ಬೆಂಗಳೂರು: ಎಸ್‍ಪಿ ರವಿ.ಡಿ.ಚನ್ನಣ್ಣವರ್ ಅವರು ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣಕ್ಕೆ ದಿಢೀರ್ ಭೇಟಿ ಕೊಟ್ಟು ರಾತ್ರೋರಾತ್ರಿ ಸಿಟಿ ರೌಂಡ್ಸ್ ಹಾಕಿದ್ದಾರೆ.
ರವಿ.ಡಿ.ಚನ್ನಣ್ಣವರ್ ಅವರು ನೆಲಮಂಗಲಕ್ಕೆ ರಾತ್ರಿ ಭೇಟಿ ಕೊಟ್ಟಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಪಾಠ ಮಾಡಿದ್ದಾರೆ. ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಒಂದೆಡೆ ನಿಲ್ಲಿಸಿ ಅವರಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಹಾಕಿಸಿ ನೆಲಮಂಗಲ ಪಟ್ಟಣದಲ್ಲಿ ರೌಂಡ್ಸ್ ಹಾಕಿಸಿದ್ದಾರೆ.
Advertisement
Advertisement
ಚನ್ನಣ್ಣವರ್ ಮೊದಲು ಜೀಪಿನಲ್ಲಿ ಪ್ರಯಾಣ ಮಾಡಿದ್ದರು. ನಂತರ ಜೀಪ್ ಬಿಟ್ಟು ಹೆಲ್ಮೆಟ್ ಹಾಕಿಕೊಂಡು ಸಿಬ್ಬಂದಿ ಜೊತೆ ಬೈಕಿನಲ್ಲಿ ನಗರವನ್ನು ಸುತ್ತಾಡಿದ್ದಾರೆ. ಸುಮಾರು ಒಂದು ಕಿಲೋಮೀಟರ್ ಬೈಕಿನಲ್ಲಿ ಪ್ರಯಾಣ ಮಾಡಿ ನಂತರ ಪೊಲೀಸ್ ಜೀಪ್ ಏರಿದ್ದಾರೆ.
Advertisement
ರವಿ.ಡಿ.ಚನ್ನಣ್ಣವರ್ ಹೊಸ ಟ್ರಾಫಿಕ್ ನಿಮಯದ ಬಂದ ನಂತರ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಿದ್ದರು ಎಂದು ಪರಿಶೀಲಿಸಲು ಸಿಟಿ ರೌಂಡ್ಸ್ ಹಾಕಿದ್ದಾರೆ. ನೆಲಮಂಗಲ ಪಟ್ಟಣದ ಎಲ್ಲಾ ಬಡಾವಣೆಯಲ್ಲೂ ಎಸ್‍ಪಿ ಚನ್ನಣ್ಣವರ್ ರೌಂಡ್ಸ್ ಹಾಕಿದ್ದಾರೆ.