ಚಿಕ್ಕಮಗಳೂರು: ಫೋನಿನಲ್ಲಿ ಮಾತನಾಡಿಕೊಂಡು ಒನ್ ವೇ ನಲ್ಲಿ ಬಂದ ಯುವಕನಿಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಕೈ ಕಟ್ ಆಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
Advertisement
ನಗರದ ಕೆ.ಎಂ.ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿ ಮುಂಭಾಗ ಈ ದುರ್ಘಟನೆ ಸಂಭವಿಸಿದೆ. ಫೋನ್ ನಲ್ಲಿ ಮಾತನಾಡಿಕೊಂಡು ಒನ್ ವೇನಲ್ಲಿ ಬಂದ ಯುವಕ ಕಾರಿನ ಪಕ್ಕ ನಿಲ್ಲಿಸಿದ್ದಾರೆ. ಫೋನ್ ನಲ್ಲಿ ಮಾತನಾಡಿಕೊಂಡು ಮುನ್ನುಗ್ಗಿದ ಪರಿಣಾಮ ಎದುರಿನಿಂದ ಬಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ಸವಾರ ಕೆಳಗೆ ಬೀಳುತ್ತಿದ್ದಂತೆ ಪಕ್ಕದಲ್ಲಿದ್ದ ಲಾರಿ ಆತನ ಎಡಗೈ ಮೇಲೆ ಹತ್ತಿದ ಪರಿಣಾಮ ಬೈಕ್ ಸವಾರನ ಎಡಗೈ ಕಟ್ ಆಗಿದೆ. ಇದನ್ನೂ ಓದಿ: ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್
Advertisement
ಫೋನಿನಲ್ಲಿ ಮಾತನಾಡಿಕೊಂಡು ಓನ್ ವೇನಲ್ಲಿ ಬಂದ ಯುವಕನನ್ನು ವಿಶ್ವಾಸ್ ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ನ್ಯಾಯಸಮ್ಮತವಾಗಿ, ರಸ್ತೆ ನಿಯಮಗಳಡಿ ಬಂದು ಅಪಘಾತಕ್ಕೀಡಾಗಿ ಕೈ ಕಳೆದುಕೊಂಡ ವ್ಯಕ್ತಿಯನ್ನ 55 ವರ್ಷದ ಸುಂದರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಕ್ಷೇತ್ರವಾರು ಶಾಸಕರ ಜೊತೆ ಸಭೆ ಮಾಡಿ ಲಸಿಕೆ ಅಭಿಯಾನ ಮಾಡ್ತೇವೆ: ಆರ್.ಅಶೋಕ್
Advertisement
Advertisement
ಅಪಘಾತದಿಂದ ತೀವ್ರ ಗಾಯಾಗೊಂಡ ಸುಂದರ್ ಅವರನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸುಂದರ್ ನಗರದ ಸಾಮಿಲ್ ವೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಅಪಘಾತದದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು