ಹಾಯ್ ಡಿಯರ್!
ನಾನು ಪ್ರೀತಿ (Love), ಮದುವೆ (Marriage) ಅಂತ ಏನೆಲ್ಲ ಕನಸು ಕಾಣುವಾಗ ನೀನು ಅದೆಷ್ಟು ಸ್ಪಷ್ಟ! ಪ್ರೀತಿ ಅಂದ್ರೆ ಪ್ರೀತಿ ಅಷ್ಟೇ.. ಒಂದಾಗ್ತೀವೋ ಇಲ್ವೋ? ಆದ್ರೆ ಪ್ರೀತಿ ಅಂತ್ರೂ ಪ್ರಾಮಾಣಿಕವಾಗಿ ಮಾಡ್ತೀನಿ… ಮಾಡ್ತಾನೆ ಇರ್ತಿನಿ ಅಂದೆ. ನೀನೆಷ್ಟು ಪ್ರಾಕ್ಟಿಕಲ್ ವಿಭಾ! ನೀನಂತ ಅಲ್ಲ ಬಹುಶಃ ಎಲ್ಲಾ ಹುಡುಗರಿಗೂ ಇಂತಹ ಟಾಸ್ಕ್ ಕೊಡೋ ಮಾಸ್ಟರ್ ಮೈಂಡ್ ಸಿಗ್ಬೇಕು! ಅವಾಗಾದ್ರೂ ಹುಡುಗರು ಸ್ವಲ್ಪ ಉದ್ಧಾರ ಆಗ್ತೀವೇನೋ?
ಹೌದು ನಾವು ಪ್ರೀತಿಗೆ ಮದುವೆ ಅನ್ನೋ ಒಂದು ಗುರಿ ಇಟ್ಟು ಬಿಡ್ತೀವಿ ಅಲ್ವಾ? ಪ್ರೀತಿಯ ಗುರಿ ಪ್ರೀತಿಯನ್ನೇ ಬದುಕೋದು ಅಷ್ಟೇ. ಅದಕ್ಕೆ ಮದುವೆ ಅನ್ನೋ ಬಂಧ ಯಾಕೆ ಒಂದು ನಿಲ್ದಾಣ ಆಗ್ಬೇಕು? ಭೂಮಿಯ ಮೊದಲ ಪ್ರೇಮ ಕತೆ ರಾಧೆಯನ್ನೇ ನೋಡು ಕೃಷ್ಣನ್ನ (Radha Krishna) ಅಷ್ಟೊಂದು ಪ್ರೀತ್ಸಿದ್ರೂ, ಮದುವೆ ಆಗೋಕೆ ಆಗಲೇ ಇಲ್ಲ. ಹಾಗಂತ ಪ್ರೀತಿ ಅಂತ ಬಂದಾಗ ಮೊದಲು ಕಣ್ಣಿಗೆ ಕಟ್ಟೋ ಚಿತ್ರ ಅವರಿಬ್ಬರದ್ದೇ! ಪ್ರೇಮ ಅಂದ್ರೆ ಅಷ್ಟೇ ದೈವಿಕವಾದದ್ದು! ಇದನ್ನೂ ಓದಿ: ಪ್ರೇಮ ನೌಕೆಯ ಕಿಟಕಿ ಅಂಚಲ್ಲಿ ಸಿಕ್ಕ ಕಾಡು ಮಲ್ಲಿಗೆ ಹೂ!
ದೈವಿಕ ಅನ್ನೋದಕ್ಕೂ ನೆನಪಾಯ್ತು, ಮಹಾನ್ ಕವಿ (Poet) ಒಬ್ರೂ ಒಂದು ಕಡೆ ಬರಿತಾರೆ. ನಾವು ದೇವರನ್ನ ನೋಡದೇ ಹೇಗೆ ಪೂಜೆ ಮಾಡ್ತೀವೋ, ಹಾಗೇ ಪ್ರೀತಿನಾ ಸಹ ಜೊತೆ ಇರದೇ, ದೂರದಿಂದಲೇ ಮಾಡೋಕೆ ಸಾಧ್ಯ ಅಂತ. ಹೌದಲ್ವಾ ಪ್ರೀತಿ ಅನ್ನೋದು ಅದೆಷ್ಟೆಲ್ಲ ಆಪ್ಷನ್ಸ್ ಕೊಟ್ಟಿದೆ? ನಾವ್ಯಾಕೆ ಮದುವೆ ಆಗ್ಬೇಕು, ಜೊತೆಯಲ್ಲೇ ಇರ್ಬೇಕು ಅಂತ ಅಷ್ಟೊಂದು ಅರಗಿನ ಅರಮನೆ ಕಟ್ತೀವೋ? ಕೊನೆಗೆ ಒಂದೇ ಕಿಡಿಗೆ ಕರಗಿ ಹೋಗ್ತೀವೋ?
ಆದ್ರೂ ನೀನು ನನ್ನ ಬದುಕಿನ ಕೊನೆಯ ನಿಲ್ದಾಣ. ಎಲ್ಲೋ ಅಲೆದು, ಏನೇನೋ ಕನಸು ಕಂಡು, ಅದೇನೋ ಕಳವಳಗಳು ಚಂಡಮಾರುತದಂತೆ ಎದ್ದಾಗ ನೆಮ್ಮದಿಗೆ ಕೊನೆಗೆ ಬಂದು ಒರಗೋದು ನಿನ್ನ ನೆನಪಿನ ತಲೆ ದಿಂಬಿಗೆ. ಅದೇನೋ ಗೊತ್ತಿಲ್ಲ, ನೀನಂದ್ರೆ ಸಮಾಧಾನ… ನಿನ್ನ ನೆನಪೆಂದ್ರೆ ನೆಮ್ಮದಿ..! ಆದ್ರೆ ಈ ಪ್ರೇಮದ ಕೊಂಬೆಯ ಮೇಲೆ ಕೂರುವ ಈ ಪುಟ್ಟ ಹೃದಯದ ಹಕ್ಕಿಗಳು ಒಂದಾಗದೇ ಇದ್ರೂ ಸದಾ ಖುಷಿಯಾಗಿರಬೇಕು.
ಹೀಗೆಲ್ಲ ಮನಸಲ್ಲಿ ಅಂದ್ಕೊಂಡು ನಡ್ಕೊಂಡು ಬರ್ತಿದ್ದೆ. ಈಗ ಕಾರ್ತಿಕ ಮಾಸ (Kartika Masa) ಅಲ್ವಾ ಎಲ್ಲಾ ಮನೆಗಳ ಮುಂದೆ ದೀಪ ಹಚ್ತಿದ್ರೂ. ಎಲ್ಲಾ ದೀಪದಲ್ಲೂ ನಿನ್ನದೇ ಮುಖ.. ʻಕಾರ್ತಿಕ ಸಿರಿ ದೇವಾಲಯದಿ ಓಲಾಡುತಿರೊ ದೀಪಾಂಜಲಿಯು ನೀʼ ಈ ಸಾಲು ಹಾಗೇ ಎಸ್‌ಪಿಬಿ ವಾಯ್ಸ್‌ಲ್ಲಿ ಮನಸ್ಸಲ್ಲಿ ತೇಲಿಬಂತು. ನಿನ್ನನ್ನೇ ವರ್ಣಿಸೋಕೆ ಈ ಸಾಲು ಕವಿಯಿಂದ ಹುಟ್ಟಿತ್ತೋ ಏನೋ? ಹೀಗೆ ಅಂದ್ಕೊಂಡು ಮುಂದೆ ಬಂದೆ.
ಹೌದು ನೀನು ನನ್ನ ಪಾಲಿಗೆ ಒಂಥರಾ ದೀಪವೇ, ದೀಪಾವಳಿನೇ.. ನನ್ನ ಬದುಕಿನ ದಾರಿಗೆ ದೀಪ ಹಚ್ಚಿಟ್ಟ ನಿನ್ನ ಕಣ್ಗಳಿಗೆ (Eyes) ಕೋಟಿ ದೀಪಾವಳಿಯ ಶಕ್ತಿ ಇದೆ! ಬಹುಶಃ ಈ ಬದುಕಿನುದ್ದಕ್ಕೂ ನಿನ್ನ ಕಣ್ಣಿನ ಬಗ್ಗೆ ಬರಿತಾ ಹೋದ್ರೇ ಅದೆಲ್ಲ ಮುಗಿಯೋದೇ ಇಲ್ವೇನೋ? ಆ ಹಣತೆಯ ಕಣ್ಗಳು, ಕುಡಿ ದೀಪದ ಜ್ವಾಲೆ.. ಇದರ ಬಗ್ಗೆ ಮತ್ತೊಂದು ಪತ್ರದಲ್ಲಿ ಬರಿತೀನಿ ಓಕೆ ನಾ?
ಈ ಥರ ಆಲೋಚನೆಗಳಿಂದಲೇ ಇರಬೇಕು ನಮ್ಮಂತ ಕವಿಗಳೆಲ್ಲ ನಿಮ್ಮ ಕಣ್ಣಿಗೆ ಕಪಿ ಥರ ಕಾಣೋದು! ಏನಂದ್ರೂ ನಿನ್ನಷ್ಟು ಪ್ರಾಕ್ಟಿಕಲ್ ಅಲ್ಲ ನಾನು. ನಗು ಬಂದ್ರೆ ನಗಾಡ್ತೀನಿ. ಅಳು ಬಂದ್ರೆ ಅಳ್ತೀನಿ.. ನಿನ್ನ ಹೆಸರು ಕೂಗ್ಬೇಕು ಅಂದ್ರೆ, ಆ ಬೆಟ್ಟದ ತುದಿಗೆ ಹೋಗಿ ಕೂಗ್ತೀನಿ..! ಅದಕ್ಕಾಗಿ ಫ್ಲಾಶ್ ಬ್ಯಾಕ್, ಫ್ಯೂಚರ್ ಬಗ್ಗೆ ಎಲ್ಲಾ ಯಾಕೆ ಆಲೋಚನೆ ಮಾಡ್ಲಿ ಅಂತ ಅನ್ಸುತ್ತೆ, ನನಗೆ. ನಾನು ಇಷ್ಟೇ ಪ್ರಾಕ್ಟಿಕಲ್! ಇದನ್ನೂ ಓದಿ: ಏಯ್ ಹುಡುಗ.. ನನಗೆಲ್ಲ ಗೊತ್ತು ಕಣೋ..!
 
					


 
		 
		 
		 
		 
		 
		 
		 
		 
		