ಬೆಂಗಳೂರು: 1 ರಿಂದ 12ನೇ ತರಗತಿಯ ಸರ್ಕಾರಿ ಶಾಲೆ-ಕಾಲೇಜುಗಳ ಆಸ್ತಿ ಸಂರಕ್ಷಣೆಗೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಶಾಲಾ-ಕಾಲೇಜುಗಳ ಆಸ್ತಿ ಒತ್ತುವರಿ ತೆರವಿಗೆ ವಿಶೇಷ ಅಭಿಯಾನ ಶುರು ಮಾಡಲು ನಿರ್ಧಾರ ಮಾಡಲಾಗಿದೆ.
ಇದರ ಜೊತೆಗೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ದಾನದ ರೂಪದಲ್ಲಿ ಬಂದಿರೋ ಜಮೀನುಗಳ ರಕ್ಷಣೆಗೂ ವಿಶೇಷ ಡ್ರೈವ್ ಶುರು ಮಾಡಲು ನಿರ್ಧಾರ ಮಾಡಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅನೇಕ ದಾನಿಗಳು ಹಿಂದೆ ಜಮೀನು ನೀಡಿದ್ದಾರೆ. ಆ ಜಮೀನುಗಳಿಗೆ ಈವರೆಗೂ ಯಾವುದೇ ದಾಖಲೆಗಳನ್ನು ಶಾಲೆಗಳ ಹೆಸರಿಗೆ ಮಾಡಿಕೊಂಡಿಲ್ಲ. ಇದನ್ನೂ ಓದಿ: ಒಕ್ಕೂಟದ ಪತನದ ನಂತರ ರಾಜೀನಾಮೆ ನೀಡಲು ಮುಂದಾದ ಇಟಲಿ ಪಿಎಂ
Advertisement
Advertisement
ಹೀಗಾಗಿ ಈಗ ವಿಶೇಷ ಅಭಿಯಾನ ಮಾಡಿ ದಾನವಾಗಿ ನೀಡಿರೋ ಜಮೀನುಗಳನ್ನು ಶಾಲೆ ಹೆಸರಿಗೆ ದಾಖಲೆ ಮಾಡಿಕೊಳ್ಳಲು ಸರ್ಕಾರ ಪ್ರತಿ ಶಾಲೆಯ ಮುಖ್ಯಸ್ಥರಿಗೆ ಟಾಸ್ಕ್ ನೀಡಿದೆ. ಆಗಸ್ಟ್‌ನಿಂದ ಅಭಿಯಾನ ಪ್ರಾರಂಭವಾಗಿ 3 ತಿಂಗಳ ಕಾಲ ಈ ವಿಶೇಷ ಆಸ್ತಿ ಉಳಿಸಿ ಅಭಿಯಾನ ನಡೆಯಲಿದೆ.
Advertisement
ಕೇವಲ ದಾನ ಮಾತ್ರ ಅಲ್ಲ. ಸರ್ಕಾರಿ ಶಾಲೆ-ಕಾಲೇಜುಗಳ ಜಾಗವನ್ನ ಅನೇಕ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗವನ್ನು ಬಿಡಿಸಿಕೊಂಡು ಶಾಲೆ-ಕಾಲೇಜು ಹೆಸರಿಗೆ ಆಸ್ತಿ ಮಾಡಲು ಸರ್ಕಾರ ಶಾಲೆಗಳಿಗೆ ಸೂಚನೆ ನೀಡಿವೆ. ಒಂದು ವೇಳೆ ಒತ್ತುವರಿ ಮಾಡಿಕೊಂಡಿರುವವರು ಮಾತು ಕೇಳದೆ ಹೋದರೆ ಕಾನೂನು ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ಫುಲ್ ಪವರ್ ನೀಡಿದೆ.
Advertisement
ಕಂದಾಯ ಇಲಾಖೆ ಜೊತೆಗೂಡಿ ಸರ್ಕಾರಿ ಶಾಲಾ-ಕಾಲೇಜುಗಳ ಆಸ್ತಿ ರಕ್ಷಣೆ ಮತ್ತು ದಾಖಲಾತಿ ರಕ್ಷಣೆಗೆ ವಿಶೇಷ ಕ್ರಮವನ್ನ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಜೇಮ್ಸ್ ವೆಬ್ ಟೆಲಿಸ್ಕೋಪ್‍ನಲ್ಲಿ ಸೆರೆ ಸಿಕ್ಕ ಗುರು-ಚಂದ್ರನ ಬೆರಗುಗೊಳಿಸುವ ಫೋಟೋ
ರಾಜ್ಯದಲ್ಲಿ ಸುಮಾರು 44 ಸಾವಿರ ಪ್ರಾಥಮಿಕ ಶಾಲೆಗಳು, 4.5 ಸಾವಿರ ಪ್ರೌಢಶಾಲೆಗಳು ಸುಮಾರು 1,200ಕ್ಕೂ ಹೆಚ್ಚು ಪಿಯುಸಿ ಕಾಲೇಜು ಸೇರಿ ಒಟ್ಟು 50 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಇವೆ. ಇವುಗಳಲ್ಲಿ ಶಾಲಾ-ಕಾಲೇಜುಗಳ ಜಮೀನಿನ ಒತ್ತುವರಿ ಮಾಡಿಕೊಂಡಿರೋ ಪ್ರಕರಣ ಹೆಚ್ಚಾಗಿವೆ. ಹೀಗಾಗಿ ಶಾಲಾ-ಕಾಲೇಜುಗಳ ಆಸ್ತಿ ಸಂರಕ್ಷಣೆಗೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಒತ್ತುವರಿ ತೆರವು ಮಾಡದವರ ವಿರುದ್ಧ ದಂಡಂ ದಶಗುಣಂ ನಿಯಮ ಪಾಲನೆಗೆ ಮುಂದಾಗಿದೆ.