ಪೂರ್ತಿಯ ಚಟುವಟಿಕೆಗಳನ್ನು ನಮಗೆ ತೋರಿಸಿ ಸಂತಸ ನೀಡಿದ ಹಾಗೂ ಕೋವಿಡ್ ಸಮಯದಲ್ಲೂ ನಾವು ನೀಡಿದ ಸೇವೆಯನ್ನು ಸ್ಮರಿಸಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸೆಲ್ಯೂಟ್ ಹೊಡೆದು ಚಪ್ಪಾಳೆ ಹೊಡೆದು ಗೌರವಿಸಿದ ವಿದ್ಯಾರ್ಥಿಗಳ ಬಗ್ಗೆ ಅತೀವ ಸಂತಸ ವ್ಯಕ್ತ ಪಡಿಸಿದರು.
ನಮಗೆ ನಾವು ನೀಡಿದ ಸೇವೆ ಸಾರ್ಥಕ ಎಂದು ಅನಿಸಿದ ಕ್ಷಣ ಇದೆಂದು ಪೌರಕಾರ್ಮಿಕರಾದ ಮಿಶಾ ಅಭಿಪ್ರಾಯ ಪಟ್ಟರು. ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಡಾ. ಸರಯೂ ಮೋಹನ್ ಅವರು ಮಾತನಾಡಿ ಪೌರಕಾರ್ಮಿಕರಿಲ್ಲದ ಸಮಾಜವನ್ನು ಊಹಿಸಲು ಅಸಾಧ್ಯವಾದುದು. ನಗರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುವ ಅವರ ಜೀವನವೂ ಸುಂದರ ಹಾಗೂ ಆರೋಗ್ಯ ಪೂರ್ಣವಾಗಿರಲಿ ಎಂದು ಹಾರೈಸಿದರು.
ಪೌರಕಾರ್ಮಿಕರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಕುಟುಂಬದವರ ಹಿತವನ್ನು ಗಮನದಲ್ಲಿರಿಸಿ ರೋಗ ಮುಕ್ತವಾಗಿ ಬದುಕಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಅದ್ಭುತವಾಗಿ ವಿವಿಧ ಮಾದರಿಗಳ ಮೂಲಕ ತೋರಿಸಿ ಕೊಟ್ಟಿದ್ದಾರೆ. ತನ್ಮೂಲಕ ಈ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇಂದು ನಾವು ನೀಡಿದ ಕಾರ್ಯಕ್ರಮ ಸಾರ್ಥಕವಾಗಲಿದೆ ಎಂದರು. ಇದನ್ನೂ ಓದಿ: ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್
ಮೌಂಟ್ ಕಾರ್ಮೆಲ್ ಕಾಲೇಜು ಸಮಾಜಕ್ಕೆ ಪೂರಕವಾದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೆಂದೇ ಐಎಸ್‍ಆರ್‍ಸಿ ಸಂಯೋಜಕರು ರಜನಿ ಕೋರ, ನೇತೃತ್ವದಲ್ಲಿ ವಿಭಾಗವನ್ನು ರಚಿಸಿದೆ ಪ್ರತಿ ವಿಭಾಗಗಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಐಎಸ್‍ಆರ್‍ಸಿ ಪ್ರೇರೇಪಿಸುತ್ತದಲ್ಲದೇ ವಿದ್ಯಾರ್ಥಿಗಳಿಗೆ ಸಾಮಾಜಿಕ ಜೀವನದ ಬಗ್ಗೆ ಹೊಸ ದೃಷ್ಟಿಯನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದರು.
ಉಪ ಪ್ರಾಂಶುಪಾಲರಾದ ಡಾ. ಚಾರ್ಮೈನ್ ಜೆರೋಮ್, ಕ್ಯಾಂಪಸ್ ಸಂಯೋಜಕರಾದ ಡಾ.ಸಿಸ್ಟರ್ ಸಜಿತ ಮತ್ತು ಡಾ.ಲೇಖಾ ಜಾರ್ಜ್, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಡಾ. ಸರಯೂ ಮೋಹನ್, ಮೈಕ್ರೊ ಜೋನ್ ಸಂಯೋಜಕರು ಅನು ಮರಿಯಮ್ ಕುರಿಯನ್, ಐಎಸ್‍ಆರ್‍ಸಿ ಸಂಯೋಜಕರು ರಜನಿ ಕೋರ, ಮೈಕ್ರೋ ಬಯಾಲಜಿ ಕಾರ್ಯದರ್ಶಿ ಋತು ಫರ್ನಾಂಡಿಸ್, ಸಹ ಕಾರ್ಯದರ್ಶಿ ರಚನಾ ಬಿ.ಆರ್ ಉಪಸ್ಥಿತರಿದ್ದರು.