ಈ ಚಿಕ್ಕ ವಯಸ್ಸಿನಲ್ಲಿ ಸ್ಪಂದನಾಗೆ ಹೀಗೆ ಆಗಬಾರದಿತ್ತು. ವಿಧಿಯ ಲೀಲೆ ಇದು, ನನಗೆ ಏನೋ ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ನಟ ವಿನೋದ್ ರಾಜ್ (Vinod Raj) ಭಾವುಕರಾಗಿದ್ದಾರೆ. ಇದನ್ನೂ ಓದಿ:ಸ್ಪಂದನಾ ಅಂತಿಮ ದರ್ಶನ: ಗಳಗಳನೆ ಅತ್ತ ಅಶ್ವಿನಿ ಪುನೀತ್‌ರಾಜ್‌ಕುಮಾರ್
ಸ್ಪಂದನಾ (Spandana) ಅಂತಿಮ ದರ್ಶನ ಪಡೆದ ವಿನೋದ್ ರಾಜ್ (Vinod Raj) ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಕಾಲಿಕ ಮರಣದ ಬಗ್ಗೆ ನಾವು ಏನೂ ಮಾತನಾಡೋಕೆ ಆಗಲ್ಲ. ವಿಜಯ ರಾಘವೇಂದ್ರ ನೊಂದಿರೋದನ್ನ ನೋಡಿದಾಗ ಅವರಿಗೆ ದೇವರು ಅಪಾರವಾದ ಶಕ್ತಿ ಕೊಟ್ಟು ಕಾಪಾಡಲಿ. ನಾವು ಎಷ್ಟೇ ಧೈರ್ಯ ಹೇಳಿದ್ರು ಸಾಲಲ್ಲ. ಅವರೇ ಅವರ ಗಾಯವನ್ನ ಸರಿ ಮಾಡಿಕೊಳ್ಳಬೇಕಾಗುತ್ತದೆ.
ಯಾರ ಮಾತಿನಿಂದಲೂ ಆರುವಂತಹ ನೋವಲ್ಲ ಅದು. ವಿಧಿ ಆಟನೋ ದೇವರೋ ಸ್ಪಂದನಾ ಸ್ಥಿತಿ ನೋಡಿದ್ರೆ ಏನು ಹೇಳೋಕೆ ಆಗುತ್ತಿಲ್ಲ. ವಿಚಿತ್ರ ಇದು ನಮಗೆ ತಲೆ ಕೆಟ್ಟು ಹೋಗುತ್ತಿದೆ. ಈಗ ನಾನು ಮತ್ತು ಅಮ್ಮಾ ಕೂಡ ಟೆಸ್ಟ್ ಮಾಡಿಕೊಂಡಿದ್ವಿ. ನಾನು ಹೋದರೆ ಕೂಡ ನನ್ನ ತಾಯಿನ ನೋಡಿಕೊಳ್ಳೋಕೆ ಯಾರು ಇಲ್ಲ. ದೇವರನ್ನ ಯಾವ ರೀತಿ ಕೈ ಮುಗಿಬೇಕು ಅಂತಾ ನಮಗೆ ಗೊತ್ತಾಗುತ್ತಿಲ್ಲ. ದೇವರಿಗೆ ಕನ್ನಡದವರ ಮೇಲೆ ಕೋಪ ಬಂದಿದ್ಯಾ ಅಂತಾ ನಮಗೆ ಅರ್ಥ ಆಗುತ್ತಿಲ್ಲ. ದೇವರನ್ನ ಪೂಜೆ ಮಾಡಿದಕ್ಕೆ ಈ ಪ್ರತಿಫಲ ಕೊಟ್ರಾ ತಿಳಿಯುತ್ತಿಲ್ಲ.
ಅಪ್ಪು ನಿಧನರಾಗಿ 2 ವರ್ಷ ಆಯ್ತು. ಅವರ ಕುಟುಂಬದಲ್ಲಿ ಅವರ ಜನ್ಮ ಇರೋವರೆಗೂ ಅಪ್ಪು ಕಳೆದುಕೊಂಡ ನೋವು ಮರೆಯೋಕೆ ಆಗಲ್ಲ. ಅವರಿಗೆ ದೈವಿಕ ಕಳೆಯಿತ್ತು ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ.
ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ (Vijay Raghavendra) ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.