ಕೆಲ ಪುರುಷರು ಅತ್ಯಾಚಾರ ಮಾಡಿದಾಗ, ಎಲ್ಲಾ ಭಾರತೀಯರಿಗೂ ನಾಚಿಕೆಯಾಗ್ಬೇಕು: ಗ್ಯಾಂಗ್‌ರೇಪ್‌ಗೆ ಗಾಯಕಿ ಕಿಡಿ

Public TV
1 Min Read
Chinmayi Sripaada

ನವದೆಹಲಿ: ಜಾರ್ಖಂಡ್‌ನ (Jharkhand) ದುಮ್ಕಾ ಜಿಲ್ಲೆಯಲ್ಲಿ ಸ್ಪ್ಯಾನಿಷ್ ಪ್ರವಾಸಿಯೊಬ್ಬಳ (Spanish Tourist’s Gang-Rape) ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripaada) ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಎಲ್ಲಾ ಭಾರತೀಯರು ನಾಚಿಕೆ ಪಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಘಟನೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಗಾಯಕಿ, ಕೆಲ ಭಾರತೀಯರು ಒಲಿಂಪಿಕ್ ಪದಕವನ್ನು ಗೆದ್ದಾಗ ಎಲ್ಲಾ ಭಾರತೀಯರು ಹೆಮ್ಮೆಪಡಬಹುದಾದರೆ, ‘ಕೆಲವು’ ಪುರುಷರು ಅತ್ಯಾಚಾರ ಮಾಡಿದಾಗ ಎಲ್ಲಾ ಭಾರತೀಯರು ನಾಚಿಕೆಪಡಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಪತಿ ಇರುವಾಗಲೇ ಸ್ಪೇನ್‌ ಮಹಿಳೆಯ ಮೇಲೆ ಜಾರ್ಖಂಡ್‌ನಲ್ಲಿ 7 ಮಂದಿಯಿಂದ ಗ್ಯಾಂಗ್‌ರೇಪ್‌

ನಟರಾದ ದುಲ್ಕರ್ ಸಲ್ಮಾನ್ ಮತ್ತು ರಿಚಾ ಚಡ್ಡಾ ಕೂಡ ಸಾಮೂಹಿಕ ಅತ್ಯಾಚಾರದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಪೇನ್‌ನ ಮಹಿಳೆ ಕಳೆದ ಶುಕ್ರವಾರ ಹನ್ಸ್‌ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‌ನಲ್ಲಿ ತನ್ನ ಪತಿಯೊಂದಿಗೆ ತಾತ್ಕಾಲಿಕ ಟೆಂಟ್‌ನಲ್ಲಿ ಇದ್ದಳು. ಈ ವೇಳೆ ಆಕೆ ಮೇಲೆ ಕೆಲ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ದಂಪತಿ ಬಾಂಗ್ಲಾದೇಶದಿಂದ ಎರಡು ಬೈಕ್‌ಗಳಲ್ಲಿ ದುಮ್ಕಾ ತಲುಪಿ ಬಿಹಾರ ಮತ್ತು ನಂತರ ನೇಪಾಳಕ್ಕೆ ತೆರಳುತ್ತಿದ್ದರು.

ಭಾರತದ ಜನರು ಒಳ್ಳೆಯವರು. ನಾನು ಜನರನ್ನು ದೂಷಿಸುವುದಿಲ್ಲ, ಆದರೆ ನಾನು ಅಪರಾಧಿಗಳನ್ನು ದೂಷಿಸುತ್ತೇನೆ. ಭಾರತದ ಜನರು ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ. ನನ್ನೊಂದಿಗೆ ತುಂಬಾ ಕರುಣಾಮಯಿಯಾಗಿದ್ದಾರೆ ಎಂದು 28 ವರ್ಷದ ಮಹಿಳೆ ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆ

Share This Article