ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಈಗ ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ದೂರು ನೀಡಿದ್ದಾರೆ.
ಆಡಿಯೋದಲ್ಲಿ ಸ್ಪೀಕರ್ ಸೇರಿದಂತೆ ನ್ಯಾಯಾಧೀಶರ ಹೆಸರು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್‍ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದೂರು ನೀಡಿದ್ದಾರೆ. ಈ ದೂರು ಸ್ವೀಕರಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಈಗ ಏನು ಮಾಡಬೇಕು ಅನ್ನೋ ಚಿಂತೆ ಆರಂಭವಾಗಿದೆ. ದೂರಿನ ಮೇಲೆ ಸದನ ಸಮತಿ ರಚನೆ ಮಾಡಬೇಕೇ ಅಥವಾ ಪೋಲೀಸರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಬೇಕೇ ಎನ್ನುವ ಗೊಂದಲದಲ್ಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ದೂರು ಸ್ವೀಕರಿಸಿದ ಬಳಿಕ ಅಡ್ವೊಕೇಟ್ ಜನರಲ್ ಜೊತೆ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಸ್ಪೀಕರ್ ಚರ್ಚೆ ನಡೆಸಿ ಸೋಮವಾರದ ಒಳಗಡೆ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ದೂರಿನ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡು ಸದನಕ್ಕೆ ಮಾಹಿತಿ ನೀಡುವ ಸಾಧ್ಯತೆಯಿದೆ.
Advertisement
ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಿ ರಾಯಚೂರಿಗೆ ತೆರಳಿದ್ದ ಬಿಎಸ್‍ವೈ ಮಧ್ಯರಾತ್ರಿ ದೇವದುರ್ಗದ ಐಬಿಯಲ್ಲಿ ಕುಳಿತು ಯಾದಗಿರಿಯ ಗುರುಮಠಕಲ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರಿಕೆ ಕರೆ ಮಾಡಿ ಐಬಿಗೆ ಬರಲು ಹೇಳಿ ಡೀಲ್ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
Advertisement
ನಿನ್ನ ತಂದೆಗೆ ವಯಸ್ಸಾಗಿದೆ. ಹೀಗಾಗಿ ನೀನು ಬಿಜೆಪಿಗೆ ಬಾ. ಬಳಿಕ ನಿನ್ನನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡುತ್ತೇವೆ. ನೀನು ಸೀದಾ ಇಂದೇ ಮುಂಬೈಗೆ ಹೋಗು ಎಂದು ಶಾಸಕರ ಪುತ್ರ ಶರಣಗೌಡಗೆ ಆಫರ್ ನೀಡಿದ್ದಾರೆ. ಪೇಮೆಂಟ್ ಬಗ್ಗೆ ಯೋಚನೆ ಮಾಡಬೇಡ. ಸ್ಪೀಕರ್ ಅವರಿಗೂ 50 ಕೋಟಿ ರೂ. ಕೊಟ್ಟು ಬುಕ್ ಮಾಡಲಾಗಿದೆ. ಮೋದಿ ಹಾಗೂ ಅಮಿತ್ ಶಾಗೆ ಹೇಳಿ ಈಗಾಗಲೇ ಎಲ್ಲಾ ವ್ಯವಸ್ಥೆ ಆಗಿದೆ. ಹೀಗಾಗಿ ನಿನಗೆ ಖಾತೆ ಕೊಡ್ತೀವಿ ಎಷ್ಟು ಬೇಕಾದ್ರೂ ದುಡ್ಡು ಮಾಡ್ಕೋ. ನಮ್ಮ ಜೊತೆ ಈಗಾಗಲೇ 16 ಮಂದಿ ಶಾಸಕರಿದ್ದಾರೆ. ನೀನು ಬಂದ್ರೆ 17 ಆಗುತ್ತದೆ ಎಂದು ಬಿಜೆಪಿಯವರು ಆಫರ್ ನೀಡಿರುವುದಾಗಿ ಶರಣಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಆಡಿಯೋದಲ್ಲೇನಿದೆ..?
ಬಿಎಸ್‍ವೈ : ಫಾದರ್ ಏಜ್ ಏನು
ಶಿರಣಗೌಡ : 78
ಬಿಎಸ್‍ವೈ : ಮುಂದೆ ಏನಾದ್ರು ಬಂದ್ರೆ ನೀನೇ ನಿಲುತ್ತಿಯಾ
ಶರಣಗೌಡ : ಏನೋ ನೀವು ಹೇಳಿದ ಹಾಗೆ ಸರ್ ಮುಂದಿನ ಪರಿಸ್ಥಿತಿ ನೋಡಬೇಕಲ್ವ ಸರ್
ಬಿಎಸ್‍ವೈ : ಇನ್ನೇನು 4 ದಿನದಲ್ಲಿ ಎಲ್ಲಾ ಮುಗಿದು ಹೋಗುತ್ತೆ. ನಮ್ಮ ಸರ್ಕಾರ ಬರುತ್ತೆ ಮಂತ್ರಿಯಾಗ್ತಿರಾ. ಅಪ್ಪ ಬೇಡಾ ಅಂದ್ರೆ ನೀನೇ ಮಂತ್ರಿ ಆಗ್ತೀಯಾ
ಶರಣಗೌಡ : ನಾನೊಬ್ಬನೆ ಬಂದ್ರೆ ಏನಾಗುತ್ತೆ ಅನ್ನೊ ಭಯ
ಬಿಎಸ್‍ವೈ : ಒಂದು ವಿಷಯ ತಿಳ್ಕೋ ಹೇಗೂ ಎಲ್ಲ ನೀನೇ ನೋಡ್ಕೋಳೋದು ಬಾಂಬೆಗೆ ಬಾ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv