ಬಿಜಾಪುರ್: ಛತ್ತೀಸ್‍ಗಢದಲ್ಲಿ ದಿನೇ ದಿನೇ ಮಾವೋವಾದಿಗಳ ಹಾವಳಿ ಹೆಚ್ಚಾಗುತ್ತಿದ್ದು, ಬಿಜಾಪುರ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ(ಎಸ್‍ಪಿ) ನಾಯಕರೊಬ್ಬರನ್ನು ಅಪಹರಿಸಿ ಹತ್ಯೆಗೈದು ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ.
ಎಸ್‍ಪಿ ನಾಯಕ ಸಂತೋಷ್ ಪೂನಂ ಅವರನ್ನು ನಕ್ಸಲರು ಮಂಗಳವಾರದಂದು ಅಪಹರಿಸಿ ಹತ್ಯೆಗೈದಿದ್ದು, ಇಂದು ಸಂತೋಷ್ ಅವರ ಮೃತದೇಹ ಪತ್ತೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂತೋಷ್ ಪೂನಂ ಸ್ಪರ್ಧಿಸಿ ಸೋಲು ಕಂಡಿದ್ದರು. ಸಂತೋಷ್ ಅವರು ರಾಜಕಾರಣಿ ಮಾತ್ರವಲ್ಲದೆ ಗುತ್ತಿಗೆದಾರರಾಗಿ ಕೂಡ ಆಗಿದ್ದರು. ಹೀಗಾಗಿ ಮಂಗಳವಾರ ಮಾರಿಮಲ್ಲ ಗ್ರಾಮದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯ ಕೆಲಸ ನೋಡಲು ಸಂತೋಷ್ ಅವರು ತೆರೆಳಿದ್ದರು. ಈ ವೇಳೆ ನಕ್ಸಲರು ಅವರನ್ನು ಟಾರ್ಗೆಟ್ ಮಾಡಿ ಅಪಹರಿಸಿದ್ದರು.
Advertisement
Advertisement
ಮರುದಿನ ಬೆಳಗ್ಗೆ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಸಂತೋಷ್ ಅವರ ಮೃತದೇಹ ಪತ್ತೆಯಾಗಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
Advertisement
Chhattisgarh: Samajwadi Party (SP) leader Santosh Punem who was abducted by Naxals yesterday in Bijapur has been found dead today. Santosh had contested the recently concluded assembly elections in Chhattisgarh from Bijapur on SP ticket. pic.twitter.com/psVqqM8h05
— ANI (@ANI) June 19, 2019
Advertisement
ಈ ಹಿಂದೆ ಛತ್ತಿಸ್‍ಗಢದ ದಂತೇವಾಡಾದ ಬಳಿ ಬಿಜೆಪಿ ನಾಯಕರು ತೆರೆಳುತ್ತಿದ್ದ ಬೆಂಗಾವಲು ವಾಹನದ ಮೇಲೆ ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಐವರು ಪೊಲೀಸರು ಸಾವನ್ನಪ್ಪಿದ್ದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]