ಕಲಬುರಗಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ 300ಕ್ಕೂ ಅಧಿಕ ರೌಡಿಗಳಿಗೆ ಪೊಲೀಸರು ಬೆವರಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಶಶಿಕುಮಾರ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ಪ್ರಮುಖವಾಗಿ ಈ ಪರೇಡ್ ನಲ್ಲಿ ಉದ್ದುದ್ದ ಕೂದಲು ಬಿಟ್ಟುಕೊಂಡು ಮತ್ತು ಡಿಫರೆಂಟ್ ಆಗಿ ಹೇರ್ ಸ್ಟೈಲ್ ಬಿಟ್ಟು ಜನರಿಗೆ ಭಯ ಉಂಟು ಮಾಡುವ ರೀತಿಯಲ್ಲಿ ತಿರಗಾಡುವ ರೌಡಿಗಳ ಹೇರ್ ಕಟ್ಟಿಂಗ್ ಮಾಡಿಸಲಾಯಿತು.
Advertisement
Advertisement
ಜನರಿಗೆ ಭಯವನ್ನುಂಟು ಮಾಡುವ ಉದ್ದೇಶದಿಂದ ಕೈಯಲ್ಲಿ ಕೊರಳಲ್ಲಿ ಚೈನು ದಾರ ಕಟ್ಟಿಕೊಂಡಿದ್ದನ್ನ ತೆಗೆದುಹಾಕಿದರು. ಪರೇಡ್ ನಲ್ಲಿ ಖುದ್ದು ಎಸ್‍ಪಿ ಅವರೇ ರೌಡಿಗಳಿಗೆ ಸುಡುಬಿಸಿಲಲ್ಲೇ ಸುಮಾರು ಎರಡು ಗಂಟೆಗಳ ಕಾಲ ಟ್ರೀಟ್ಮೆಂಟ್ ಕೊಟ್ಟರು.
Advertisement
Advertisement
ಜಿಲ್ಲೆಯಾದ್ಯಂತ ಒಟ್ಟು 3600 ರೌಡಿಗಳಿದ್ದು, ಅದರಲ್ಲಿ 300 ಕ್ಕೂ ಅಧಿಕ ರೌಡಿಗಳು ಈ ಪರೇಡ್ ನಲ್ಲಿ ಭಾಗವಹಿಸಿದ್ದರು. ಇಪ್ಪತ್ತಕ್ಕೂ ಅಧಿಕ ರೌಡಿಗಳ ಹೇರ್ ಕಟಿಂಗ್ ಮಾಡಿಸಿ ಇನ್ಮುಂದೆ ಯಾರೊಬ್ಬರೂ ಸಹ ಡಿಫರೆಂಟ್ ಆಗಿ ಹೇರ್ ಬಿಟ್ಟುಕೊಂಡು ಅಡ್ಡಾಡುವಂತಿಲ್ಲ. ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿ ಇಂಥವರಿಗೆ ಮತ ಹಾಕಿ ಅಂತಾ ಬೆದರಿಕೆ ಹಾಕದಂತೆ ಎಚ್ಚರಿಕೆಯನ್ನು ನೀಡಲಾಯಿತು.