ಬೆಂಗಳೂರಿನ ಸಂಚಾರ ಜೀವನಾಡಿ ನಮ್ಮ ಮೆಟ್ರೋ.. ನನ್ನ ದಿನದ ಜರ್ನಿ ಆರಂಭವಾಗೋದು ಇದರಲ್ಲೇ… ಈ ದಿನದ ಜರ್ನಿ ಸಕತ್ ಸ್ಪೆಷಲ್.. ಯಾಕೆ ಗೊತ್ತಾ..? ನಾನು ಕೇಳಿದ ಒಂದು ಸಕತ್ ಸ್ವೀಟ್ ವಾಯ್ಸ್… ಒಂದು ಬ್ಯೂಟಿಫುಲ್ ಸ್ಮೈಲ್.. ಸಂಚರಿಸುವ ರೈಲು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ನಿಲ್ದಾಣಕ್ಕೆ ತಲುಪಲಿದೆ. ಈ ಅನೌನ್ಸ್ ಕೇಳಿ ಬರುತ್ತಿದ್ದಂತೆ.. ಅದೇ ಧ್ವನಿಯನ್ನು ಯಾರೋ ರಿಪೀಟ್ ಮಾಡ್ತಿದ್ರು.. ನೋಡಿದ್ರೆ ಒಬ್ಬಳು ಚೆಂದದ ಶಾಪಗ್ರಸ್ಥ ದೇವತೆ ಭೂಮಿಗೆ ತನ್ನ ಜೀವನ ಕಳೆಯಲು ಬಂದಂತೆ ನಿಂತ ಹಾಗೆ ಫೀಲ್ ಆಯ್ತು..!
ಅದನ್ನ ಕೇಳ್ತಿದ್ದಂತೆ ತಿರುಗಿ ನಗು ಬೀರಿದ ನನಗೆ ಅವಳು ಅಷ್ಟೇ ಚೆಂದದ ನಗುವಿನ ಗಿಫ್ಟ್ ಕೊಟ್ಲು..! ನಾನು ಏರಿದ ಆ ಕಂಫರ್ಟ್ನ್ನೇ ಏರಿದ ಅವಳ.. ಆ ನಗು ಮುಖ ಅದೆಷ್ಟು ಪಾಸಿಟಿವ್ ವೈಬ್ಸ್ ಸೃಷ್ಟಿಸಿತ್ತು ಅಂದ್ರೆ.. ಇಡೀ ಕಂಫರ್ಟ್.. ಒಂದು ಗಾರ್ಡನ್ ಥರ ಫೀಲ್ ಆಗ್ತಿತ್ತು..! ನಡುವೆ ಮೆಟ್ರೋ ಅನೌನ್ಸ್‌ಮೆಂಟ್‌ನ ಅವಳು ರಿಪೀಟ್ ಮಾಡೋಕೆ ಟ್ರೈ ಮಾಡ್ತಿದ್ಲು.. ಆದ್ರೆ ಜನ ಇದಾರೆ ಅಂತ ಸುಮ್ನೆ.. ಅನೌನ್ಸ್ ಆದಾಗ ಹಾಗೇ ಸ್ಪೀಕರ್ ಕಡೆ ಕಿವಿಕೊಟ್ಟು ನನ್ನನ್ನ ನೋಡ್ತಿದ್ಲು..! ಇದನ್ನೂ ಓದಿ: ದೂರಾದ ರಾಧಾಕೃಷ್ಣರನ್ನು ಜಗತ್ತು ಪ್ರೇಮದಿಂದಲೇ ಗುರುತಿಸೋದು!

ನನಗೂ ಅವಳ ಧ್ವನಿಯಲ್ಲಿ ಆ ಅನೌನ್ಸ್ ಕೇಳ್ಬೇಕು ಅನ್ಸೋದು..!! ಮಾತಾಡ್ಸಿ… ಪರಿಚಯ ಮಾಡ್ಕೊಂಡು, ನಂಬರ್ ಕೊಟ್ಟು.. ಆಗಾಗ ಅವಳ ಧ್ವನಿ ಕೇಳ್ಬೇಕು ಅನ್ನಿಸ್ತಿತ್ತು.. ಆದ್ರೆ… ʻಇವನು ಯಾವನೋ.. ಒಂದು ಸಲ ನೋಡಿ, ಸ್ಮೈಲ್ ಮಾಡಿದ್ಕೆ ನಂಬರ್ ಕೇಳ್ತಿದಾನೆ ಅಂದ್ಕೊಬಿಡ್ತಾಳೆ ಅಂತ ಸುಮ್ನಾದೇ..! ಅವಳದ್ದು ಅಷ್ಟು ಸ್ವೀಟ್ ವಾಯ್ಸ್..! ಮತ್ತೆ ಮತ್ತೆ ಕೇಳುವಷ್ಟು..! ಅಷ್ಟೊಂದು ಚೆಂದದ ಧವನಿಯನ್ನ ನನ್ನ ಲೈಫ್‌ಲ್ಲಿ ಯಾವತ್ತೂ ಕೇಳಿರಲೇ ಇಲ್ಲ..! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಒಬ್ಬ ಕವಿ ಬರಿತಾನೇ ʻಮುಗುಳ್ನಗೆಯಲ್ಲೇ ನನ್ನನ್ನ ಅವಳು ಲೂಟಿ ಮಾಡ್ಬಿಟ್ಲುʼ ಅಂತ, ಹಾಗೇ ಇವಳು ಅಷ್ಟೇ ಧ್ವನಿ, ಕಿರುನಗೆಯಲ್ಲೇ ನನ್ನ ಕದ್ದು ಸಾಗಿ ಬಿಟ್ಲು..! ಮತ್ತೆ ಆ ನಗು, ತುಂಟ ಧ್ವನಿ ನನ್ನ ಪಾಲಿಗೆ ಸಿಗುತ್ತಾ..? ಗೊತ್ತಿಲ್ಲ..! ಆದ್ರೆ ಆ ಧ್ವನಿ..ಆ ನಗು ನನ್ನ ಬದುಕಿನ ಪ್ರೇಮ ಶಾಸನದಂತೆ ಅಚ್ಚಾಗಿ ಉಳಿದೇ ಇರುತ್ತೇ. ನನಗೆ ಮತ್ತೆ ನೀನು ಸಿಗಬೇಕು. ಅದೇ ರೀತಿ ನಿನ್ನ ಪಾಡಿಗೆ ನೀನು ಮಾತಾಡಬೇಕು, ನಾನದನ್ನ ಕದ್ದು ಕೇಳಬೇಕು.. ಅದು ಗೊತ್ತಾಗುತ್ತಿದ್ದಂತೆ.. ಆ ಪುಟ್ಟು ಮುಖದಲ್ಲಿ ನಗುವಿನ ಹೂವೊಂದು ಅರಳಬೇಕು. ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!

ಅವಳ ಜೊತೆ ಒಂದಿಬ್ರು ಹುಡುಗೀರು ಬರಬೇಕಿತ್ತು ಅವತ್ತು! ಯಾಕೇ ಗೊತ್ತಾ? ಕೊನೇ ಪಕ್ಷ ನಿನ್ನ ಹೆಸರಾದ್ರೂ ನನಗೆ ಗೊತ್ತಾಗಿರೋದು.. ಅವರಲ್ಲಿ ಯಾರಾದ್ರೂ.. ನೋಡು ಐಶು ಅಲ್ಲಿಗೆ ಹೋಗೋಣ್ವಾ? ಅಥವಾ ನವ್ಯಾ ಇಲ್ಲಿಗೆ ಹೋಗೋಣ್ವಾ ಅಂದಿರೋರು.. ನಿನ್ನ ಹೆಸರು ಹೀಗಾದ್ರೂ ಗೊತ್ತಾಗಿರೋದು..! ಆದ್ರೆ ಒಬ್ಬಳೇ ಬಂದಿದ್ದೆ ನೀನು.. ಈಗ ಹೇಗೆ ಹುಡುಕಲಿ ಮತ್ತೆ..? ಹೆಸರು.. ಊರು.. ವಿಳಾಸ ಇಲ್ಲದ ನಿನ್ನನ್ನ? ಗೊತ್ತಿಲ್ಲ.. ನನ್ನ ಇಷ್ಟು ವರ್ಷದ ಜರ್ನಿಯಲ್ಲಿ ಆ ನಿಲ್ದಾಣದಲ್ಲಿ ನನಗೆ ʻನೀನುʼ ಕಂಡಿದ್ದು ಅದೇ ಮೊದಲು, ಯಾರಿಗೆ ಗೊತ್ತು ಮತ್ತೆ ಹೀಗೆ ಎಲ್ಲೋ ಇದ್ದಕ್ಕಿದ್ದಂತೆ ಎದುರಾಗಿ ಬಿಡಬಹುದು.. ಆಗದೇನು ಇರಬಹುದು? ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!
ನಾಳೆಯಿಂದ ಪ್ರತಿದಿನ ನಾನು ಮತ್ತೆ ಅದೇ ಸಮಯಕ್ಕೆ ಬಂದು ಮೆಟ್ರೋ ನಿಲ್ದಾಣದಲ್ಲಿ ಅವಳನ್ನ ಎದುರಾಗೋವರೆಗೂ ಕಾಯ್ತೀನಿ… ಒಂದು ದಿನ ಅವಳು ಇಳಿದ ಆ ಮಂತ್ರಿಮಾಲ್ ಬಳಿ ಇಳಿದು ಬೀದಿ ಬೀದಿ ಅಲಿತೀನಿ.. ಅಕಸ್ಮಾತ್ ಎಲ್ಲಾದ್ರೂ ಪಾನಿಪೂರಿ ತಿಂತ ಇರೋ ಅವಳು ಸಿಕ್ಕು, ಅದೇ ಸ್ಮೈಲ್ ಕೊಡಬಹುದು ಅಲ್ವಾ? ನಾನಂತ್ರೂ ಫಿಕ್ಸ್ ಆಗಿದ್ದೀನಿ.. ಮತ್ತೆ ಅವಳೇನಾದ್ರೂ ಎದುರಿಗೆ ಸಿಕ್ರೆ.. ಮಾತಾಡಿಸದೇ ಬಿಡೋ ಮಾತೇ ಇಲ್ಲ.. ಕೊನೆ ಪಕ್ಷ.. ನಂಬರ್ ಆದ್ರೂ ಕೇಳಿ ಫ್ರೆಂಡ್ ಆಗಿದ್ಕೊಂಡು ಒಳ್ಳೆ ಸಮಯ ನೋಡಿ.. ಬದುಕಿನ ಬಾಹುಬಂಧನದಲ್ಲಿ ತಬ್ಬಿಕೊಳ್ಳಬಹುದು..! ಇದನ್ನೂ ಓದಿ:ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ಅವಳು ಎದುರಿಗೆ ಸಿಕ್ಕಿದ್ರೆ ನನ್ನ ಗುರುತು ಹಿಡಿತಾಳಾ..? ಯಾರಿಗೆ ಗೊತ್ತು? ನಾನೇ ಹೇಳಿ ಪರಿಚಯ ಮಾಡ್ಕೊಂಡ್ರಾಯ್ತು… ಅಷ್ಟೆಲ್ಲ ನನಗೆ ಧೈರ್ಯ ಇದಿಯಾ..? ಪ್ರೇಮ ಅಂದ್ರೆ ಯುದ್ಧಾನಾ? ಅಲ್ವಲ್ಲಾ.. ದ್ವೇಷಿಸೋಕೆ ಭಯ ಬೇಕು.. ಪ್ರೀತ್ಸೋಕೆ, ಪ್ರೀತಿಗೆ ನನ್ನಿಂದ ದ್ರೋಹ ಆಗಲ್ಲ ಎನ್ನುವ ನಂಬಿಕೆ ಸಾಕು.. ಪ್ಯಾರ್ ಕಿಯಾ ತೋ ಡರ್‌ನಾ ಕ್ಯಾ..?? ಇದನ್ನೂ ಓದಿ: ವಾಸ್ತವದ ಪ್ರೇಮದಲ್ಲಿ ನಕ್ಷತ್ರ ತಂದು ಜಡೆಗೆ ಅಲಂಕರಿಸೋದು ಇರಲ್ಲ..!

