ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅವರು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಈ ಆಘಾತಕಾರಿ ಘಟನೆ ನಡೆಯುವ 2 ತಿಂಗಳ ಮುಂಚೆ ಬೆಂಗಳೂರಿನ ಸಹಕಾರ ನಗರದ ಜಿಮ್‌ಗೆ ಜಾಯಿನ್ ಆಗಿದ್ದರು. ಈ ಬಗ್ಗೆ ಸ್ಪಂದನಾ ಜಿಮ್ ಟ್ರೈನರ್ ನರಸಿಂಹ ಅವರು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಹರಿಶ್ಚಂದ್ರ ಘಾಟ್‌ನಲ್ಲಿ ಸಂಜೆ 4 ಗಂಟೆಗೆ ಸ್ಪಂದನಾ ಅಂತ್ಯಸಂಸ್ಕಾರ
ಸ್ಪಂದನಾ ಅವರು 2 ತಿಂಗಳ ಹಿಂದೆಯಷ್ಟೇ ಜಿಮ್‌ಗೆ ಸೇರಿದ್ದರು. ಅವರ ಪರ್ಸನಲ್ ಜಿಮ್ ಟ್ರೈನರ್ ಆಗಿದ್ದ ನರಸಿಂಹ ಅವರು ಸ್ಪಂದನಾ ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸ್ಪಂದನಾ ಅವರು ಜಿಮ್‌ಗೆ ಜಾಯಿನ್ ಆಗುವ ಮುನ್ನವೇ ಅವರಿಗೆ ಲೋ ಬಿಪಿ ಇತ್ತು ಎಂಬುದಾಗಿ ಜಿಮ್ ಟ್ರೈನರ್ ನರಸಿಂಹ ಹೇಳಿದ್ದಾರೆ. ಹಾಗಾಗಿ ಅವರ ಹೆಲ್ತ್ ಇಶ್ಯೂ ನೋಡಿಕೊಂಡೆ ಟ್ರೈನಿಂಗ್ ನೀಡುತ್ತಿದ್ದೆ ಎಂದು ಜಿಮ್ ಟ್ರೈನರ್ (Jim Trainer) ನರಸಿಂಹಮೂರ್ತಿ ಮಾತನಾಡಿದ್ದಾರೆ.
16 ಕೆಜಿ ತೂಕ ಇಳಿಸಿಕೊಂಡಿದ್ದ ಸ್ಪಂದನಾ ಫಿಟ್ ಆಗಲಿಕ್ಕೆ ಜಿಮ್‌ಗೆ ಜಾಯಿನ್ ಆದರು. ಎರಡು ತಿಂಗಳ ಹಿಂದೆ ಜಾಯಿನ್ ಆಗಿ 15 ದಿನ ಮಾತ್ರ ಜಿಮ್‌ಗೆ ಬಂದಿದ್ದರು. ಜಿಮ್‌ಗೆ ಜಾಯಿನ್ ಆಗೋಕು ಮುಂಚೆ ಕೆಲವೊಂದು ಮಾಹಿತಿಯನ್ನ ತೆಗೆದುಕೊಳ್ಳುತ್ತೇವೆ. ಈ ಮೊದಲು ವರ್ಕೌಟ್ ಎಲ್ಲಿ ಮಾಡ್ತಾ ಇದ್ರು, ಅಲ್ಲಿ ಬಿಟ್ಟು ಎಷ್ಟು ದಿನ ಆಯ್ತು ಅಂತಾ ಮಾಹಿತಿ ತೆಗೆದುಕೊಳ್ಳುತ್ತೇವೆ. ಆರೋಗ್ಯದ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇವೆ. ಏನಾದ್ರು ಆರೋಗ್ಯ ಸಮಸ್ಯೆ ಇದೆಯಾ, ಏನಾದ್ರು ಇಂಜುರಿಸ್ ಇತ್ತಾ ಎಂಬ ಮಾಹಿತಿ ಪಡೆದುಕೊಳ್ಳುತ್ತೇವೆ.
ನನಗೆ ಲೋ ಬಿಪಿ ಇದೆ ಅಂತಾ ಸ್ಪಂದನಾ ಹೇಳಿದ್ದರು. ವಿಜಯ್ ರಾಘವೇಂದ್ರ ದಂಪತಿ ಇಬ್ಬರು ನಮ್ಮ ಜಿಮ್‌ಗೆ ಬರ್ತಾ ಇದ್ದರು. ಇಬ್ಬರು ಜೊತೆಯಲ್ಲೇ ವರ್ಕೌಟ್ ಮಾಡ್ತಾ ಇದ್ದರು. ನಮ್ಮ ಜಿಮ್‌ಗೆ ಬರೋಕು ಮುಂಚೆ ಅವರು ಯಾವ ಜಿಮ್‌ಗೆ ಹೋಗಿದ್ರು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ 16 ಕೆಜಿ ಸಣ್ಣ ಆಗಿದ್ರು. ಸಣ್ಣ ಆದ ಮೇಲೆ ಸ್ಕಿನ್ ಲೂಸ್ ಇತ್ತು ಟೈಟ್ ಆಗಬೇಕು ಅಂತಾ ವರ್ಕೌಟ್ ಮಾಡ್ತಾ ಇದ್ದರು. ಲೋ ಬಿಪಿ ಇದೆ ಅಂತಾ ಗೊತ್ತಾದ ಮೇಲೆ ಯಾವುದೇ ವರ್ಕೌಟ್ ಮಾಡಿಸೋಕೆ ಪ್ಲ್ಯಾನ್ ಮಾಡಿರಲಿಲ್ಲ. ವಿಜಯ್ ರಾಘವೇಂದ್ರ ಸರ್, ಸ್ಪಂದನಾ ಮೇಡಂ ಪಿಟಿ ಸ್ಟಾರ್ಟ್ ಮಾಡಿಸಿದ್ರು. ನಾವು ಪಿಟಿ ಸ್ಟಾರ್ಟ್ ಮಾಡಿಸೋಣ ಅಂತಾ ಪ್ಲ್ಯಾನ್ ಮಾಡಿದ್ವಿ. ಅಷ್ಟರಲ್ಲಿ ಟ್ರಿಪ್ ಇದೆ ಮುಗಿಸಿಕೊಂಡು ಬರುತ್ತೇವೆ ಅಂತಾ ಸ್ಪಂದನಾ ಹೇಳಿದ್ದರು. ಲಾಸ್ಟ್ 15 ದಿನದ ಹಿಂದೆ ಅಷ್ಟೇ ಜಿಮ್‌ಗೆ ಬಂದಿದ್ರು ಆಮೇಲೆ ಬಂದಿರಲಿಲ್ಲ. ಸಡನ್ ಆಗಿ ಈ ರೀತಿ ಆಗೋದಕ್ಕೆ ಕಾರಣ ಏನು ಗೊತ್ತಿಲ್ಲ. ಅವರ ಲೈಫ್ ಸ್ಟೈಲ್ ನಮಗೆ ಗೊತ್ತಿಲ್ಲ. ಅವರ ಕುಟುಂಬಕ್ಕೆ ದುಃಖವನ್ನ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಜಿಮ್ ಟ್ರೈನರ್ ನರಸಿಂಹ ಮಾತನಾಡಿದ್ದಾರೆ.