ಕಾರವಾರ: 28 ಜನ ಪ್ರಯಾಣಿಸುತ್ತಿದ್ದ ಲಾರಿಯಲ್ಲಿ ಹಣ್ಣು, ತರಕಾರಿ ತುಂಬಿತ್ತು. ಅಪಘಾತ ಸಂಭವಿಸಿದಾಗ ಹಣ್ಣು, ತರಕಾರಿ ದೇಹದ ಮೇಲೆ ಬಿದ್ದಿತ್ತು. 1 ಗಂಟೆ ಬಳಿಕ ಕ್ರೇನ್ ತಂದು ಲಾರಿ ಮೇಲೆತ್ತಿದಾಗ ಜನ ಇರೋದು ಗೊತ್ತಾಯ್ತು. ಅಷ್ಟರಲ್ಲಾಗಲೇ 9 ಮಂದಿ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ಉತ್ತರಕನ್ನಡ (Uttara Kannada) ಜಿಲ್ಲೆಯ ಎಸ್ಪಿ ನಾರಾಯಣ್ ಯಲ್ಲಾಪುರ ಅಪಘಾತದ (Yellapur Accident) ಕುರಿತು ಮಾಹಿತಿ ನೀಡಿದ್ದಾರೆ.
Advertisement
ಘಟನೆ ಬಳಿಕ ಯಲ್ಲಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಟ್ಟ ಮಂಜು ಇದ್ದ ಕಾರಣ ಅಪಘಾತ ಸಂಭವಿಸಿದೆ. ಮಂಜು ಮುಸುಕಿದ್ದರಿಂದ ಎದುರಿಗೆ ಬರುತಿದ್ದ ವಾಹನಕ್ಕೆ ಸೈಡ್ ಕೊಡಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಲಾರಿ ಪಲ್ಟಿಯಾಗಿದೆ. ವಾಹನದಲ್ಲಿ ಹಣ್ಣು, ತರಕಾರಿಗಳಿತ್ತು, 28 ಜನ ಪ್ರಯಾಣಿಸುತಿದ್ದರು. ಲಾರಿ ಪಲ್ಟಿಯಾದ ಕಾರಣ ಜನರ ಮೇಲೆ ತರಕಾರಿ ಬಿದ್ದು ಉಸಿರುಗಟ್ಟಿ 9 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಲಾರಿ ಅಪಘಾತವಾಗಿ 1 ಗಂಟೆ ನಂತರ ಮಾಹಿತಿ ದೊರೆತಿದೆ. ಅಲ್ಲಿಯವರೆಗೂ ಲಾರಿಯಲ್ಲಿ ಜನರಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ. ಕ್ರೇನ್ ತಂದು ಲಾರಿ ಮೇಲೆತ್ತಿದಾಗ ಜನರಿರುವುದು ಗೊತ್ತಾಯ್ತು. ಆಗಲೇ 9 ಜನ ಸ್ಥಳದಲ್ಲೇ ಸಾವು ಕಂಡಿದ್ದರು. ತಕ್ಷಣ ಉಳಿದವರನ್ನ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರ ಗಾಯವಾದವರನ್ನ ಹುಬ್ಬಳ್ಳಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಒಟ್ಟು 10 ಜನ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆಂದು ಎಸ್ಪಿ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಚುನಾವಣೆ ದಿನದಂದೇ ಮಹಾ ಕುಂಭಮೇಳದಲ್ಲಿ ಮೋದಿ ಪುಣ್ಯಸ್ನಾನ
Advertisement
ಆಸ್ಪತ್ರೆಗೆ ಶಿವರಾಮ್ ಹೆಬ್ಬಾರ್ ಭೇಟಿ:
ಇನ್ನೂ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಘಟನೆಯಲ್ಲಿ ಮೃತದೇಹಳನ್ನ ಆದಷ್ಟು ಶೀಘ್ರವೇ ಮೃತರ ಕುಟುಂಬಗಳಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಯಲ್ಲಾಪುರ ಅಪಘಾತ| ಸಾವಿನ ಸಂಖ್ಯೆ 10ಕ್ಕೆ ಏರಿಕೆ – ಮೃತರು ಯಾರು? ವಯಸ್ಸು ಎಷ್ಟು?
ಏನಿದು ಕೇಸ್?
ಹಣ್ಣು, ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 10 ಜನರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಭಾಗದಲ್ಲಿ ಬೆಳಗಿನ ಜಾವ ನಡೆದಿದೆ. ಹಾವೇರಿಯಿಂದ ಕುಮಟಾದ ಕಡೆ ಹಣ್ಣು-ತರಕಾರಿ ತುಂಬಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಭಾಗಕ್ಕೆ ಬರುತಿದ್ದಂತೆ ಚಾಲಕನ ನಿರ್ಲಕ್ಷ್ಯದಿಂದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಸ್ಥಳದಲ್ಲೇ 9 ಜನರ ಸಾವಾಗಿದ್ದು 16 ಜನ ಗಂಭೀರ ಗಾಯಗೊಂಡಿದ್ದಾರೆ. ಬಳಿಕ ಮತ್ತೋರ್ವ ನಂತರ ಸಾವನ್ನಪ್ಪಿದ್ದಾರೆ.
ಫಯಾಜ್ ಜಮಖಂಡಿ (45), ವಾಸೀಂ ಮುಡಗೇರಿ (35), ಇಜಾಜ್ ಮುಲ್ಲಾ (20), ಸಾದೀಕ್ ಭಾಷ್ (30), ಗುಲಾಮ್ ಹುಸೇನ್ ಜವಳಿ (40), ಇಮ್ತಿಯಾಜ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ (25), ಅಸ್ಲಂ ಬಾಬುಲಿ ಬೆಣ್ಣಿ (24), ಜಲಾಲ್ ತಾರಾ (30) ಮೃತರು. ಇದನ್ನೂ ಓದಿ: ಟರ್ಕಿ ರೆಸಾರ್ಟ್‌ನಲ್ಲಿ ಅಗ್ನಿ ದುರಂತ – ಸಾವಿನ ಸಂಖ್ಯೆ 76ಕ್ಕೆ ಏರಿಕೆ
ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಶವಗಳನ್ನು ಯಲ್ಲಾಪುರ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಗಾಯಗೊಂಡವರು ಹಾಗೂ ಮೃತರಾದವರು ಹಾವೇರಿಯ ಸವಣೂರು ಮೂಲದವರಾಗಿದ್ದು, ಕುಮಟಾದಲ್ಲಿ ನಡೆಯುವ ಸಂತೆಗೆ ಹಣ್ಣು, ತರಕಾರಿ ಒಯ್ಯುತಿದ್ದರು. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.