ಲಕ್ನೋ: ವಿಧಾನ ಸಭೆಯ (Vidhan Sabha) ಕಲಾಪದ ವೇಳೆ ಸಮಾಜವಾದಿ ಪಕ್ಷದ (SP) ಶಾಸಕರೊಬ್ಬರು (MLA) ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ (Facebook Live Stream) ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಫೇಸ್‌ಬುಕ್‌ನಲ್ಲಿ ಲೈವ್ ನಡೆಸಿದಕ್ಕಾಗಿ ಶಾಸಕನನ್ನು ವಿಧಾನಸಭಾ ಸ್ಪೀಕರ್ ತಕ್ಷಣವೇ ಅಮಾನತುಗೊಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಸರ್ಧಾನ್‌ನ (ಮೀರತ್) ಎಸ್‌ಪಿ ಶಾಸಕ ಅತುಲ್ ಪ್ರಧಾನ್ (Atul Pradhan) ತಮ್ಮ ಫೇಸ್‌ಬುಕ್ ಖಾತೆಯಿಂದ ಲೈವ್ ನಡೆಸಿದ್ದಾರೆ. ವಿಧಾನಸೌಧದ ಒಳಗಡೆ ಸುಮಾರು 2.22 ನಿಮಿಷದ ವರೆಗೆ ವೀಡಿಯೋ ಲೈವ್ ನಡೆಸಿದ್ದು, ಅವರು ಲೈವ್ ನಡೆಸುತ್ತಿದ್ದ ಫೋನ್ ಯಾರಿಗೂ ಕಾಣಿಸದಂತೆ ಸೊಂಟದ ಮಟ್ಟದಲ್ಲಿ ಹಿಡಿದುಕೊಂಡಿರುವುದು ಕಂಡುಬಂದಿದೆ.
Advertisement
Advertisement
ವರದಿಗಳ ಪ್ರಕಾರ ಕಲಾಪ ನಡೆಯುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ಸದಸ್ಯರು ರಾಮ್‌ಪುರ ಉಪಚುನಾಣೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ನಡವಳಿಕೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪ್ರಧಾನ್ ಫೇಸ್‌ಬುಕ್ ಲೈವ್ ನಡೆಸಿದ್ದಾರೆ. ಈ ವೀಡಿಯೋವನ್ನು 1,400ಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಈ ವಿಚಾರ ಸ್ಪೀಕರ್ ಗಮನಕ್ಕೆ ಬರುತ್ತಿದ್ದಂತೆಯೇ ಪ್ರಧಾನ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: 9,125 ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ
Advertisement
ವಿಧಾನಸಭೆಯ ನಿಯಮಗಳಿಗೆ ವಿರುದ್ಧವಾಗಿ ಫೇಸ್‌ಬುಕ್ ಲೈವ್ ಮಾಡಿದ ಅತುಲ್ ಪ್ರಧಾನ್ ಅವರನ್ನು ತಕ್ಷಣವೇ ಸ್ಪೀಕರ್ ಸತೀಶ್ ಮಹಾನ್ ವಿಧಾನಸೌಧದಿಂದ ಹೊರನಡೆಯುವಂತೆ ಆದೇಶಿಸಿದ್ದಾರೆ. ಸ್ಪೀಕರ್ ಆದೇಶದಂತೆ ಅತುಲ್ ಅಲ್ಲಿಂದ ಹೊರನಡೆದಿದ್ದಾರೆ.
Advertisement
ಬಳಿಕ ತಾವು ಹೊಸ ಸದಸ್ಯರಾಗಿದ್ದು, ವಿಧಾನಸಭೆಯ ನಿಯಮಾವಳಿಗಳ ಬಗ್ಗೆ ಹೆಚ್ಚಿನ ಅರಿವಿಲ್ಲವೆಂದೂ ತಿಳಿಸಿದ್ದಾರೆ. ಸ್ಪೀಕರ್ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕೆಂದು ಅತುಲ್ ಕೇಳಿಕೊಂಡಿದ್ದು, ಇದಾದ 1 ಗಂಟೆಯ ಬಳಿಕ ಅತುಲ್ ಅವರಿಗೆ ಸದನಕ್ಕೆ ಹಾಜರಾಗಲು ಸ್ಪೀಕರ್ ಅನುಮತಿ ನೀಡಿದ್ದಾರೆ. ಇದನ್ನೂ ಓದಿ: ಕೊತ್ತಂಬರಿ ಸೊಪ್ಪಿನ ಹಾರ ಹಾಕಿ ಹೆಚ್‍ಡಿಕೆಯನ್ನು ಬರಮಾಡಿಕೊಂಡ ಗ್ರಾಮಸ್ಥರು