ಲಕ್ನೋ: 23 ತಿಂಗಳ ಜೈಲುವಾಸದ ಬಳಿಕ ಇಂದು (ಸೆ.23) ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಮ್ ಖಾನ್ (Azam Khan) ಅವರು ಉತ್ತರಪ್ರದೇಶದ (Uttara Pradesh) ಸೀತಾಪುರ (Sitapur) ಜೈಲಿನಿಂದ ಬಿಡುಗಡೆಯಾದರು.
ಸೆ.10ರಂದು ಅಲಹಾಬಾದ್ ಹೈಕೋರ್ಟ್ ಅಜಮ್ ಖಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ನ್ಯಾಯಾಲಯ ವಿಧಿಸಿದ ದಂಡ ಪಾವತಿ ಹಾಗೂ ಇನ್ನಿತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ಹಿನ್ನೆಲೆ ಬಿಡುಗಡೆ ತಡವಾಗಿತ್ತು. ಬಳಿಕ ಇಂದು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡಲಾಯಿತು.ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ – 7 ಮಂದಿ ಬಲಿ
ಇನ್ನೂ ಅಜಮ್ ಖಾನ್ ಬಿಡುಗಡೆ ಹಿನ್ನೆಲೆ ಸೀತಾಪುರ ನಗರದಲ್ಲಿ ಸೆಕ್ಷನ್ 144ರ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹೀಗಾಗಿ ಅಜಮ್ ಖಾನ್ ಬಿಡುಗಡೆ ವೇಳೆ ಬಂದಿದ್ದ ಬೆಂಬಲಿಗರ ಗುಂಪನ್ನು ಹೆಚ್ಚು ಕಾಲ ಜೈಲಿನ ಗೇಟ್ ಬಳಿ ನಿಲ್ಲಲು ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.
ಎಸ್ಪಿ ನಾಯಕ ಅಜಮ್ ಖಾನ್ ಅವರ ವಿರುದ್ಧ ಒಟ್ಟು 104 ಪ್ರಕರಣಗಳಿದ್ದು, ಆ ಪೈಕಿ 12 ಪ್ರಕರಣಗಳಲ್ಲಿ ತೀರ್ಪು ನೀಡಲಾಗಿದೆ. ಇನ್ನೂ 5 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದ್ದು, 7 ಪ್ರಕರಣಗಳು ಖುಲಾಸೆಯಾಗಿವೆ. ಪ್ರಸ್ತುತ 59 ಪ್ರಕರಣಗಳು ಸೆಷನ್ಸ್ ನ್ಯಾಯಾಲಯದಲ್ಲಿ ಹಾಗೂ 19 ಪ್ರಕರಣಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಸದ್ಯ ಹೈಕೋರ್ಟ್‌ನಿಂದ ಜಾಮೀನು ಮಂಜೂರಾದ ಹಿನ್ನೆಲೆ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಇಬ್ಲೂರು ಜಂಕ್ಷನ್ ಟ್ರಾಫಿಕ್ ಸಮಸ್ಯೆ: ಅಜೀಂ ಪ್ರೇಮ್ ಜೀಗೆ ಸಿಎಂ ಪತ್ರ

