ಮ್ಯಾಡ್ರಿಡ್: ಕಳೆದ ಕೆಲ ದಶಕಗಳಿಂದ ಕಂಡೂಕೇಳರಿಯದ ಪ್ರವಾಹ ವಿಕೋಪಕ್ಕೆ ಸ್ಪೇನ್ ತತ್ತರಿಸಿದೆ. ಅದರಲ್ಲೂ ಪೂರ್ವ ಸ್ಪೇನ್‌ನ ವಾಲೆನ್ಸಿಯಾದಲ್ಲಿ ಭೀಕರ ಪರಿಸ್ಥಿತಿ ಇದೆ. ಪ್ರವಾಹಕ್ಕೆ ಕನಿಷ್ಠ 158 ಮಂದಿ ಬಲಿ ಆಗಿದ್ದಾರೆ.
ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಪ್ರವಾಹದ ತೀವ್ರತೆಗೆ ಸೇತುವೆಯೊಂದು ಕೊಚ್ಚಿಹೋಗಿದೆ. ಪ್ರವಾಹದಲ್ಲಿ ಕೊಚ್ಚಿಹೋಗ್ತಿದ್ದ ಕಾರುಗಳ ಮೇಲೆ ಹತ್ತಿ ಕುಳಿತ ಮಂದಿ ಪ್ರಾಣ ಕಾಪಾಡಿಕೊಳ್ಳಲು ಮಾಡ್ತಿರುವ ಕಸರತ್ತಿನ ದೃಶ್ಯಗಳು ವೈರಲ್ ಆಗಿದೆ.
Advertisement
ರಸ್ತೆಗಳ ಮೇಲೆ ಕಾರುಗಳು ಎಲ್ಲೆಂದರಲ್ಲಿ ಬಿದ್ದಿವೆ. ರಕ್ಷಣಾ ಕಾರ್ಯಕ್ಕೆ ಹವಾಮಾನವೂ ಅನುಕೂಲ ಮಾಡಿಕೊಡ್ತಿಲ್ಲ. 1973ರ ಪ್ರವಾಹದಲ್ಲಿ 150ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದರು.