ದೊಡ್ಮನೆಯಿಂದ ಈ ಬಾರಿ ಯಾರು ಔಟ್ ಆಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಬಿಗ್ ಬಾಸ್ ಮನೆಯಿಂದ ಸ್ಪಂದನಾ ಸೋಮಣ್ಣ (Spandana Somanna) ಔಟ್ ಆಗಿದ್ದಾರೆ.
ಕಳೆದ ವಾರ ಬಿಗ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿತ್ತು. ಅಚ್ಚರಿಯಾಗಿ ಮಾಳು ಮತ್ತೆ ಸೂರಜ್ ಹೊರ ಬಂದಿದ್ದರು. ಈ ವಾರ ಸ್ಪಂದನಾ ಮನೆಯಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 100 ದಿನಗಳ ಸನಿಹದಲ್ಲಿ ಸಾಗುತ್ತಿದ್ದು, ಇನ್ನೆರಡು ವಾರಗಳಲ್ಲಿ ಶೋಗೆ ತೆರೆ ಬೀಳಲಿದೆ. ಹೀಗಾಗಿ ನಿರ್ಣಾಯಕ ಹಂತದಲ್ಲಿ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಈ ವಾರ 5 ಜನರು ನಾಮಿನೇಟ್ ಆಗಿದ್ದರು. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಧನುಶ್ ಅವರನ್ನ ನಾಮಿನೇಟ್ ಮಾಡಲಾಗಿತ್ತು. ಇಷ್ಟು ಜನರ ಪೈಕಿ ಸ್ಪಂದನಾ ಅವರೇ ವೀಕ್ ಸ್ಪರ್ಧಿ ಎಂಬುದು ಹಲವರ ಅಭಿಪ್ರಾಯವಾಗಿತ್ತು.
ಸ್ಪಂದನಾ ಸೋಮಣ್ಣ ಅವರು ಮನೆಯಲ್ಲಿ ಅಡುಗೆ ಕೆಲಸ ಮಾಡೋದಿಲ್ಲ, ಟಾಸ್ಕ್ ಆಡೋದಿಲ್ಲ, ಸ್ಟ್ಯಾಂಡ್ ತಗೊಳೋದಿಲ್ಲ, ಒಟ್ಟಾಗಿ ಕಾಣಿಸಿಕೊಳ್ಳೋದಿಲ್ಲ. ಆದರೂ ಅವರು ಹೇಗೆ ಉಳಿದುಕೊಂಡರು ಎನ್ನೋದು ಮನೆಯ ಸದಸ್ಯರ ಅಭಿಪ್ರಾಯವೂ ಆಗಿತ್ತು. ಅಂದಹಾಗೆ ಕಾವ್ಯ ಶೈವ, ಧನುಷ್ ಗೌಡ ಕೂಡ ಸ್ಪಂದನಾ ಸೋಮಣ್ಣ ಉಳಿದುಕೊಂಡಿದ್ದರ ಬಗ್ಗೆ ಕಾಮಿಡಿ ಮಾಡಿದ್ದರು. ಅದನ್ನು ಕೇಳಿ ಸ್ಪಂದನಾ ಅವರು ಕೂಡ ನಕ್ಕಿದ್ದರು.
ನಟಿ ಸ್ಪಂದನಾ ಸೋಮಣ್ಣ ಮೂಲತಃ ಮೈಸೂರಿನ ಹುಡುಗಿ. ಕನ್ನಡದ ‘ದಿಲ್ ಖುಷ್’ ಹಾಗೂ ‘ಮರೀಚಿ’ ಸಿನಿಮಾಗಳಲ್ಲಿ ಸ್ಪಂದನಾ ಮಿಂಚಿದ್ದಾರೆ. ‘ಕರಿಮಣಿ’ ಧಾರಾವಾಹಿ ನಾಯಕಿಯಾಗಿಯೂ ಶೈನ್ ಅಗಿದ್ದರು.



