ಏರ್ ಸ್ಟ್ರೈಕ್ – ಕೇಂದ್ರ, ಮೋದಿ ವಿರುದ್ಧ ರಮೇಶ್ ಕುಮಾರ್ ಪರೋಕ್ಷ ಟಾಂಗ್

Public TV
2 Min Read
MODI RAMESH

ಕೋಲಾರ: ದೇಶಭಕ್ತಿ ಹಾಗೂ ದೇಶ ಕಾಯುವ ಸೈನ್ಯದ ಹೆಸರಿನಲ್ಲಿ ರಾಜಕೀಯ ಮಾಡಬಾರದು ಅದು ಶುದ್ಧ ಅವಿವೇಕಿತನ ಎಂದು ಕೇಂದ್ರ ಸರ್ಕಾರ ಹಾಗೂ ಮೋದಿಗೆ ಸ್ಪೀಕರ್ ರಮೇಶ್ ಕುಮಾರ್ ಕೋಲಾರದಲ್ಲಿ ಪರೋಕ್ಷವಾಗಿ ಟಾಂಗ್ ನೀಡಿದ್ರು.

ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಭಾರತೀಯ ಸೈನಿಕರಿಂದ ಉಗ್ರರ ಮೇಲೆ ನಡೆದ ಏರ್ ಸ್ಟ್ರೈಕ್‍ಗೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರ ಯೋಧರಿಗೆ ಇಡೀ ದೇಶ ಗೌರವ ಸಮರ್ಪಣೆ ಮಾಡಬೇಕು. ಅವರ ಕುಟುಂಬಗಳಿಗೆ ನಾವೆಲ್ಲ ಋಣ ಹೊಂದಿದ್ದೇವೆ. ಸೈನಿಕರು ಮಾಡಿರುವಂತಹ ಒಳ್ಳೆಯ ಕೆಲಸವನ್ನ ನಾವೇ ಮಾಡಿದಂತೆ ತೋರಿಸುವುದು ಸರಿಯಲ್ಲ. ಅವರು ದೇಶ ಕಾಯೋ ಸೈನಿಕರು, ನಾವು ಓಟು ಕೇಳುವವವರು ಹೀಗಾಗಿ ಅವರ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದರು.

RAMESH

ಫೈಟ್ ಮಾಡುವವರು ಯೋಧರು, ವೋಟು ಕೇಳುವವರು ನಾವು. ಅವರು ಅಲ್ಲಿ ಪ್ರಾಣ ಬಿಟ್ಟು ಫೈಟ್ ಮಾಡುವುದಕ್ಕೆ ನಾವು ಇಲ್ಲಿ ಅದನ್ನು ವೋಟ್ ಗೆ ಉಪಯೋಗಿಸಿಕೊಳ್ಳಬಾರದು. ಅದನ್ನು ಯಾರು ಮಾಡಿದರೂ ಅಪರಾಧ. ವೀರ ಯೋಧರಿಗೆ ಇಡೀ ದೇಶ ನಮನ ಅರ್ಪಣೆ ಮಾಡಬೇಕು. ಯೋಧರ ಕುಟುಂಬಗಳಿಗೆ ನಾವೆಲ್ಲರೂ ತಲೆಬಾಗಿ ಅಭಿನಂದನೆ ಸಲ್ಲಿಸಬೇಕು. ಅವರು ಪ್ರಾಣದ ಮೇಲೆ ಆಸೆ ಬಿಟ್ಟು ಬಂದೂಕು ಇಟ್ಟುಕೊಂಡು ಬಾರ್ಡರ್ ನಲ್ಲಿ ನಿಂತುಕೊಂಡಿದ್ದರೆ ನಮ್ಮ ಬೇಳೆ-ಕಾಳು ಬೇಯಿಸಿಕೊಳ್ಳುವುದಕ್ಕೆ ಹೋಗಬಾರದು. ಅದು ಶುದ್ಧ ಅವಿವೇಕಿತನ ಎಂದು ಅವರು ತಿಳಿಸಿದ್ರು.

BJP LOGO

ಯಾರೇ ಆಗಲಿ, ಎಷ್ಟು ದೊಡ್ಡವರೇ ಆಗಲಿ. ವೀರ ಯೋಧರು ದೇಶಪ್ರೇಮಕ್ಕಾಗಿ ಪ್ರಾಣದ ಮೇಲೆ ಆಸೆ ತೊರೆದು ಅಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ. ಅದು ನಾವಿದ್ದರೂ ಮಾಡುತ್ತಾರೆ. ನೀವಿದ್ದರೂ ಅಥವಾ ಇನ್ನೊಬ್ಬರು ಇದ್ರೂ ಮಾಡ್ತಾರೆ. ಅದಕ್ಕೆ ನಾನು ಅಲ್ಲಿಗೆ ಹೋಗಿ ಬಟ್ಟೆ ಬಿಚ್ಚಿ ಫೈಟ್ ಮಾಡುತ್ತೇನೆ ಎಂದು ಹೇಳಿ ವೋಟ್ ಕೇಳುವ ಪ್ರಯತ್ನ ಮಾಡೋದು ತಪ್ಪು ಎಂದು ಗರಂ ಆದ್ರು.

 

ದೇಶ ಕಾಯುತ್ತಿರುವವರಿಗೆ ಎಲ್ಲವನ್ನೂ ತ್ಯಾಗ ಮಾಡಬೇಕು. ಯೋಧರಿಗೆ ನೈತಿಕ ಬೆಂಬಲ ಕೊಡಬೇಕು. ಅವರ ವಿಚಾರದಲ್ಲಿ ಹಗುರವಾದ ರಾಜಕಾರಣ ಮಾಡಬಾರದು ಎಂದು ರಮೇಶ್ ಕುಮಾರ್ ಹೇಳಿದ್ರು.

https://www.youtube.com/watch?v=3hPj01mD1og

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *