ಮ್ಯಾಡ್ರಿಡ್: ಸ್ಪೇನ್ ದೇಶದ ಫುಟ್ಬಾಲ್ ತಂಡವೊಂದರ ತರಬೇತುದಾರ ಫ್ರಾನ್ಸಿಸ್ಕೊ ಗಾರ್ಸಿಯಾ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.
21 ವರ್ಷದ ಫ್ರಾನ್ಸಿಸ್ಕೊ ಗಾರ್ಸಿಯಾ ಅಥ್ಲೆಟಿಕೊ ಪೋರ್ಟಾಡಾ ಕ್ಲಬ್‍ನ ಕೋಚ್ ಆಗಿದ್ದರು. ಗಾರ್ಸಿಯಾ ಅವರ ನಿಧನದ ಬಗ್ಗೆ ಅಥ್ಲೆಟಿಕೊ ಪೋರ್ಟಾಡಾ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ನೀಡಿದೆ.
Advertisement
https://twitter.com/FutbolBible/status/1239613119858606081
Advertisement
ಗಾರ್ಸಿಯಾ ಅವರು ಅಥ್ಲೆಟಿಕೊದ ಯುವ ತಂಡದ ಮುಖ್ಯ ಕೋಚ್ ಆಗಿದ್ದರು. ಕೆಲವು ದಿನಗಳ ಹಿಂದೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದರೆ ಅವರು ಮೃತಪಟ್ಟಿದ್ದಾರೆ. ಅವರಿಲ್ಲದೆ ನಾವು ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ಪೋರ್ಟಾಡಾ ಕ್ಲಬ್ ದುಃಖ ವ್ಯಕ್ತಪಡಿಸಿದೆ.
Advertisement
ತರಬೇತುದಾರ, ವ್ಯವಸ್ಥಾಪಕರ ಉಭಯ ಜವಾಬ್ದಾರಿ:
ಗಾರ್ಸಿಯಾ ಅವರು ಸ್ಪೇನ್‍ನ ಪ್ರತಿಭಾವಂತ ಆಟಗಾರರಾರಗಿ ಗುರುತಿಸಿಕೊಂಡಿದ್ದರು. ಅಥ್ಲೆಟಿಕೊ ಪೋರ್ಡಾಟಾ ಕ್ಲಬ್‍ನಲ್ಲಿ ತರಬೇತಿಯ ಜೊತೆಗೆ ವ್ಯವಸ್ಥಾಪಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಕೇವಲ 21 ವರ್ಷ ವಯಸ್ಸಿನ ಗಾರ್ಸಿಯಾ ಎರಡೂ ಜವಾಬ್ದಾರಿಗಳಲ್ಲಿ ಬಳಸುತ್ತಿದ್ದ ತಂತ್ರಗಳು ಬಹಳ ಪರಿಣಾಮಕಾರಿ ಆಗಿರುತ್ತಿದ್ದವು.
Advertisement
ಕ್ಲಬ್ ಏನು ಹೇಳಿದೆ?
ಅಥ್ಲೆಟಿಕೊ ಪೋರ್ಡಾಟಾ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಗಾರ್ಸಿಯಾ ನಿಧನವನ್ನು ಬಹಿರಂಗಪಡಿಸಲಾಗಿದೆ. ‘ಫ್ರಾನ್ಸಿಸ್ಕೊ ಗ್ರಾಸಿಯಾ ಅವರ ನಿಧನಕ್ಕೆ ನಾವು ಶೋಕಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ಗಾರ್ಸಿಯಾ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಕ್ಲಬ್ ಸಂತಾಪ ಸೂಚಿಸಿದೆ. ಗಾರ್ಸಿಯಾ ಇಲ್ಲದೆ ನಾವು ಏನೂ ಅಲ್ಲ. ಅವರಿಲ್ಲದೆ ನಾವು ಏನು ಮಾಡಬಹುದು? ನೀವು ಇಲ್ಲದೆ ನಮ್ಮ ಪ್ರಯಾಣವು ಕಷ್ಟಕರವಾಗಿರುತ್ತದೆ ಎಂದು ನಮಗೆ ತಿಳಿದಿದೆ. ಆದರೆ ನಿಮಗಾಗಿ ನಾವು ಶ್ರಮಿಸುತ್ತೇವೆ. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಜೀವಂತವಾಗಿರುತ್ತೀರಿ. ಬೈ ಎಂದು’ ಬರೆಯಲಾಗಿದೆ.
ಆದರೆ ಕೆಲವು ಮಾಧ್ಯಮ ವರದಿಯ ಪ್ರಕಾರ, ಗಾರ್ಸಿಯಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೀಗಾಗಿ ಕ್ಯಾನ್ಸರ್ ನಿಂದಲೇ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಮಂಗಳವಾರ ಬೆಳಗ್ಗೆ ವೇಳೆಗೆ ಸ್ಪೇನ್‍ನಲ್ಲಿ ಒಟ್ಟು 9,942 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ 342 ಜನರು ಸಾವನ್ನಪ್ಪಿದ್ದಾರೆ. ಚಿಕಿತ್ಸೆಯ ನಂತರ 532 ಜನರು ಚೇತರಿಸಿಕೊಂಡಿದ್ದಾರೆ.
https://www.instagram.com/p/B9xFHiBqYQx/