ಹೋದವರು ಹೊರಟು ಹೋಗುತ್ತಾರೆ. ಆದರೆ ಇರೋರಿಗೆ ಕಷ್ಟ ನೋಡಿ ಎಂದು ನಟ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರು ಭಾವುಕರಾಗಿದ್ದಾರೆ. ಸ್ಪಂದನಾ (Spandana) ನಿಧನನ ಬಗ್ಗೆ ನಟ ಸಂತಾಪ ಸೂಚಿಸಿದ್ದಾರೆ.
Advertisement
ವಿಜಯ್ (Vijay Raghavendra) ಪತ್ನಿ ಸ್ಪಂದನಾ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ರಾಘವೇಂದ್ರ ರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದರು. ಹೋದವರು ಹೊರಟು ಹೋಗುತ್ತಾರೆ ಆದರೆ ಬದುಕುವವರಿಗೆ ಕಷ್ಟ ನೋಡಿ. ಅವರ ಕುಟುಂಬಕ್ಕೆ ಆಗಿದೆಲ್ಲ ಮರೆತು ಬಿಡಿ ಎಂದು ಹೇಳೋಕೆ ಆಗುತ್ತಾ? ಕೆಲವು ಸನ್ನಿವೇಶದಲ್ಲಿ ಏನು ಮಾಡಬೇಕು ಎಂಬುದು ತೋಚುವುದಿಲ್ಲ. ಕಡೆಯದಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳಬೇಕು.
Advertisement
Advertisement
ಈ ಪ್ರಪಂಚದಲ್ಲಿ ಈ ತರಹ ನಡೆಯುತ್ತದೆ. ಅವರು ನಮ್ಮ ಹತ್ತಿರದವರು ಆದಾಗ ನಮಗೆ ಕಷ್ಟವಾಗುತ್ತದೆ. ಪ್ರಪಂಚದಲ್ಲಿ ಎಲ್ಲಾ ವಯಸ್ಸಿನವರು ತೀರಿ ಹೋಗುತ್ತಾರೆ. ನಮ್ಮ ಮನೆಯಲ್ಲೇ ಹೀಗೆ ಆದಾಗ ಆ ಸಂಕಟ ತಡೆದುಕೊಳ್ಳೋಕೆ ಆಗೋದಿಲ್ಲ. ಅಪ್ಪು, ರಾಘು ಎಲ್ಲಾ ನಮ್ಮ ಜೊತೆ ನಮ್ಮ ಮನೆಯಲ್ಲಿ ಬೆಳೆದವರು. ಚಿಕ್ಕವಯಸ್ಸಿಗೆ ಸ್ಪಂದನಾ ಹೋಗಿದ್ದಾರೆ ಎಂದು ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ರಾಘುನ ನೋಡೋಕೆ ತುಂಬಾ ಕಷ್ಟ ಆಗುತ್ತಿದೆ. ನನ್ನ ಹೆಸರೇ ಅವನಿಗೆ ಇದೆ. ನಾನು ದೊಡ್ಡ ರಾಘು, ಅವನಿಗೆ ಚಿಕ್ಕ ರಾಘು ಎಂದು ಕರೆಯುತ್ತಾರೆ. ಆಗಿದ್ದು ಆಯ್ತು, ಮರೆತು ಬಿಡಪ್ಪಾ ಅಂತಾ ರಾಘುಗೆ ಹೇಳೋಕೆ ಆಗುತ್ತಾ? ನಮಗೇನು ತೋಚುತ್ತಿಲ್ಲ ಎಂದು ರಾಘವೇಂದ್ರ ರಾಜ್‌ಕುಮಾರ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ರಾಘು- ಸ್ಪಂದನಾ ಜೋಡಿ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ- ಸುಧಾರಾಣಿ
Advertisement
ಬ್ಯಾಂಕಾಕ್‌ಗೆ (Bankok) ತೆರಳಿದ್ದಾಗ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ. ಮಂಗಳವಾರ ರಾತ್ರಿ ಬ್ಯಾಂಕಾಕ್‌ನಿಂದ ಕಾರ್ಗೋ ವಿಮಾನದಲ್ಲಿ ತಂದ ಮೃತದೇಹವನ್ನ ಸುಮಾರು 30 ನಿಮಿಷಗಳ ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.