ಬೆಂಗಳೂರು: ಸಿಐಡಿ ಎಸ್‍ಪಿ ಕುಮಾರಸ್ವಾಮಿಯ ಸಣ್ಣತನದ ರೂಲ್ಸ್ ನಿಂದ ಅಧಿಕಾರಿಗಳಲ್ಲಿ ಅಸಮಾಧಾನವೊಂದು ಭುಗಿಲೆದ್ದಿದೆ.
ಜೆರಾಕ್ಸ್ ಮಿಷಿನ್ ಆನ್ ಮಾಡೋಕೆ ಎಸ್‍ಪಿ ಅನುಮತಿ ಬೇಕು. ಒಂದೇ ಒಂದು ಶೀಟ್ ಜೆರಾಕ್ಸ್ ಮಾಡಿಸಬೇಕು ಅಂದ್ರೂ ಎಸ್ ಪಿ ಆರ್ಡರ್ ಬೇಕಂತೆ. ಸಿಐಡಿಯ ಅಡ್ಮಿನ್ ಎಸ್ ಪಿ ಕುಮಾರಸ್ವಾಮಿ ಸಹಿ ಇಲ್ಲದೇ ಜೆರಾಕ್ಸ್ ಮಾಡಿಸುವಂತಿಲ್ಲ.
Advertisement
ಜೆರಾಕ್ಸ್ ಯಂತ್ರಗಳ ನಿರ್ವಹಣೆಗೆಂದೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದ್ರೆ ಎಸ್ ಪಿ ಕುಮಾರಸ್ವಾಮಿ ಸಹಿ ಮಾಡಿಸಿಕೊಂಡು ಬಂದ್ರೆ ಮಾತ್ರ ಇವರು ಜೆರಾಕ್ಸ್ ಮಾಡಿಕೊಡೋದು. ಒಂದು ವೇಳೆ ಅಡ್ಮಿನ್ ಎಸ್ ಪಿ ರಜೆ ಇದ್ದರೆ, ಅಡ್ಮಿನ್ ಡಿವೈಎಸ್ ಪಿ ಮತ್ತು ಇನ್ಸ್ ಪೆಕ್ಟರ್ ಸಹಿ ಪಡೆದು ಜೆರಾಕ್ಸ್ ಮಾಡಿಸಿಕೊಳ್ಳಬೇಕು.
Advertisement
Advertisement
ಪ್ರತಿದಿನ ಸಾಕಷ್ಟು ಕೇಸ್ ಗಳು ಮತ್ತು ಆರ್ಡರ್ ಗಳು ಸಿಐಡಿಗೆ ಬರುತ್ತೆ. ಆದ್ರೆ ಒಂದು ಪೇಜ್ ಜೆರಾಕ್ಸ್ ಮಾಡಿಸೋಕು ಎಸ್ ಪಿ ಕುಮಾರಸ್ವಾಮಿ ಮುಂದೆ ಅಧಿಕಾರಿಗಳು ಹೋಗಬೇಕು. ಎಲ್ಲಾ ಕೇಸ್ ಗಳಲ್ಲಿ ಪೇಪರ್ ವರ್ಕ್ ಸಾಕಷ್ಟು ಇರೋದ್ರಿಂದ ಜೆರಾಕ್ಸ್ ಗಾಗಿ ಎಸ್ ಪಿ ಮುಂದೆ ನಿಲ್ಲೋದು ಇದೀಗ ಅಧಿಕಾರಿಗಳಲ್ಲಿ ಅಸಮಾಧಾನ ಉಂಟುಮಾಡಿದೆ.
Advertisement
ಜೆರಾಕ್ಸ್ ಮಾಡಿಸಿ ಅಧಿಕಾರಿಗಳೇನು ಮನೆಗೆ ತೆಗೆದುಕೊಂಡು ಹೋಗಲ್ಲ. ಎಸ್ ಪಿ ಕುಮಾರಸ್ವಾಮಿಯರ ಈ ರೂಲ್ಸ್ ನಿಂದ ಸಾಕಷ್ಟು ಅಧಿಕಾಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲಸ ಮಾಡೋದು ಬಿಟ್ಟು ಕೇವಲ ಜೆರಾಕ್ಸ್ ಗಾಗಿ ಎಸ್ ಪಿ ಚೇಂಬರ್ ಬಾಗಿಲು ಕಾಯಬೇಕಾ ಅನ್ನೋ ಆಕ್ರೋಶವನ್ನು ಅಧಿಕಾರಿಗಳು ಹೊರಹಾಕಿದ್ದಾರೆ.