ನಟಿ ಹಾಗೂ ನಿರ್ಮಾಪಕಿಯೂ ಆಗಿದ್ದರು ಸ್ಪಂದನಾ

Public TV
1 Min Read
spandana vijay raghavendra 2

ತೀವ್ರ ಹೃದಯಾಘಾತದಿಂದ ನಿಧನರಾಗಿರುವ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಟಿ ಹಾಗೂ ನಿರ್ಮಾಪಕಿಯೂ ಆಗಿ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡಿದ್ದ ಅಪೂರ್ವ ಸಿನಿಮಾದಲ್ಲಿ ಸ್ಪಂದನಾ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Vijay Raghavendra 1

ಜೊತೆಗೆ ಪತಿ ವಿಜಯ ರಾಘವೇಂದ್ರ ನಟಿಸಿದ್ದ ‘ಕಿಸ್ಮತ್’ ಚಿತ್ರಕ್ಕೆ ಸ್ಪಂದನಾ ನಿರ್ಮಾಪಕಿ. 2018ರಲ್ಲಿ ತೆರೆ ಕಂಡಿದ್ದ ಈ ಸಿನಿಮಾಗೆ ಸ್ಪಂದನಾ ಹಣ ಹೂಡಿದ್ದರು. ಪತಿಗಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ನಟನೆಯನ್ನು ವೃತ್ತಿಯಾಗಿ ಸ್ವೀಕಾರ ಮಾಡದೇ ಇದ್ದರೂ, ಕಲಾವಿದರಿಗೆ ಸ್ಪಂದನಾ ಸಾಕಷ್ಟು ಗೌರವವನ್ನು ನೀಡುತ್ತಿದ್ದರು. ಇದನ್ನೂ ಓದಿ:ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

Vijay Raghavendra 2

ಸ್ಪಂದನಾ ಅಸಿಸ್ಟೆಂಟ್ ಪೊಲೀಸ್ ಕಮಿಷ್ನರ್ ಬಿ.ಕೆ. ಶಿವರಾಮ್ ಅವರ ಮಗಳು. ಆನಂತರ ವಿಜಯ ರಾಘವೇಂದ್ರ ಅವರನ್ನು ಪ್ರೀತಿಸಿ ಆಗಸ್ಟ್ 26, 2007ರಲ್ಲಿ ಮದುವೆಯಾಗಿದ್ದರು. ಇದೊಂದು ಅಪರೂಪದ ಜೋಡಿ ಎಂದೇ ಬಣ್ಣಿಸಲಾಗುತ್ತಿತ್ತು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೆಂಡತಿಯನ್ನು ಸಾಕಷ್ಟು ಕೊಂಡಾಡಿದ್ದರು ವಿಜಯ ರಾಘವೇಂದ್ರ. ತಮ್ಮ ಪ್ರೀತಿಯ ದಿನಗಳನ್ನೂ ಅವರು ಮೆಲುಕು ಹಾಕಿದ್ದರು.

 

ಸ್ಪಂದನಾ ಮತ್ತು ವಿಜಯ ರಾಘವೇಂದ್ರ ದಂಪತಿಗೆ ಮುದ್ದಾದ ಒಬ್ಬ ಮಗನಿದ್ದಾನೆ. ಅವನಿಗೆ ಅಭಿಮಾನಿದಂದಲೇ ಶೌರ್ಯ ಎಂದು ಹೆಸರಿಟ್ಟಿದ್ದರು ದಂಪತಿ. ಶೌರ್ಯ ಇದೀಗ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

Web Stories

Share This Article