ನಟ ವಿಜಯ ರಾಘವೇಂದ್ರ (Vijaya Raghavendra) ಪತ್ನಿ ಸ್ಪಂದನಾ (Spandana) ನಿಧನದ 5ನೇ ದಿನದ ಕಾರ್ಯವನ್ನು ಅವರ ಕುಟುಂಬದವರು ಇಂದು ನೆರವೇರಿಸಲಿದ್ದಾರೆ. ಮಲ್ಲೇಶ್ವರಂನಲ್ಲಿರುವ ಶಿವರಾಮ್ (Shivaram) ಮನೆಯಿಂದ ತೆರಳಲು ಕುಟುಂಬಸ್ಥರ ಸಿದ್ಧತೆ ನಡೆಸಿದ್ದು, ಹರಿಶ್ಚಂದ್ರ ಘಾಟ್ ನಲ್ಲಿರುವ ಅಸ್ಥಿ ಪಡೆದು ಶ್ರೀರಂಗ ಪಟ್ಟಣದಲ್ಲಿ ಕಾರ್ಯ ನೆರವೇರಿಸಲಿದ್ದಾರೆ.
Advertisement
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶ್ರೀರಂಗಪಟ್ಟಣ ತಲುಪಲಿರುವ ಸ್ಪಂದನಾ ಕುಟುಂಬ ಸದಸ್ಯರು, ಅಲ್ಲಿ ಅಸ್ಥಿ ಬಿಡುವ ಕಾರ್ಯವನ್ನು ನೆರವೇರಿಸಲಿದ್ದಾರೆ. ಶಿವರಾಮ್, ಶ್ರೀಮುರಳಿ, ಚಿನ್ನೇಗೌಡ, ವಿಜಯರಾಘವೇಂದ್ರ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಸಿಕ್ಸ್ ಪ್ಯಾಕ್ ಅವತಾರದಲ್ಲಿ ಚಾರ್ಲಿ ಬೆಡಗಿ ಸಂಗೀತಾ
Advertisement
Advertisement
ವಿಜಯ ರಾಘವೇಂದ್ರ ಅವರ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಮನೆಯ ಬೆಳಕು ಸ್ಪಂದನಾ ವಿಜಯ ವಿಧಿವಶರಾಗಿ 5 ದಿನಗಳು ಕಳೆದಿದೆ. ಈಡಿಗ ಪದ್ಧತಿಯಂತೆ 5ನೇ ದಿನದ ಕಾರ್ಯ, ಅಸ್ಥಿ ವಿಸರ್ಜನೆ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ. 11ನೇ ದಿನದ ಕಾರ್ಯ ಸಹ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ.
Advertisement
ಕೆಲ ದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್ಗೆ ತೆರಳಿದ್ದರು. ಆಗಸ್ಟ್ 6ರಂದು ಭಾನುವಾರದಂದು ಹೃದಯಾಘಾತದಿಂದ ಸ್ಪಂದನಾ ವಿಧಿವಶರಾದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್ ನೀಡಿದೆ.
Web Stories