ಚಿಕ್ಕಮಗಳೂರು: ಅಮೆರಿಕದ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರಿನ ಶಕುಂತಲಾ ಎಂಬ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದ್ದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತಾಗಿದೆ. ಆದರೆ, ಈ ಸಾಧನೆಗೆ ಕಾರಣವಾಗಿರುವುದೂ ಒಬ್ಬ ಮುಸ್ಲಿಂ ಯುವಕ.
ಹೌದು. ಭಾರತ ದೇಶಾದ್ಯಂತ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯ ಬಿತ್ತುವ ಘಟನೆಗಳು ನಡೆಯುತ್ತಿರುವ ನಡುವೆ ಮುಸ್ಲಿಂ ಯುವಕನ ಈ ಸಾಧನೆ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ
Advertisement
Advertisement
ಆಲ್ದೂರಿನ ಶಂಕುತಲಾ ಅಂದರೆ ಈ ಉಪಗ್ರಹದ ಕೇಂದ್ರ ಬಿಂದುವೇ ಆಲ್ದೂರು ಗ್ರಾಮದ ಯುವಕ ಅವೇಜ್ ಅಹಮ್ಮದ್. ಮೂಲತಃ ಚಿಕ್ಕಮಗಳೂರಿನ ಆಲ್ದೂರಿನವರೇ ಆದ ಅವೇಜ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದಾರೆ. ತಂದೆ ನದೀಪ್ ಅಹಮದ್ ತಮ್ಮದೇ ಮೆಡಿಕಲ್ ಸ್ಟೋರ್ ಇಟ್ಟುಕೊಂಡು ಕುಟುಂಬ ನಡೆಸುತ್ತಿದ್ದಾರೆ.
Advertisement
ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಆಲ್ದೂರಿನಲ್ಲೇ ಓದಿದ ಅವೇಜ್, ಚಿಕ್ಕಂದಿನಿಂದಲೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸಿನೊಂದಿಗೇ ಮುನ್ನಡೆಯುತ್ತಿದ್ದರು. ಇಂದು ತನ್ನ ಬಯಕೆಯಂತೆ 24ನೇ ವಯಸ್ಸಿಗೇ ವಿಜ್ಞಾನಿಯಾಗಿ ಜಗತ್ತೇ ಭಾರತದತ್ತ ತಿರುಗಿನೋಡುವಂತೆ ಮಾಡಿದ್ದಾನೆ. ಆನಂತರ ಪಿಲಾನಿ, ಗೋವಾ ಯುನಿವರ್ಸಿಟಿಯಲ್ಲಿ ಓದಿ ಇಂದು ಏರೋಸ್ಪೇಸ್ ಪಿಕ್ಸೆಲ್ ಹೆಸರಿನಲ್ಲಿ ಉಪಗ್ರಹ ತಯಾರಿಕಾ ಸ್ವಂತ ಕಂಪನಿ ಕೂಡ ಆರಂಭಿಸಿದ್ದಾರೆ. ತನ್ನ 24ನೇ ವಯಸ್ಸಿಗೆ ಕಡಲ ದಾಟಿ ಅಮೆರಿಕಾದಲ್ಲಿ ಉಪಗ್ರಹವನ್ನ ಹಾರಿಸಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಇದನ್ನೂ ಓದಿ: 22 ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಿದ ಭಾರತ
Advertisement
ಅಮೆರಿಕದ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಶಕುಂತಲಾ ಎಂಬ ಉಪಗ್ರಹವನ್ನ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ್ದಾರೆ. ಅವೇಜ್ ಅವರ ಈ ಉಪಗ್ರಹವು ಬೇರೆಲ್ಲಾ ಉಪಗ್ರಹಗಳಿಗಿಣದ ಶೇ.50ಕ್ಕೂ ಹೆಚ್ಚು ಡೇಟಾವನ್ನು ಬಿಡುಗಡೆ ಮಾಡುತ್ತದೆ. ಭೂಮಿಯ ಚಲನವಲನದ ಫೊಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತದೆ.
We have liftoff! Pixxel just launched its first satellite to space ???? https://t.co/bRB06TTMXL
— Pixxel (@PixxelSpace) April 1, 2022
ಈ ಮೊದಲು ರಷ್ಯಾದಿಂದ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆದಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದ ಅವೇಜ್ ಅಹಮ್ಮದ್ ತನ್ನ ಕನಸಿನ ಯೋಜನೆಯನ್ನು ಪ್ರಧಾನಿ ಮುಂದೆ ಹೇಳಿಕೊಂಡಿದ್ದರು. ಇವರ ಮಾತನ್ನ ಆಲಿಸಿದ ಪ್ರಧಾನಿ, ಮೊದಲ ಉಪಗ್ರಹವನ್ನ ನಮ್ಮ ದೇಶದ ಬಾಹ್ಯಾಕಾಶ ಉಡಾವಣೆ ಕೇಂದ್ರವಾಗಿರುವ ಇಸ್ರೋದಿಂದಲೇ ಹಾರಿಸುವಂತೆ ಸಲಹೆ ನೀಡಿದ್ದರು. ಅದರಂತೆಯೇ ಇಸ್ರೋದಿಂದಲೇ ಬಾಹ್ಯಾಕಾಶ ಸೇರಲು ಮೊದಲ ಉಪಗ್ರಹ ರೆಡಿಯಾಗಿತ್ತು. ಆದರೆ ಸಮಯ ಮಾತ್ರ ಇನ್ನೂ ನಿಗದಿಯಾಗಿಲ್ಲ. ಈ ಮಧ್ಯೆ ಅವೇಜ್ ಅಹ್ಮದ್ ಅವರು 2ನೇ ಉಪಗ್ರಹವನ್ನ ಅಮೆರಿಕದಿಂದ ಯಶಸ್ವಿಯಾಗಿ ಉಡಾವಣೆ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಎಡಿಟ್ ಬಟನ್ ಬೇಕಾ? – ಸಮೀಕ್ಷೆ ಆರಂಭಿಸಿದ ಮಸ್ಕ್
24ನೇ ವಯಸ್ಸಿಗೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಈ ಯುವಕನಿಗೆ ಎಲ್ಲೆಡೆ ಪ್ರಶಂಸೆಯ ಮಹಪೂರವೇ ಹರಿದುಬರುತ್ತಿದೆ. ಅವೇಜ್ ಓದಿದ ಶಾಲೆಯ ಶಿಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಭವಿಷ್ಯಕ್ಕೆ ಶುಭ ಕೋರಿದ್ದಾರೆ.