ಟೆಕ್ಸಾಸ್: ಬಾಹ್ಯಾಕಾಶ ಅಧ್ಯಯನಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಎಲೋನ್ ಮಸ್ಕ್ ಸ್ಪೇಸ್‍ಎಕ್ಸ್ (Space X) ವಿನ್ಯಾಸಗೊಳಿಸಿದ್ದ ಅತ್ಯಂತ ಶಕ್ತಿಶಾಲಿ ರಾಕೆಟ್(Rocket) ಸ್ಟಾರ್‌ಶಿಪ್‌ನ (Starship) ಪರೀಕ್ಷಾರ್ಥ ಹಾರಾಟದ ವೇಳೆ ಗುರುವಾರ ಸ್ಫೋಟಗೊಂಡಿದೆ.
Starship Super Heavy has experienced an anomaly before stage separation! ???? pic.twitter.com/MVw0bonkTi
— Primal Space (@thePrimalSpace) April 20, 2023
Advertisement
ಟೆಕ್ಸಾಸ್‍ನ (Texas) ಬೊಕಾ ಚಿಕಾದಲ್ಲಿರುವ (Boca Chica) ಸ್ಪೇಸ್‍ಎಕ್ಸ್ ಬಾಹ್ಯಾಕಾಶ ಕೇಂದ್ರದಿಂದ ಸ್ಟಾರ್‌ಶಿಪ್‌ನ ಮೊದಲ ಪರೀಕ್ಷಾರ್ಥ ಹಾರಾಟ ಬೆಳಗ್ಗೆ 8:33ಕ್ಕೆ ನಡೆಯಿತು. ಇದನ್ನೂ ಓದಿ: ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ
Advertisement
Advertisement
ರಾಕೆಟ್ ಮೂರು ನಿಮಿಷಗಳ ಉಡಾವಣೆಯಾದ ಬಳಿಕ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯನ್ನು ಮೊದಲ ಹಂತದಲ್ಲಿ ಬೇರ್ಪಡಿಸಲು ನಿಗದಿಪಡಿಸಲಾಗಿತ್ತು. ಆದರೆ ಬೇರ್ಪಡಿಸಲು ವಿಫಲವಾಗಿ ರಾಕೆಟ್ ಸ್ಫೋಟಗೊಂಡಿತು ಎಂದು ಸ್ಪೇಸ್‍ಎಕ್ಸ್ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ. ಸ್ಟಾರ್‌ಶಿಪ್‌ನ್ನು ಚಂದ್ರ ಹಾಗೂ ಮಂಗಳನಲ್ಲಿಗೆ (Mars) ಕಳುಹಿಸುವ ಯೋಜನೆ ರೂಪಿಸಲಾಗಿತ್ತು. ಇದನ್ನೂ ಓದಿ: 8 ವರ್ಷಗಳ ಬಳಿಕ ಭಾರತದ ನೆಲಕ್ಕೆ ಕಾಲಿಡುತ್ತಿರುವ ಪಾಕ್ ಸಚಿವ